Diet Tips For Diabetic : ಮಧುಮೇಹದ ಸಮಸ್ಯೆ ಹೆಚ್ಚಾದರೆ, ಅದು ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಮಧುಮೇಹದಲ್ಲಿ, ಸಕ್ಕರೆಯ ಮಟ್ಟವನ್ನು ಪ್ರತಿ ಕ್ಷಣವೂ ಕಾಳಜಿ ವಹಿಸಬೇಕು. ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ ಇರುವವರು ಪ್ರತಿ ಬಾರಿ ತಪಾಸಣೆ ಮಾಡಿಸಿಕೊಳ್ಳಬೇಕು. ಹೀಗಾಗಿ, ಸರಿಯಾದ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ಈ ಸಮಸ್ಯೆ ಹೆಚ್ಚಾಗಬಹುದು. ಮಧುಮೇಹವನ್ನು ಔಷಧಗಳನ್ನು ಸೇವಿಸುವ ಮೂಲಕ ಸ್ವಲ್ಪ ಸಮಯದವರೆಗೆ ನಿಯಂತ್ರಿಸಬಹುದು, ಆದರೆ ಆಹಾರವು ಸಕ್ಕರೆಯ ಮಟ್ಟವನ್ನು ಸುಲಭವಾಗಿ ನಿಯಂತ್ರಣದಲ್ಲಿಡುತ್ತವೆ. ದಿನನಿತ್ಯದ ಆಹಾರದಲ್ಲಿ ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಅವು ಯಾವವು ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಮೆಂತ್ಯ : 


ಮೆಂತ್ಯ ಬೀಜಗಳು ಮಧುಮೇಹಕ್ಕೆ ಪ್ರಯೋಜನಕಾರಿ. ಮೆಂತ್ಯವು ಆಂಟಿ ಡಯಾಬಿಟಿಕ್ ಗುಣಗಳನ್ನು ಹೊಂದಿದ್ದು ಇದು ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಫೈಬರ್‌ಗಳು ಮಧುಮೇಹವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಮೆಂತ್ಯವನ್ನು ನೆನೆಸಿ ಅದರ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ.


ಇದನ್ನೂ ಓದಿ : Kiwi Benefits : ಉತ್ತಮ ನಿದ್ರೆಗೆ ಕ್ಯಾನ್ಸರ್ ತಡೆಗಟ್ಟುವಿಕೆಗೆ ಚಳಿಗಾಲದಲ್ಲಿ ಸೇವಿಸಿ ಕಿವಿ ಹಣ್ಣು!


ಸೇಬು ಹಣ್ಣು : 


ಸೇಬು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು. ಇದರ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿದೆ, ಆದ್ದರಿಂದ ಮಧುಮೇಹದಲ್ಲಿ ಸೇಬನ್ನು ಸೇವಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಸೇಬಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಅವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತವೆ. ಸೇಬಿನಲ್ಲಿರುವ ಆಂಥೋಸಯಾನಿನ್ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಕಿತ್ತಳೆ ಹಣ್ಣು :


ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಕಿತ್ತಳೆ ಮಧುಮೇಹಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಿತ್ತಳೆಯು ತುಂಬಾ ಕಡಿಮೆ ಮಟ್ಟದ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದೆ, ಇದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕಿತ್ತಳೆಯಲ್ಲಿ ನಾರಿನಂಶ ಹೇರಳವಾಗಿದ್ದು ಮಧುಮೇಹವನ್ನು ನಿಯಂತ್ರಿಸುತ್ತದೆ.


ಲೆಟಿಸ್ ಸೊಪ್ಪು : 


ಲೆಟಿಸ್ ಎಂದು ಕರೆಯಲ್ಪಡುವ ಸೊಪ್ಪು ಮಧುಮೇಹದಲ್ಲಿ ಪ್ರಯೋಜನಕಾರಿ. ಅವು ಫೈಬರ್ನಲ್ಲಿ ಸಮೃದ್ಧವಾಗಿವೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಲೆಟಿಸ್ ತಿನ್ನುವುದು ಸಕ್ಕರೆಯನ್ನು ನಿಯಂತ್ರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.


ಪಾಲಕ್ ಸೊಪ್ಪು : Lemongrass Plant : ಈ ಸುಗಂಧಭರಿತ ಲೆಮನ್ ಗ್ರಾಸ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು? ಇಲ್ಲಿದೆ ನೋಡಿ


ಮಧುಮೇಹದಲ್ಲಿ ಹಸಿರು ಪಾಲಕ್ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಇರುತ್ತವೆ. ಪಾಲಕ್ ಕಬ್ಬಿಣ, ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳ ಉಗ್ರಾಣವಾಗಿದೆ. ಇದು ಕಡಿಮೆ ಕಾರ್ಬ್ ಆಹಾರವಾಗಿದ್ದು ಮಧುಮೇಹವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.