Diabetes Control Tips : ಮಧುಮೇಹ ರೋಗಿಗಳಿಗೆ ಅತ್ಯಂತ ಸರಳವಾದ ಸಲಹೆಗಳು ಇಲ್ಲಿವೆ. ಇದನ್ನು ಅಳವಡಿಸಿಕೊಳ್ಳುವ ಮೂಲಕ ಫಿಟ್ ಆಗಿರಬಹುದು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಕೂಡಾ ನಿಯಂತ್ರಣದಲ್ಲಿರುತ್ತದೆ. ನಾವು ಹೇಳಲು ಹೊರಟಿರುವ ಈ ವಿಧಾನಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ತಮ್ಮ ಬ್ಯುಸಿ ಜೀವನಶೈಲಿಯ ಕಾರಣ ಅದನ್ನು ಅಳವಡಿಸಿಕೊಳ್ಳುವಲ್ಲಿ ಜನ ಉದಾಸೀನ ತೋರಿಸುತ್ತಾರೆ.  


COMMERCIAL BREAK
SCROLL TO CONTINUE READING

1. ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಿ :
ಮನುಷ್ಯನಿಗೆ ಬರುವ ಹೆಚ್ಚಿನ ಕಾಯಿಲೆಗಳು ಅತಿಯಾದ ಕೊಬ್ಬಿನಿಂದ ಬರುತ್ತವೆ. ತೂಕ ಹೆಚ್ಚುತ್ತಿದ್ದರೆ, ಅಥವಾ ಈಗಾಗಲೇ ಹೆಚ್ಚಿದ್ದರೆ ಮೊದಲು ಅದನ್ನು ನಿಯಂತ್ರಿಸಿಕೊಳ್ಳಿ. ಏಕೆಂದರೆ ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಸಮಸ್ಯೆ ಎದುರಾಗುತ್ತದೆ. ಇದಲ್ಲದೆ, ಇನ್ನೂ  ಅನೇಕ ಪ್ರಮುಖ ಕಾಯಿಲೆಗಳ ಅಪಾಯ ಎದುರಾಗಬಹುದು. 


ಇದನ್ನೂ ಓದಿ : Tea: ಚಹಾ ಸೇವನೆಯಿಂದ ತೂಕ ಹೆಚ್ಚಾಗುತ್ತದೆಯೇ? ಇದರ ಹಿಂದಿನ ನಿಜಾಂಶ ಏನು?


2. ದೈಹಿಕವಾಗಿ ಸಕ್ರಿಯರಾಗಿರಿ :
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ದೈಹಿಕವಾಗಿ ಸಕ್ರಿಯವಾಗಿರುವುದು ಬಹಳ ಮುಖ್ಯ. ನೀವು ಸಕ್ರಿಯವಾಗಿಲ್ಲದಿದ್ದರೆ ರೋಗಗಳು ನಿಮ್ಮನ್ನು ಸುತ್ತುವರೆಯುತ್ತವೆ. ಕ್ರಮೇಣ ನೀವು ಅನೇಕ ಪ್ರಮುಖ ಕಾಯಿಲೆಗಳಿಗೆ ಬಲಿಯಾಗುತ್ತೀರಿ. ಹೆಚ್ಚಿನ ಜನರು ಮಧುಮೇಹಕ್ಕೆ ಬಲಿಯಾಗಲು ಇದೇ ಕಾರಣ.


3. ಆರೋಗ್ಯಕರ ವಸ್ತುಗಳನ್ನು ತಿನ್ನಿರಿ :
ಸದಾ ಫಿಟ್ ಆಗಿರಲು ಆರೋಗ್ಯಕರ ವಸ್ತುಗಳನ್ನೇ ಸೇವಿಸಬೇಕು. ಹೈ ಬ್ಲಡ್ ಶುಗರ್ ರೋಗಿಗಳಂತೂ, ಈ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ದಿನೇ ದಿನೇ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ. ಅಲ್ಲದೆ, ಪ್ರೋಟೀನ್-ಭರಿತ ವಸ್ತುಗಳನ್ನು ತಿನ್ನಿರಿ. ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ.


ಇದನ್ನೂ ಓದಿ : Lung Cancer: ದೇಹದಲ್ಲಿ ಈ ಬದಲಾವಣೆಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.