Period Pain: ಅಸಹನೀಯ ಮುಟ್ಟಿನ ನೋವಿನಿಂದ ಪರಿಹಾರಕ್ಕಾಗಿ 5 ಪರಿಣಾಮಕಾರಿ ಮನೆಮದ್ದುಗಳಿವು
Home Remedies: ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ವಾಂತಿ, ಮೈಗ್ರೇನ್ ನಂತಹ ಸಮಸ್ಯೆಗಳ ಜೊತೆಗೆ ತೀವ್ರವಾದ ಸೆಳೆತ ಹೆಚ್ಚು ಬಾಧಿಸುತ್ತದೆ. ಇದರಿಂದ ಪರಿಹಾರ ಪಡೆಯಲು ಆಯುರ್ವೇದದ ಕೆಲವು ಮನೆಮದ್ದುಗಳನ್ನು ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ.
Home Remedies: ಋತುಚಕ್ರದ ಸಮಯ ಕೆಲವು ಮಹಿಳೆಯರಿಗೆ ಬಹಳ ಕಷ್ಟಕರ ದಿನಗಳಾಗಿವೆ. ಮುಟ್ಟಿನ ಸಮಯದಲ್ಲಿ ಗರ್ಭಾಶಯವು ಸಂಕುಚಿತಗೊಂಡು ಅದರ ಒಳಪದರವನ್ನು ಕಳೆದುಕೊಳ್ಳುತ್ತದೆ. ನಂತರ ಯೋನಿಯಾ ಮೂಲಕ ರಕ್ತಶ್ರಾವವಾಗಿ ಅದು ಹೊರಹಾಕಲ್ಪಡುತ್ತದೆ. ಈ ಸಮಯದಲ್ಲಿ ಕೆಲವರಿಗೆ ವಾಕರಿಕೆ, ವಾಂತಿ, ಅತಿಯಾದ ಸೆಳೆತದಂತಹ ಸಮಸ್ಯೆಗಳು ಹೆಚ್ಚಾಗಿ ಬಾಧಿಸುತ್ತವೆ.
ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಸೆಳೆತಗಳು ಯಾವುದೇ ರೀತಿಯ ಪ್ರಮುಖ ವೈದ್ಯಕೀಯ ಸಮಸ್ಯೆಗಳನ್ನು ಸೂಚಿಸದಿದ್ದರೂ ಸಹ ಇದು ಕೆಲವು ಮಹಿಳೆಯರಲ್ಲಿ ಅಸಹನೀಯ ನೋವಿಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಆಯುರ್ವೇದದ ಕೆಲವು ಮನೆಮದ್ದುಗಳನ್ನು ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ.
ಮುಟ್ಟಿನ ನೋವಿನಿಂದ ಪರಿಹಾರ ಪಡೆಯಲು ಐದು ನೈಸರ್ಗಿಕ ಮನೆಮದ್ದುಗಳಿವು:
* ಯೋಗಾಭ್ಯಾಸ:
ಉತ್ತಮ ಆರೋಗ್ಯಕ್ಕೆ, ಆರೋಗ್ಯಕರ ದೇಹವನ್ನು ಹೊಂದಲು ಯೋಗ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಯೋಗಾಭ್ಯಾಸ ಮಾಡುವುದರಿಂದ ಸೆಳೆತದಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮುಟ್ಟಿನ ಅವಧಿಯಲ್ಲಿ ಮಗುವಿನ ಭಂಗಿ, ಹಸುವಿನ ಭಂಗಿ ಮತ್ತು ಸುಪೈನ್ ಟ್ವಿಸ್ಟ್ ಸೇರಿದಂತೆ ಕೆಲವು ಯೋಗಾಸನಗಳು ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಶ್ರಾಂತಿಗೊಳಿಸಲು ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ.
ಇದನ್ನೂ ಓದಿ- Health Tips: ವಸಡಿನ ರಕ್ತಸ್ರಾವದ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ
* ಸಾರಭೂತ ತೈಲಗಳಿಂದ ಮಸಾಜ್ ಮಾಡುವುದು:
ಸಂಶೋಧನೆಯ ಪ್ರಕಾರ, ಮುಟ್ಟಿನ ಸಂದರ್ಭದಲ್ಲಿ ವಿಶೇಷವಾಗಿ ಇತರ ಎಣ್ಣೆಗಳೊಂದಿಗೆ ಸಂಯೋಜಿಸಿದ ಸಾರಭೂತ ತೈಲಗಳನ್ನು ಬಳಸಿ ಹೊಟ್ಟೆಯ ಮೇಲೆ ಉಜ್ಜಿದಾಗ ಪಿರಿಯಡ್ ನೋವನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಆಯುರ್ವೇದದ ಪ್ರಕಾಗ ಲವಂಗಡ ಎಣ್ಣೆ, ಲ್ಯಾವೆಂಡರ್, ಗುಲಾಬಿ, ಋಷಿ, ದಾಲ್ಚಿನ್ನಿ ಎಣ್ಣೆಗಳು ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ ಎನ್ನಲಾಗುತ್ತದೆ.
* ಕಡಿಮೆ ಉರಿಯೂತದ ಆಹಾರಗಳು:
ಆಯುರ್ವೇದ ತಜ್ಞರ ಪ್ರಕಾರ, ಮುಟ್ಟಿನ ಸಮಯದಲ್ಲಿ ಮಹಿಳೆಯರ ಡಯಟ್ನಲ್ಲಿ ಕಡಿಮೆ ಉರಿಯೂತದ ಆಹಾರಗಳ ಬಳಕೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಂದರ್ಭದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುವ ಆಹಾರಗಳ ಸೇವನೆ ತುಂಬಾ ಅಗತ್ಯ.
* ಗಿಡಮೂಲಿಕೆ ಚಹಾ:
ಮುಟ್ಟಿನ ಸಮಯದಲ್ಲಿ ಕ್ಯಾಮೊಮೈಲ್ ಅಥವಾ ಪುದೀನಾ ಮುಂತಾದ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾಗಳು ಋತುಚಕ್ರದ ಸೆಳೆತವನ್ನು ಶಮನಗೊಳಿಸಬಲ್ಲ ನೈಸರ್ಗಿಕ ಮನೆಮದ್ದುಗಳು ಎಂದು ಸಾಬೀತುಪಡಿಸಲಿವೆ. ದು ಮುಟ್ಟಿನ ನೋವು ಮತ್ತು ಸ್ನಾಯುವಿನ ಒತ್ತಡವನ್ನು ನಿವಾರಿಸುವಲ್ಲಿ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ
ಇದನ್ನೂ ಓದಿ- ನಿತ್ಯ ೧೧ ನಿಮಿಷ ವಾಕ್ ಮಾಡಿ ಮ್ಯಾಜಿಕ್ ನೋಡಿ
* ಬಿಸಿ ಶಾಖ:
ಮುಟ್ಟಿನ ಸೆಳೆತದ ನೋವನ್ನು ಕಡಿಮೆ ಮಾಡಲು ಬಿಸಿ ಶಾಖ ತುಂಬಾ ಪರಿಣಾಮಕಾರಿ ಆಗಿದೆ. ಈ ಸಮಯದಲ್ಲಿ ಹಾಟ್ ಬ್ಯಾಗ್, ಇಲ್ಲವೇ ಹಾಟ್ ಜೆಲ್ ಬ್ಯಾಗ್ ಬಳಕೆಯೂ ಆಹ್ಲಾದಕರ ಅನುಭವದ ಜೊತೆಗೆ ಸೆಳೆತದಿಂದ ಪರಿಹಾರವನ್ನು ಸಹ ನೀಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.