Alcohol side effects : ನೋವಿರಲಿ, ನಲಿವಿರಲಿ, ಯಾವುದೇ ವಿಚಾರವಿರಲಿ ಮದ್ಯಪಾನ ಅಲ್ಲಿ ಇರಲೇಬೇಕು. ಮದ್ಯವಿಲ್ಲದಿದ್ದರೆ ಪಾರ್ಟಿಗೆ ಕಳೆ ಬರುವುದಿಲ್ಲ ಅಂತಾರೆ. ಹೆಚ್ಚಿನ ಜನರು ಆಲ್ಕೋಹಾಲ್ ಸೇವನೆ ಮಾಡುವಾಗ ಏನಾದರು ತಿನ್ನಲು ಬಯಸುತ್ತಾರೆ. ಅದಕ್ಕೆ ಮದ್ಯಪ್ರಿಯಯರು ಸೈಡಿಶ್‌ ಅಂತ ಕರೆಯುತ್ತಾರೆ. ಅದು ಎಣ್ಣೆ ಹೊಡೆಯುವಾಗ ಬಹು ಮುಖ್ಯ. ಆದ್ರೆ ಕೆಲವು ಆಹಾರ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಬಹುದು ನೆನಪಿರಲಿ. ಮದ್ಯಪಾನ ಮಾಡುವಾಗ ಯಾವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬೇಕು..? ಏನು ತೆಗೆದುಕೊಳ್ಳಬಾರದು? ಸಂಪೂರ್ಣ ವಿವರ ಇಲ್ಲಿದೆ.. ನೋಡಿ..  


COMMERCIAL BREAK
SCROLL TO CONTINUE READING

ಮದ್ಯಪಾನ ಮಾಡುವಾಗ ಇವುಗಳನ್ನು ಸೇವಿಸಿ.


  • ಡ್ರೈ ಫ್ರೂಟ್ಸ್ : ಅನೇಕ ಜನರು ಆಲ್ಕೋಹಾಲ್ ಜೊತೆಗೆ ಡ್ರೈ ಫ್ರೂಟ್ಸ್ ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಒಣ ಹಣ್ಣುಗಳ ಹೆಚ್ಚಿನ ಕೊಬ್ಬಿನಂಶದಿಂದ ಆಲ್ಕೋಹಾಲ್ ಹೀರಿಕೊಳ್ಳುವಿಕೆಯು ಕಡಿಮೆಯಾಗುತ್ತದೆ. 

  • ಸೇಬು ಅಥವಾ ಇತರ ಹಣ್ಣುಗಳು : ಹಣ್ಣುಗಳಲ್ಲಿ ನೀರಿನಂಶ ಅಧಿಕವಾಗಿರುತ್ತದೆ. ಮದ್ಯಪಾನ ಮಾಡುವಾಗ ಹಣ್ಣುಗಳನ್ನು ತಿನ್ನುವುದರಿಂದ ಮದ್ಯದ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಸೇಬನ್ನು ತಿನ್ನುವುದರಿಂದ ಆಲ್ಕೋಹಾಲ್ ನಿಂದ ಉಂಟಾಗುವ ಕರುಳಿನ ಉರಿಯೂತ ಕಡಿಮೆಯಾಗುತ್ತದೆ. 


ಇದನ್ನೂ ಓದಿ: ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳಿವು !


  • ಮೊಟ್ಟೆಗಳು : ಮೊಟ್ಟೆಗಳು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಇವು ಆಲ್ಕೋಹಾಲ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತವೆ. 

  • ಸಾಲ್ಮನ್ : ಸಾಲ್ಮನ್ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ. ಮದ್ಯಪಾನ ಮಾಡುವಾಗ ಇವುಗಳನ್ನು ತಿನ್ನುವುದರಿಂದ ಮೆದುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. 


ಈ ಆಹಾರವನ್ನೇ ತಿನ್ನಬೇಡಿ


  • ಡೈರಿ ಉತ್ಪನ್ನಗಳು : ಆಲ್ಕೋಹಾಲ್ ಕುಡಿಯುವಾಗ ಕೆಫೀನ್, ಚಾಕೊಲೇಟ್ ಅಥವಾ ಕೋಕೋವನ್ನು ತಿನ್ನಬೇಡಿ. ಇವು ಆಮ್ಲೀಯ ಆಹಾರಗಳು ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತವೆ.

  • ಪಿಜ್ಜಾ : ಅನೇಕ ಜನರು ಆಲ್ಕೋಹಾಲ್ ಸೇವಿಸುವಾಗ ಪಿಜ್ಜಾ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಎರಡು ಪದಾರ್ಥಗಳನ್ನು ಒಟ್ಟಿಗೆ ತಿನ್ನಬಾರದು. ಮದ್ಯಪಾನ ಮಾಡುವಾಗ ಪಿಜ್ಜಾ ತಿನ್ನುವುದರಿಂದ ತೀವ್ರವಾದ ಹೊಟ್ಟೆ ನೋವು ಉಂಟಾಗುತ್ತದೆ.


ಇದನ್ನೂ ಓದಿ: Weight Loss Drinks: ನಿತ್ಯ ಈ ಪಾನೀಯ ಸೇವಿಸುತ್ತಾ ಬಂದರೆ ಸುಲಭವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್


  • ಉಪ್ಪು ಆಹಾರ : ನ್ಯಾಚೋಸ್ ಅಥವಾ ಫ್ರೆಂಚ್ ಫ್ರೈಗಳಂತಹ ಉಪ್ಪು ಆಹಾರ ಪದಾರ್ಥಗಳನ್ನು ಮದ್ಯಪಾನ ಮಾಡುವಾಗ ಸೇವಿಸಬಾರದು. ಇದರಲ್ಲಿ ಸೋಡಿಯಂ ತುಂಬಾ ಅಧಿಕವಾಗಿದೆ. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.

  • ಬೀನ್ಸ್ : ಆಲ್ಕೋಹಾಲ್ ಸೇವಿಸುವಾಗ ಬೀನ್ಸ್ ಮತ್ತು ಕಾಳುಗಳನ್ನು ಸೇವಿಸಬಾರದು. ಇವುಗಳಲ್ಲಿ ಕಬ್ಬಿಣಾಂಶ ಇರುವುದರಿಂದ ಇವು ಆಹಾರ ಜೀರ್ಣವಾಗುವುದಿಲ್ಲ.


ಸೂಚನೆ : ಇಲ್ಲಿ ನೀಡಲಾದ ಸಲಹೆ ಮತ್ತು ಸೂಚನೆಗಳನ್ನು ಅನುಸರಿಸುವ ಮೊದಲು, ವೈದ್ಯರು ಅಥವಾ ಸಂಬಂಧಿತ ವೃತ್ತಿಪರರಿಂದ ಸಲಹೆ ಪಡೆಯುವುದು ಉತ್ತಮ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ