Protein Intake During Covid-19 Infection: ಕೊರೊನಾದಿಂದ ಚೇತರಿಸಿಕೊಳ್ಳಲು ಅತ್ಯಾವಶ್ಯಕ Protein, ಶಾಕಾಹಾರಿಗಳು ಈ ಆಹಾರಗಳನ್ನು ಸೇವಿಸಿ

Protein Intake During Covid-19 Infection: ಅರೋಗ್ಯ ತಜ್ಞರು ಹೇಳುವ ಪ್ರಕಾರ, ಕೊವಿಡ್ -19 ಇನ್ಫೆಕ್ಷನ್ (Coronavirus Infection) ನಿಂದ ಉಂಟಾಗಿರುವ ಅಶಕ್ತತೆ, ಶರೀರದ ಹಾನಿಗೊಳಗಾದ ಅಂಗಾಂಶಗಳು ಹಾಗೂ ಸ್ನಾಯು ದೌರ್ಬಲ್ಯವನ್ನು ಸರಿಪಡಿಸಲು ಪ್ರೋಟೀನ್ ಆಗರವಾಗಿರುವ ಡಯಟ್ ತುಂಬಾ ಲಾಭಕಾರಿಯಾಗುವ ಸಾಧ್ಯತೆ ಇದೆ. 

Written by - Nitin Tabib | Last Updated : May 15, 2021, 06:49 PM IST
  • ಕೊರೊನಾ ರೋಗಿಗಳ ಚೇತರಿಕೆಗೆ ಅತ್ಯಾವಶ್ಯಕ ಪ್ರೋಟೀನ್
  • ಪ್ರೋಟೀನ್ ಭರಿತ ಆಹಾರ ಅಶಕ್ತತೆಯನ್ನು ದೂರಗೊಳಿಸುತ್ತದೆ.
  • ಶಾಕಾಹಾರಿ ಜನರು ಈ ಪದಾರ್ಥಗಳಿಂದ ಪ್ರೋಟೀನ್ ಕೊರತೆಯನ್ನು ನೀಗಿಸಬಹುದು.
Protein Intake During Covid-19 Infection: ಕೊರೊನಾದಿಂದ ಚೇತರಿಸಿಕೊಳ್ಳಲು ಅತ್ಯಾವಶ್ಯಕ Protein, ಶಾಕಾಹಾರಿಗಳು ಈ ಆಹಾರಗಳನ್ನು ಸೇವಿಸಿ

ನವದೆಹಲಿ: Protein Intake During Covid-19 Infection - ಕೊರೊನಾ ವೈರಸ್ ಸೋಂಕು (Covid-19 Infection) ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ರೀತಿಯಲ್ಲಿ ಬಾಧಿಸುತ್ತಿದೆ. ಸಾಧಾರಣ ಲಕ್ಷಣಗಳಿರುವ ವ್ಯಕ್ತಿಗಳು ಯಾವುದೇ ರೀತಿಯ ಜಟಿಲತೆ ಇಲ್ಲದೆ ಸುಲಭವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಕೆಲವರು ಮಾತ್ರ ದೀರ್ಘಾವಧಿ ಕೊವಿಡ್ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪೋಷಕ ತತ್ವಗಳಿಂದ ಕೂಡಿದ ಆರೋಗ್ಯಪೂರ್ಣ ಹಾಗೂ ಸಂತುಲಿತ ಆಹಾರ ರೋಗಿಗಳನ್ನು ಕೊರೊನಾ ಸೋಂಕಿನಿಂದ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಶಾಕಾಹಾರಿ ಜನರು ಈ ರೀತಿ ಪ್ರೋಟೀನ್ ಕೊರತೆಯನ್ನು ನೀಗಿಸಿ (Vegetarian Source Of Protein)
ಕೊರೊನಾ ಸೋಂಕಿನ ಹಿನ್ನೆಲೆ ರೋಗಿಗಳಲ್ಲಿ ಪೋಷಕತತ್ವಗಳ ಕೊರತೆ, ತೂಕ ಇಳಿಕೆ, ಆಯಾಸ, ತಲೆ ಸುತ್ತುವಿಕೆ ಹಾಗೂ ಅತ್ಯಧಿಕ ವೀಕ್ ನೆಸ್ ಸಮಸ್ಯೆ ಎದುರಾಗುತ್ತಿದೆ.   ಅರೋಗ್ಯ ತಜ್ಞರು ಹೇಳುವ ಪ್ರಕಾರ, ಕೊವಿಡ್ -19 ಇನ್ಫೆಕ್ಷನ್ ನಿಂದ ಉಂಟಾಗಿರುವ ಅಶಕ್ತತೆ, ಶರೀರದ ಹಾನಿಗೊಳಗಾದ ಅಂಗಾಂಶಗಳು ಹಾಗೂ ಸ್ನಾಯು ದೌರ್ಬಲ್ಯವನ್ನು ಸರಿಪಡಿಸಲು ಪ್ರೋಟೀನ್ ಆಗರವಾಗಿರುವ ಡಯಟ್ (Healthy Diet) ತುಂಬಾ ಲಾಭಕಾರಿಯಾಗುವ ಸಾಧ್ಯತೆ ಇದೆ. ಬಹುತೇಕ ಜನರು ಮೊಟ್ಟೆ, ಚಿಕನ್ ಹಾಗೂ ಸಮುದ್ರದ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ ಎಂದು ಭಾವಿಸುತ್ತಾರೆ. ಹೀಗಿರುವಾಗ ಶಾಕಾಹಾರಿ ಜನರು ಎಲ್ಲಿಗೆ ಹೋಗಬೇಕು. ಹಾಗಾದರೆ ಬನ್ನಿ ಪ್ರೋಟಿನ್ ಆಗರಗಳಿರುವ ಇತರ ಪದಾರ್ಥಗಳು (Protein Rich Food) ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

1. Chia Seeds - ಪ್ರೋಟೀನ್ ಗಳ ಜೊತೆಗೆ ಅತ್ಯಧಿಕ ನಾರಿನಂಶದ ಆಗರವಾಗಿದೆ ಚಿಯಾ ಸೀಡ್ಸ್. 30 ಗ್ರಾಂ ಚಿಯಾ ಸೀಡ್ಸ್ ನಲ್ಲಿ 47 ಗ್ರಾಂ ಪ್ರೋಟೀನ್ ಇರುತ್ತದೆ. ಜೊತೆಗೆ ಐರನ್, ಕ್ಯಾಲ್ಸಿಯಂ , ಒಮೆಗಾ-3 ಫ್ಯಾಟಿ ಆಸಿಡ್ ಗಳಿರುವ ಕಾರಣ ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ಹೀಗಾಗಿ ನಿಮ್ಮ ಬ್ರೇಕ್ ಫಾಸ್ಟ್, ಸ್ಮೂದಿ ಹಾಗೂ ಪುಡಿಂಗ್ ಗಳಲ್ಲಿ ಚಿಯಾ ಬೀಜಗಳನ್ನು ಸೇರಿಸಲು ಮರೆಯದಿರಿ.

2. ಪನೀರ್ - 100 ಗ್ರಾಂ ಪನೀರ್ ನಲ್ಲಿ ಸುಮಾರು 23 ಗ್ರಾಂ ಪ್ರೋಟೀನ್ ಇರುತ್ತದೆ. ಅದರಲ್ಲಿಯೂ ವಿಶೇಷವಾಗಿ ಒಂದು ವೇಳೆ ನೀವು ಮನೆಯಲ್ಲಿಯೇ ಹಾಲನ್ನು ಒಡೆದು ಪನೀರ್ ತಯಾರಿಸಿದರೆ, ಇದು ನಿಮಗೆ ಪ್ರೋಟೀನ್ ನ ಉತ್ತಮ ಸೋರ್ಸ್ ಆಗಲಿದೆ. ಏಕೆಂದರೆ ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಅಥವಾ ಪ್ರಿಸರ್ವೆಟಿವ್ ಇರುವುದಿಲ್ಲ. ಹೀಗಿರುವಾಗ ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಪ್ರೋಟೀನ್ ಕೊರತೆ ನೀಗಿಸಲು ಪನೀರ್ ಸೇವಿಸಬಹುದು.

ಇದನ್ನೂ ಓದಿ- Cardamom Benefits : ಶ್ವಾಸಕೋಶಕ್ಕೆ ಪ್ರಯೋಜನಕಾರಿ 'ಏಲಕ್ಕಿ' : ಇಲ್ಲಿದೆ ಅದರ ಪ್ರಯೋಜನಗಳು!

3.ತೊಗರಿ ಬೆಳೆ - ದಾಲ್ ಅಂದರೆ ತೊಗರಿಬೇಳೆ ಹೇರಳ ಪ್ರಮಾಣದಲ್ಲಿ ಪ್ರೋಟೀನ್ ಹೊಂದಿರುವುದರ ಜೊತೆಗೆ ಇಮ್ಯುನಿಟಿ ಬೂಸ್ಟರ್ ರೀತಿಯಲ್ಲೂ ಕೂಡ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಲಂಚ್ ಹಾಗೂ ಡಿನ್ನರ್ ಎರಡರಲ್ಲಿಯೂ ಕೂಡ ತೊಗರಿಬೇಳೆಯನ್ನು ಬಳಸಬಹುದು. ಇದರ ಜೊತೆಗೆ ನೀವು ಬೆಳೆ ನೀರನ್ನು ಕೂಡ ಸೇವಿಸಬಹುದು. ಇದೂ ಕೂಡ ಸೋಂಕಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಶರೀರಕ್ಕೆ ಶಕ್ತಿ ಒದಗಿಸುವ ಕೆಲಸ ಕೂಡ ಇದು ಮಾಡುತ್ತದೆ. 

ಇದನ್ನೂ ಓದಿ- Mucormycosis Symptoms And Treatment: Black Fungus ಕಾಯಿಲೆ ಹೇಗೆ ಬರುತ್ತದೆ? ಹೇಗೆ ರಕ್ಷಿಸಿಕೊಳ್ಳಬೇಕು? ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?

4. ಬ್ರೋಕೊಲಿ ಹಾಗೂ ಹಸಿರು  ಬಟಾಣಿ - ಬ್ರೋಕೊಲಿ ಹಾಗೂ ಗ್ರೀನ್ ಪೀ ಈ ಎರಡೂ ತರಕಾರಿಗಳಲ್ಲಿ ಕೂಡ ಹೇರಳ ಪ್ರಮಾಣದ ಪ್ರೋಟೀನ್ ಇರುತ್ತದೆ. ಒಂದು ಕಪ್ ಕುಡಿಸಿದ ಹಸಿರು ಬಟಾಣಿಯಲ್ಲಿ ಸುಮಾರು 10ಗ್ರಾಂ ಪ್ರೋಟೀನ್ ಇರುತ್ತದೆ. ಇನ್ನೊಂದೆಡೆ ಒಂದು ಮಧ್ಯಮ ಗಾತ್ರದ ಬ್ರೋಕೊಲಿಯಲ್ಲಿ ಸುಮಾರು 5 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ. ನೀವು ಬ್ರೋಕೊಲಿಯನ್ನು ಊಟದಲ್ಲಿಯೂ ಕೂಡ ಸೇವಿಸಬಹುದು ಅಥವಾ ಇದರ ಸೂಪ್ ತಯಾರಿಸಿ ಕೂಡ ಸೇವಿಸಬಹುದು.

ಇದನ್ನೂ ಓದಿ- ಫಟಾಫಟ್ ಇಮ್ಯೂನಿಟಿಗಾಗಿ ಮನೆಯಲ್ಲೇ ಮಾಡಿ ಪನೀರ್ ಪೆಪ್ಪರ್ ಡ್ರೈ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News