Food For Glowing Skin: ಬೇಸಿಗೆಯ ದಿನಗಳು ಪ್ರಾರಂಭವಾಗಿವೆ. ಸ್ಕಿನ್ ಟ್ಯಾನಿಂಗ್, ತ್ವಚೆ ಕಪ್ಪಾಗುವುದು, ತ್ವಚೆಯಲ್ಲಿ ದದ್ದುಗಳು ಮತ್ತು ಮೊಡವೆಗಳು ಈ ಋತುವಿನಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ. ಬೆವರುವಿಕೆಯಿಂದ, ಮೊಡವೆಗಳಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಚರ್ಮದ ಆರೈಕೆಯ ದಿನಚರಿಯ ಬಗ್ಗೆ ವಿಶೇಷ ಗಮನವನ್ನು ವಹಿಸುವುದು ಬಹಳ ಮುಖ್ಯ. ಇದರೊಂದಿಗೆ ಆರೋಗ್ಯಕರ ಆಹಾರವು ತುಂಬಾ ಮುಖ್ಯವಾಗಿದೆ. ಏಕೆಂದರೆ ನೀವು ಏನೇ ತಿಂದರೂ ಅದರ ಪರಿಣಾಮ ಚರ್ಮದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಬೇಸಿಗೆಯಲ್ಲಿ, ಬಲವಾದ ಸೂರ್ಯನ ಬೆಳಕಿನಿಂದ ಚರ್ಮವು ಕಂದು ಬಣ್ಣಕ್ಕೆ ತಿರುಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ತ್ವಚೆಯ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. 


COMMERCIAL BREAK
SCROLL TO CONTINUE READING

ಆರೋಗ್ಯಕರ ಆಹಾರ ಸೇವನೆಯಿಂದ ದೇಹ ಮಾತ್ರವಲ್ಲದೆ ತ್ವಚೆಯನ್ನೂ ಹಲವು ಸಮಸ್ಯೆಗಳಿಂದ ರಕ್ಷಿಸಬಹುದು ಎನ್ನುತ್ತಾರೆ ಡಯಟ್ ತಜ್ಞರಾದ ಡಾ.ರಂಜನಾ ಸಿಂಗ್. ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮಾಡಬಹುದು. ಇದಕ್ಕಾಗಿ ಬೇಸಿಗೆಯಲ್ಲಿ (Summer) ಸೀಸನ್ ಫುಡ್ ಗಳನ್ನು ಡಯಟ್ ನ ಭಾಗವಾಗಿ ಮಾಡಿಕೊಳ್ಳಬೇಕು. ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅಂತಹ ಆಹಾರಗಳ ಬಗ್ಗೆತಿಳಿಯೋಣ. 


ಹೊಳೆಯುವ ತ್ವಚೆಗಾಗಿ ನಿಮ್ಮ ಡಯಟ್ನಲ್ಲಿ ಈ ಆಹಾರಗಳನ್ನು ಸೇರಿಸಿ:
1. ಗ್ಲೋಯಿಂಗ್ ಸ್ಕಿನ್‌ಗಾಗಿ ಕಲ್ಲಂಗಡಿ :

ಕಲ್ಲಂಗಡಿ ಹಣ್ಣನ್ನು ಸೇವಿಸುವುದು ಒಳ್ಳೆಯದು. ಕಲ್ಲಂಗಡಿಯಲ್ಲಿ ಸುಮಾರು 90 ಪ್ರತಿಶತದಷ್ಟು ನೀರು ಇದೆ, ಇದು ನಿಮ್ಮ ದೇಹವನ್ನು ಮತ್ತು ಚರ್ಮವನ್ನು ತೇವಾಂಶದಿಂದ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ- Skin Care Tips: ತ್ವಚೆಯ ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನಿಂಬೆಹಣ್ಣು


2. ಗ್ಲೋಯಿಂಗ್ ಸ್ಕಿನ್‌ಗಾಗಿ ಎಳನೀರಿನ ಸೇವನೆ:
ಬೇಸಿಗೆಯಲ್ಲಿ ಎಳನೀರನ್ನು ಕುಡಿಯುವುದರಿಂದ ನೀರಿನ ಕೊರತೆಯನ್ನು ಹೋಗಲಾಡಿಸುವುದರ ಜೊತೆಗೆ ತ್ವಚೆಯನ್ನು ಆರೋಗ್ಯಕರವಾಗಿ ಇರಿಸಬಹುದು. 


3. ಗ್ಲೋಯಿಂಗ್ ಸ್ಕಿನ್‌ಗಾಗಿ ಸೌತೆಕಾಯಿ:
ಸೌತೆಕಾಯಿಯ ಸೇವನೆಯು ಉತ್ತಮ ಪ್ರಮಾಣದ ನೀರಿನಾಂಶವನ್ನು ಒದಗಿಸುತ್ತದೆ. ಇದು ದೇಹವನ್ನು ನೀರಿನ ಕೊರತೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಚರ್ಮ (Skin) ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ. 


ಇದನ್ನೂ ಓದಿ- Bathing Tips: ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನಗಳು


4. ಹೊಳೆಯುವ ಚರ್ಮಕ್ಕಾಗಿ ಮೊಸರು:
ಮೊಸರು ಫೈಬರ್ ಮತ್ತು ಅನೇಕ ಅಗತ್ಯ ಅಂಶಗಳನ್ನು ಒಳಗೊಂಡಿದೆ, ಇದು ಹೊಟ್ಟೆಯನ್ನು ಆರೋಗ್ಯಕರವಾಗಿಡುವುದರ ಜೊತೆಗೆ, ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.


ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ನೀಡಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.