Healthy Heart Tips : ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳ  ಸಾಮಾನ್ಯವಾಗಿವೆ.  ಹೃದಯದ ಆರೋಗ್ಯವನ್ನು ಕಾಪಾಡಲು ಸರಿಯಾದ ಮಾರ್ಗವನ್ನು  ಅನುಸರಿಸಬೇಕು. ಹೆಚ್ಚುತ್ತಿರುವ ಮಾಲಿನ್ಯದಿಂದಲೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ.ಇದಲ್ಲದೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವುದರಿಂದ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೃದಯವನ್ನು ಹೇಗೆ ಆರೋಗ್ಯವಾಗಿರಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ. 


COMMERCIAL BREAK
SCROLL TO CONTINUE READING

ಹೃದಯವನ್ನು ಆರೋಗ್ಯವಾಗಿಡಲು ಈ ಸಲಹೆಗಳನ್ನು ಅನುಸರಿಸಿ :
ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಿ  : 
ಹೃದಯವನ್ನು ಆರೋಗ್ಯವಾಗಿಡಲು ಸಾಕಷ್ಟು ನೀರಿನ ಸೇವನೆ ಅಗತ್ಯ. ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸದೆ ವ್ಯಾಯಾಮ ಮಾಡಿದರೆ ರಕ್ತ ದಪ್ಪಾವಾಗಿ ಕ್ಲಾಟ್ ಸಮಸ್ಯೆ ಎದುರಾಗುತ್ತದೆ. 


ಇದನ್ನೂ ಓದಿ : Weight Loss Tips : ನಿದ್ದೆ ಮಾಡಿ ತೂಕ ಕಳೆದುಕೊಳ್ಳಿ, ಈ ಸುಲಭ ಮಾರ್ಗಗಳನ್ನು ಅನುಸರಿಸಿ!


ಪರೀಕ್ಷೆಗೆ ಒಳಪಡುವುದು : 
30 ವರ್ಷಗಳ ನಂತರ, ಇಡೀ ದೇಹವನ್ನು ವರ್ಷಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ. ಹೀಗೆ ಮಾಡುವುದರಿಂದ ಸಮಯಕ್ಕೆ ಮುಂಚೆಯೇ ರೋಗಗಳನ್ನು ಪತ್ತೆ ಹಚ್ಚಿ ಗುಣಪಡಿಸಬಹುದು.


ಪ್ರತಿದಿನ ವ್ಯಾಯಾಮ  :
ಪ್ರತಿದಿನ 45 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಹೃದ್ರೋಗದ ಹೊರತಾಗಿ, ವ್ಯಾಯಾಮದ ಮೂಲಕ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬೊಜ್ಜು  ಮುಂತಾದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಮತ್ತೊಂದೆಡೆ, ನೀವು ಈಗಾಗಲೇ ಹೃದ್ರೋಗಿಯಾಗಿದ್ದರೆ, ವ್ಯಾಯಾಮ ಮಾಡುವಾಗ, ತೀವ್ರವಾದ ವ್ಯಾಯಾಮ ಮಾಡಬಾರದು ಎನ್ನುವುದು ನೆನಪಿರಲಿ. 


ಇದನ್ನೂ ಓದಿ : ಊಟದ ನಂತರ Lemon Water ಕುಡಿದರೆ ಸಿಗುತ್ತೆ ಈ ಅದ್ಭುತ ಪ್ರಯೋಜನ.!


ಕೊಬ್ಬನ್ನು ಕಡಿಮೆ ಮಾಡಿ : 
ಹೃದಯವನ್ನು ಆರೋಗ್ಯಕರವಾಗಿಡಲು ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬೇಕು. ಟ್ರಾನ್ಸ್ ಫ್ಯಾಟ್ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚಚ್ಚಾಗುತ್ತದೆ. ಆದ್ದರಿಂದ, ಹೃದಯ ಕಾಯಿಲೆಗಳನ್ನು ತಪ್ಪಿಸಬೇಕಾದರೆ, ದೇಹದ ಬೊಜ್ಜು ನಿಯಂತ್ರಣದಲ್ಲಿರಬೇಕು. 



 
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)