Flax Seeds Benefits : BP ಸಮಸ್ಯೆ ಇರುವವರು ತಪ್ಪದೆ ಸೇವಿಸಿ ಅಗಸೆ ಬೀಜ! ಇಲ್ಲಿದೆ ಅದರ ಪ್ರಯೋಜನಗಳು!
ಅಗಸೆಬೀಜಗಳಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಿಸುವ ನೈಸರ್ಗಿಕ ಗುಣಗಳನ್ನು ಹೊಂದಿರುತ್ತವೆ
ನವದೆಹಲಿ : ಪ್ರಸ್ತುತ ಜನತೆ ಕೊರೋನಾ ಸೋಂಕಿನ ಅಪಾಯದಲ್ಲಿದ್ದಾರೆ. ಇದರ ಪರಿಣಾಮದಿಂದ ಜನರಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯ ಹೆಚ್ಚಾಗಿ ಕಂಡು ಬರುತ್ತಿವೆ. ಈ ಪರಿಸ್ಥಿತಿಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಅಡುಗೆಮನೆಯಲ್ಲಿ ಸಿಗುವ ವಸ್ತುವಿನಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನೀವು ಹೇಗೆ ನಿವಾರಿಸಬಹುದು ಎಂದು ಇಂದು ನಾವು ನಿಮಗೆ ಹೇಳುತ್ತಿದ್ದೇವೆ.
ಅಧಿಕ ರಕ್ತದೊತ್ತಡ ಎಂದರೇನು?
ಸಾಮಾನ್ಯವಾಗಿ, ವ್ಯಕ್ತಿಯ ರಕ್ತದೊತ್ತಡ 120/80 mm ಗಿಂತ ಕಡಿಮೆಯಿರಬೇಕು. ಆದರೆ ಇಂದಿನ ಒತ್ತಡದ ಜೀವನದಲ್ಲಿ ಅಧಿಕ ರಕ್ತದೊತ್ತಡ(Blood Pressure)ದ ಸಮಸ್ಯೆ ತುಂಬಾ ಹೆಚ್ಚಾಗಿ ಕಂಡುಬರುತ್ತಿವೆ. ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ವಯಸ್ಸಾದವರು ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ, ಯುವಕರು ಸಹ ಅಧಿಕ ರಕ್ತದೊತ್ತಡ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಾಗಿ, ಗಂಭೀರ ಹೃದ್ರೋಗಗಳ ಅಪಾಯಗಳು ಕೂಡ ಕಂಡು ಬರುತ್ತಿವೆ. ಪ್ರತಿವರ್ಷ, ಅಧಿಕ ರಕ್ತದೊತ್ತಡ ಮತ್ತು ಅದರಿಂದ ಉಂಟಾಗುವ ಕಾಯಿಲೆಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಜನರು ಮೃತರಾಗುತ್ತಿದ್ದರೆ.
ಅಗಸೆ ಬೀಜಗಳ ಪ್ರಯೋಜನ :
ಬ್ಲಡ್ ಪ್ರೆಷರ್ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಅಗಸೆಬೀಜ(Flax seeds)ಗಳಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ನೈಸರ್ಗಿಕ ಗುಣಗಳನ್ನು ಹೊಂದಿರುತ್ತವೆ. ಅಗಸೆಬೀಜವು ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್, ಪ್ರೋಟೀನ್, ವಿಟಮಿನ್ ಬಿ 6, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿರುತ್ತದೆ.
ಇದನ್ನೂ ಓದಿ : Cardamom Benefits : ಶ್ವಾಸಕೋಶಕ್ಕೆ ಪ್ರಯೋಜನಕಾರಿ 'ಏಲಕ್ಕಿ' : ಇಲ್ಲಿದೆ ಅದರ ಪ್ರಯೋಜನಗಳು!
ಇದಲ್ಲದೆ ಅಗಸೆಬೀಜದ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್(Cholesterol) ಕೂಡ ಕಡಿಮೆಯಾಗುತ್ತದೆ. ಅಲ್ಲದೆ, ಜೀರ್ಣಕಾರಿ ಶಕ್ತಿಯೂ ಉತ್ತಮವಾಗಿರುತ್ತದೆ. ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳಿಂದಾಗಿ ಅಗಸೆಬೀಜದ ಬೀಜಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಕೂಡ ಕಾಪಾಡಬಹುದು.
ಇದು ನೆನಪಿರಲಿ!
ನಾವು ಮೇಲೆ ಹೇಳಿದಂತೆ ಅಗಸೆಬೀಜದ ಬೀಜಗಳಲ್ಲಿ ಸಾಕಷ್ಟು ಪೋಷಕಾಂಶಗಳು ಕಂಡುಬರುತ್ತವೆ. ಆದ್ರೆ ಇವುಗಳನ್ನ ಒಂದು ದಿನದಲ್ಲಿ 25 ಗ್ರಾಂ ಗಿಂತ ಹೆಚ್ಚು ಸೇವಿಸುವುದರಿಂದ ಹಾನಿ ತಪ್ಪಿದಲ್ಲ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.