Camellia Sinensis Benefits: ನೀವು ಎಂದಾದರು ಕ್ಯಾಮಲಿಯಾ ಸೈನೆನ್ಸಿಸ್ ಟೀ ಟ್ರೈ ಮಾಡಿದ್ದೀರಾ?

Camellia Sinensis Benefits: ಭಾರತದಲ್ಲಿ ಟೀ ಪ್ರಿಯರ ಕೊರತೆ ಇಲ್ಲ. ಆದರೆ, ಒಂದು ವೇಳೆ ನೀವು ಯಾವುದಾದರೊಂದು ಆರೋಗ್ಯಕರ ಪಾನೀಯಯವನ್ನು ಟ್ರೈ ಮಾಡಲು ಬಯಸುತ್ತಿದ್ದರೆ, ನೀವು ಕ್ಯಾಮಲಿಯಾ ಸೈನೆನ್ಸಿಸ್ ಟೀ ಟ್ರೈ ಮಾಡಬಹುದು.  

Written by - Nitin Tabib | Last Updated : Jan 11, 2023, 11:36 PM IST
  • ಕ್ಯಾಮಲಿಯಾ ಸೈನೆನ್ಸಿಸ್ ಟೀ ಸೇವನೆಯ ಹಲವು ಆರೋಗ್ಯಕರ ಲಾಭಗಳಿವೆ.
  • ಬಹುತೇಕ ಜನರಿಗೆ ಬೆಳಗಿನ ಹೊತ್ತು ಹಾಲಿನ ಚಹಾ ಸೇವನೆಯ ಅಭ್ಯಾಸ ಇರುತ್ತದೆ ಮತ್ತು ಇಷ್ಟವಾಗುತ್ತದೆ.
  • ಹೀಗಾಗಿ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಬಯಸುವವರಿಗೆ ಕ್ಯಾಮಲಿಯಾ ಸೈನೆನ್ಸಿಸ್ ಟೀ ಒಂದು ಉತ್ತಮ ಆಯ್ಕೆಯಾಗಿದೆ
Camellia Sinensis Benefits: ನೀವು ಎಂದಾದರು ಕ್ಯಾಮಲಿಯಾ ಸೈನೆನ್ಸಿಸ್ ಟೀ ಟ್ರೈ ಮಾಡಿದ್ದೀರಾ? title=
Camellia Sinensis Tea Benefits

Camellia Sinensis Tea Benefits: ಭಾರತದಲ್ಲಿ ಟೀ ಪ್ರಿಯರ ಕೊರತೆ ಇಲ್ಲ. ಆದರೆ, ಒಂದು ವೇಳೆ ನೀವು ಯಾವುದಾದರೊಂದು ಆರೋಗ್ಯಕರ ಪಾನೀಯಯವನ್ನು ಟ್ರೈ ಮಾಡಲು ಬಯಸುತ್ತಿದ್ದರೆ, ನೀವು ಕ್ಯಾಮಲಿಯಾ ಸೈನೆನ್ಸಿಸ್ ಟೀ ಟ್ರೈ ಮಾಡಬಹುದು.

ಕ್ಯಾಮಲಿಯಾ ಸೈನೆನ್ಸಿಸ್ ಟೀ ಸೇವನೆಯ ಲಾಭಗಳು
ಕ್ಯಾಮಲಿಯಾ ಸೈನೆನ್ಸಿಸ್  ಟೀ ಸೇವನೆಯ ಹಲವು ಆರೋಗ್ಯಕರ ಲಾಭಗಳಿವೆ. ಬಹುತೇಕ ಜನರಿಗೆ ಬೆಳಗಿನ ಹೊತ್ತು ಹಾಲಿನ ಚಹಾ ಸೇವನೆಯ ಅಭ್ಯಾಸ ಇರುತ್ತದೆ ಮತ್ತು ಇಷ್ಟವಾಗುತ್ತದೆ. ಹೀಗಾಗಿ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಬಯಸುವವರಿಗೆ ಕ್ಯಾಮಲಿಯಾ ಸೈನೆನ್ಸಿಸ್  ಟೀ ಒಂದು ಉತ್ತಮ ಆಯ್ಕೆಯಾಗಿದೆ. ಹಾಗಾದರೆ, ಬನ್ನಿ ಈ ಚಹಾ ನಿಮ್ಮ ಪಾಲಿಗೆ ಒಂದು ಉತ್ತಮ ಆಯ್ಕೆ ಏಕಾಗಿದೆ ತಿಳಿದುಕೊಳ್ಳೋಣ ಬನ್ನಿ. 

ದಂತಗಳಿಗೆ ಲಾಭಕಾರಿ
ಕ್ಯಾಮಲಿಯಾ ಸೈನೆನ್ಸಿಸ್ ಟೀನಲ್ಲಿರುವ ಮಿನರಲ್ ಗಳು ಹಲ್ಲುಗಳನ್ನು ಹಾನಿಕಾರಕ ಬ್ಯಾಕ್ಟೀರಿಯಾನಿಂದ ರಕ್ಷಿಸುತ್ತವೆ. ಕ್ಯಾಮಲಿಯಾ ಸೈನೆನ್ಸಿಸ್  ಟೀಯಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಗಳಿವೆ ಹಾಗೂ ಇದರಲ್ಲಿ Fluoride, Catechin ಹಾಗೂ Tannin ಗಳಂತಹ ಮಿನರಲ್ ಗಳಿವೆ. Fluoride ಹಲ್ಲುಗಳನ್ನು ಕೊಳೆತದಿಂದ ರಕ್ಷಿಸುತ್ತದೆ ಹಾಗೂ ಬ್ಯಾಕ್ಟೀರಿಯಾಗಳ ಆಸಿಡ್ ವಿರುದ್ಧ ಹೋರಾಡಲು ಹಲ್ಲುಗಳಿಗೆ ಶಕ್ತಿ ಒದಗಿಸುತ್ತವೆ. 

ಹೃದ್ರೋಗದಿಂದ ರಕ್ಷಣೆ ಒದಗಿಸುತ್ತದೆ
ಈ ಚಹಾವು ಹೃದಯ ಸಂಬಂಧಿ ಸಮಸ್ಯೆಗಳಿಂದ ನಿಮಗೆ ರಕ್ಷಣೆ ಒದಗಿಸುತ್ತದೆ. ಇದು ಸಸ್ಯಾಧಾರಿತ ಮಾಲಿಕ್ಯೂಲ್ ಗಳನ್ನು ಹೊಂದಿರುತ್ತದೆ, ಇದು ನಿಮ್ಮ ದೇಹದಲ್ಲಿ ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಮಾಲಿಕ್ಯೂಲ್ ಗಳು ಒಂದು ರೀತಿಯ ಪಾಲಿಫಿನಾಲ್ಗಳಾಗಿವೆ, ಇವುಗಳಿಗೆ ಕ್ಯಾಟೆಚಿನ್ ಗಳು ಎಂದು ಕೂಡ ಕರೆಯಲಾಗುತ್ತದೆ. ಇವು ನಿಮ್ಮ ಹೃದಯಕ್ಕೆ ತುಂಬಾ ಲಾಭಕಾರಿಯಾಗಿವೆ. ಪಾಲಿಫಿನಾಲ್ಗಳು ನಿಮ್ಮ ರಕ್ತನಾಳಗಳಿಗೆ ವಿಶ್ರಾಂತಿ ನೀಡುವ ಮೂಲಕ ಮತ್ತು ಅವುಗಳಲ್ಲಿ ನಿರ್ಮಾಣಗೊಂಡ ಅಡಚಣೆಯನ್ನು  ನಿವಾರಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ತಜ್ಞರ ಪ್ರಕಾರ, ಪ್ರತಿದಿನ ಕ್ಯಾಮಲಿಯಾ ಸೈನೆನ್ಸಿಸ್ ವನ್ನು ಸೇವಿಸುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಶೇ, 21 ರಷ್ಟು ಕಡಿಮೆಯಾಗಿರುತ್ತದೆ.

ಕೊಬ್ಬು ಕರಗಿಸುತ್ತದೆ
ಕ್ಯಾಮಲಿಯಾ ಸೈನೆನ್ಸಿಸ್ ಚಹಾ ಸೇವನೆ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಬ್ಬನ್ನು ಸುಡುವ ಪರಿಣಾಮಕಾರಿ ಪಾನೀಯವೆಂದು ಇದನ್ನು ಪರಿಗಣಿಸಲಾಗುತ್ತದೆ.ಇದು ಹೆಚ್ಚಿನ ಪ್ರಮಾಣದ ಕೆಫೀನ್ ಅನ್ನು ಹೊಂದಿರುತ್ತದೆ ಮತ್ತು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಎಂಬ ಸಸ್ಯ ಆಧಾರಿತ ಮಾಲಿಕ್ಯೂಲ್ ಇದರಲ್ಲಿ ಕಂಡುಬರುತ್ತದೆ, ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ. ನೀವು ಪ್ರತಿದಿನ ಕ್ಯಾಮಲಿಯಾ ಸೈನೆನ್ಸಿಸ್ ವನ್ನು ಸೇವಿಸಿದರೆ, ನಿಮ್ಮ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದರ ಸೇವನೆಯಿಂದ ನೀವು ದಿನಕ್ಕೆ 100 ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ-ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಗಂಟಲು ನೋವಿಗೆ ಇದೇ ಸುಲಭ ಪರಿಹಾರ !

ತ್ವಚೆಗೆ ಲಾಭಕಾರಿ
ಕ್ಯಾಮಲಿಯಾ ಸೈನೆನ್ಸಿಸ್ ಚಹಾದಲ್ಲಿರುವ ಪಾಲಿಫಿನಾಲ್‌ಗಳು ಹಲವಾರು ಸೆಲ್ಯುಲಾರ್ ಘಟಕಗಳನ್ನು ಮತ್ತು ಕಿಣ್ವವಾಗಿರುವ ಎಲಾಸ್ಟೇಸ್ ಅನ್ನು ನಿಗ್ರಹಿಸುತ್ತವೆ ಅಥವಾ ಕಡಿಮೆ ಮಾಡುತ್ತವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದು ಚರ್ಮದ ಫೈಬರ್ ನೆಟ್‌ವರ್ಕ್ ಅನ್ನು ಹಾನಿಗೊಳಿಸುವ ಸಾಧ್ಯತೆ ಇರುತ್ತದೆ. ವೈಟ್ ಟೀ ಸೇವನೆಯಿಂದ ಎಜಿಂಗ್ ಕಾರಣ ಉಂಟಾಗುವ ಚರ್ಮ ನೇತಾಡುವ ಸಮಸ್ಯೆ ಎದುರಾಗುವುದಿಲ್ಲ. ಸ್ಕಿನ್ ಫೈಬರ್ ನೆಟ್ವರ್ಕ್ ಚರ್ಮವನ್ನು ಬಿಗಿಯಾಗಿ ಮತ್ತು ದೃಢವಾಗಿಡಲು ಸಹಾಯ ಮಾಡುತ್ತದೆ. ಬಾಹ್ಯ ಮತ್ತು ಆಂತರಿಕ ವಯಸ್ಸಾಗುವಿಕೆಯಿಂದ ಇದು ರಕ್ಷಣೆ ಒದಗಿಸುತ್ತದೆ. ಈ ಫೈಬರ್ ನೆಟ್‌ವರ್ಕ್ ಅನ್ನು ರಕ್ಷಿಸಲು ಬಿಳಿ ಚಹಾ ಸಹಾಯ ಮಾಡುತ್ತದೆ ಇದರಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ ಮತ್ತು ಸಾಕಷ್ಟು ಸಾಂಧ್ರತೆಯಿಂದ ಕೂಡಿರುತ್ತದೆ. 

ಇದನ್ನೂ ಓದಿ-Plastic Water Bottle: ರಸ್ತೆ ಪಕ್ಕದಲ್ಲಿ ಸಿಗೋ ವಾಟರ್ ಬಾಟಲ ನೀರು ಕುಡಿದ್ರೆ, ಬಂಜೆತನ ಬರುತ್ತಂತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News