preserving vegetables without refrigeration: ಹಣ್ಣುಗಳು ಮತ್ತು ತರಕಾರಿಗಳು ತಾಜಾವಾಗಿದ್ದಾಗ ಯಾವಾಗಲೂ ಉತ್ತಮ ರುಚಿ ಮತ್ತು ಆರೋಗ್ಯಕರವಾಗಿರುತ್ತದೆ. ಆದರೆ ಫ್ರಿಡ್ಜ್ ಗಳ ಸಹಾಯವಿಲ್ಲದೆ, ತುಂಬಾ ದಿನಗಳ ಕಾಲ ಇವುಗಳನ್ನು ತೆಗೆದಿಡಲು ಸಾಧ್ಯವಿಲ್ಲ. ಆದರೆ ಇಂದು ನಾವು ಕೆಲ ಟಿಪ್ಸ್ ಗಳನ್ನು ಹೇಳಲಿದ್ದು, ಈ ಮೂಲಕ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ವಾರಪೂರ್ತಿ ತಾಜಾವಾಗಿ ಸಂಗ್ರಹಿಸಿಡಲು ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Camellia Sinensis Benefits: ನೀವು ಎಂದಾದರು ಕ್ಯಾಮಲಿಯಾ ಸೈನೆನ್ಸಿಸ್ ಟೀ ಟ್ರೈ ಮಾಡಿದ್ದೀರಾ?


ಆವಕಾಡೊ, ಬಾಳೆಹಣ್ಣು, ಕಿವಿ, ಮಾವಿನಹಣ್ಣು, ಪೇರಳೆ, ಪ್ಲಮ್ ನಂತಹ ಅನೇಕ ಹಣ್ಣುಗಳು ಎಥಿಲೀನ್ ಎಂಬ ಅನಿಲವನ್ನು ಹೊಂದಿವೆ. ಈ ಅನಿಲವು ಸೂಕ್ಷ್ಮವಾಗಿರುವ ಆಹಾರವನ್ನು ಬೇಗ ಹಣ್ಣಾಗುವಂತೆ ಮಾಡುತ್ತದೆ. ಆದ್ದರಿಂದ, ಎಥಿಲೀನ್-ಉತ್ಪಾದಿಸುವ ಆಹಾರಗಳನ್ನು ಎಥಿಲೀನ್-ಸೂಕ್ಷ್ಮ ಆಹಾರಗಳಾದ ಸೇಬುಗಳು, ಕೋಸುಗಡ್ಡೆ, ಕ್ಯಾರೆಟ್ಗಳು, ಸೊಪ್ಪುಗಳು ಮತ್ತು ಕಲ್ಲಂಗಡಿಗಳಿಂದ ದೂರ ಇರಿಸಿ.


ಶೀತ ಸ್ಥಳದಲ್ಲಿ ಇರಿಸಿದಾಗ ಕೆಲವು ತರಕಾರಿಗಳು ತಮ್ಮ ರುಚಿಯನ್ನು ಕಳೆದುಕೊಳ್ಳುತ್ತವೆ. ಹೀಗಾಗಿ ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊಗಳನ್ನು ತಂಪಾದ ತರಕಾರಿಗಳನ್ನು ಹೊರಗಡೆ ತೆಗೆದಿಡಿ.


ಸೊಪ್ಪುಗಳು ತಾಜಾತನವನ್ನು ಬೇಗನೆ ಕಳೆದುಕೊಳ್ಳುತ್ತವೆ. ತಾಜಾವಾಗಿಡಲು, ಹೀಗಾಗಿ ಅವುಗಳನ್ನು ಸ್ವಲ್ಪ ಗಾಳಿ ತುಂಬಿದ ಚೀಲಗಳಲ್ಲಿ ಸಂಗ್ರಹಿಸಿ ನಂತರ ಅದನ್ನು ಬಿಗಿಯಾಗಿ ಮುಚ್ಚಿ.


ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಟ್ಯಾಂಗರಿನ್‌, ನಿಂಬೆಹಣ್ಣುಗಳು ಇತರ ಹಣ್ಣುಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಆದರೆ ನೀವು ಅವುಗಳ ಬಾಳಿಕೆಯನ್ನು ಇನ್ನಷ್ಟು ದೀರ್ಘಗೊಳಿಸಬಹುದು. ಪ್ಲಾಸ್ಟಿಕ್ ಚೀಲವೊಂದರಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ, ಅವುಗಳನ್ನು ಕತ್ತಲೆ ಕೋಣೆಯಲ್ಲಿ ಇರಿಸಿ, ಹೀಗೆ ಮಾಡೊದರೆ ಒಂದು ವಾರದವರೆಗೆ ಉಳಿಯುತ್ತದೆ.


ಇನ್ನು ಅನಾನಸ್ ತಾಜಾವಾಗಿರಲು, ಅನಾನಸ್‌ನ ಎಲೆಗಳ ಮೇಲ್ಭಾಗವನ್ನು ಕತ್ತರಿಸಿ. ಬಳಿಕ ಅನಾನಸ್ ಅನ್ನು ತಲೆಕೆಳಗಾಗಿ ಸಂಗ್ರಹಿಸಿ. ಇದು ಕೆಳಕ್ಕೆ ಇಳಿಯುವ ರಸದ ಪ್ರಮಾಣವನ್ನು ಮತ್ತೆ ಶೇಖರಣೆಯಾಗುವಂತೆ ಮಾಡುತ್ತದೆ.  


ಇದನ್ನೂ ಓದಿ: Sexual health : ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಜೀವನ ನಡೆಸಲು 6 ಮಾರ್ಗಗಳು


ಬೆಳ್ಳುಳ್ಳಿಯನ್ನು ತಾಜಾವಾಗಿಡಬೇಕೆಂದರೆ ಅವುಗಳನ್ನು ಪ್ಲಾಸ್ಟಿಕ್‌ನಲ್ಲಿ ಹಾಕಬೇಡಿ. ಹೀಗೆ ಮಾಡುವುದರಿಂದ ಬೆಳ್ಳುಳ್ಳಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.