Prediabetes care : ಪ್ರಿ-ಡಯಾಬಿಟಿಸ್ ನಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದು ಟೈಪ್ 2 ಮಧುಮೇಹಕ್ಕಿಂತ ಕಡಿಮೆಯಾಗಿರುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಪ್ರಿ-ಡಯಾಬಿಟಿಸ್ ಮಧುಮೇಹದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮಗಿರುವ ಕೊನೆಯ ಅವಕಾಶವಾಗಿರುತ್ತದೆ. ಈ ಹಂತದಲ್ಲಿ ಸಕ್ಕರೆಯನ್ನು ನಿಯಂತ್ರಿಸಿದರೆ,ಟೈಪ್ 2 ಮಧುಮೇಹವನ್ನು ತಪ್ಪಿಸಬಹುದು. 


COMMERCIAL BREAK
SCROLL TO CONTINUE READING

ಪ್ರಿ-ಡಯಾಬಿಟಿಸ್ ಸಂದರ್ಭದಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳು, ತರಕಾರಿಗಳು,ಕೊಬ್ಬು ಮತ್ತು ಪ್ರೋಟೀನ್‌ ಪ್ರಮಾಣವನ್ನು ಸುಲಭವಾಗಿ ಸಮತೋಲನಗೊಳಿಸುವ ಮೂಲಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.  


ಇದನ್ನೂ ಓದಿ : ನೆನಪಿರಲಿ !ನೆಲ್ಲಿಕಾಯಿಯನ್ನು ಹಚ್ಚುವ ಮೊದಲು ಈ ರೀತಿ ಮಾಡಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು !


ಆಹಾರ ಸೇವಿಸುವ ಕ್ರಮ ಹೀಗಿರಬೇಕು : 
 ಆಹಾರ ಸೇವಿಸುವಾಗ ಬೇಳೆಕಾಳುಗಳು ಮತ್ತು ತರಕಾರಿಗಳನ್ನು ಮೊದಲು ತೆಗೆದುಕೊಳ್ಳಬೇಕು.ಅಕ್ಕಿ ಮತ್ತು ಚಪಾತಿಯಂಥಹ ಕಾರ್ಬೋಹೈಡ್ರೇಟ್ ಗಳನ್ನು  ನಂತರ ತಿನ್ನಬೇಕು.ಈ ಕಾರಣದಿಂದಾಗಿ,ದೇಹದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ನಾವು ಅನುಸರಿಸುವ ದಿನಚರಿಯು ಪ್ರಿ-ಡಯಾಬಿಟಿಕ್ ರೋಗಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆಹಾರವನ್ನು ಈ ನಿಯಮದ ಪ್ರಕಾರ ಸೇವಿಸುವುದರಿಂದ ತೂಕ ನಿಯಂತ್ರಣದಲ್ಲಿಯೂ ಸಹಾಯ ಮಾಡುತ್ತದೆ. 


 ಪ್ರಿ-ಡಯಾಬಿಟಿಕ್ ಇದ್ದಾಗ ಸಕ್ಕರೆಯ ಮಟ್ಟ ಎಷ್ಟಿರುತ್ತದೆ ? :
ಮೇಯೊ ಕ್ಲಿನಿಕ್ ಪ್ರಕಾರ, 100 mg/dL (5.6 mmol/L) ಗಿಂತ ಕಡಿಮೆಯಿದ್ದರೆ  ನಾರ್ಮಲ್. 100 ರಿಂದ 125 mg/dL (5.6 to 6.9 mmol/L)ಇದ್ದಾಗ  ಪ್ರಿಡಯಾಬಿಟಿಸ್ ಎನ್ನಲಾಗುತ್ತದೆ. 


ಇದನ್ನೂ ಓದಿ : ಬಿಕ್ಕಿ ಬಿಕ್ಕಿ ಅಳುವಾಗ ಮೂಗಿನಿಂದ ನೀರು ಏಕೆ ಬರುತ್ತೆ ಗೊತ್ತೆ..? ಕುತೂಹಲ ವಿಷಯ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ