Foods to reduce cholesterol: ಜೀರ್ಣಕಾರಿ ದ್ರವಗಳು, ವಿಟಮಿನ್ ಡಿ ಮತ್ತು ಕೆಲವು ಹಾರ್ಮೋನುಗಳನ್ನು ತಯಾರಿಸಲು ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯವಿದೆ, ಇದನ್ನು ಯಕೃತ್ತು ಪೂರೈಸುತ್ತದೆ. ಆದರ, ಆಹಾರದಿಂದ ಪಡೆದ ಕೊಲೆಸ್ಟ್ರಾಲ್ ದೇಹಕ್ಕೆ ಸಮಸ್ಯೆಯಾಗಬಹುದು. ನಮ್ಮ ದೇಹದಲ್ಲಿ LDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಾಗುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ದೇಹಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್ ಮಟ್ಟವು ಹೃದಯದ ಜೊತೆಗೆ ಮೆದುಳನ್ನು ದುರ್ಬಲಗೊಳಿಸುತ್ತದೆ. ಅಪಧಮನಿಯ ಅಡಚಣೆಯಿಂದಾಗಿ, ರಕ್ತದ ಹರಿವಿನಲ್ಲಿ ಅಡಚಣೆ ಉಂಟಾಗುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಯಾವ ಪದಾರ್ಥಗಳನ್ನು ತಿನ್ನುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

1. ಓಟ್ಸ್
ಓಟ್ಸ್ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉತ್ತಮವಾದ ಕರಗುವ ಫೈಬರ್ ಅನ್ನು ಹೊಂದಿದೆ. 1 ಕಪ್ ಓಟ್ಸ್ 307 ಕ್ಯಾಲೋರಿಗಳು, 10.7 ಗ್ರಾಂ ಪ್ರೋಟೀನ್ ಮತ್ತು 8 ಗ್ರಾಂಗಿಂತ ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ.


2. ಕೊಬ್ಬಿನ ಮೀನು
ಕೊಬ್ಬಿನ ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಿವೆ, ಇದು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.


3. ಬಾದಾಮಿ ಮತ್ತು ಇತರ ಡ್ರೈ ಫ್ರೂಟ್ ಗಳು
ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಬಾದಾಮಿ, ವಾಲ್‌ನಟ್ಸ್ ಮತ್ತು ಇತರ ಡ್ರೈ ಫ್ರೂಟ್ ಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ಹಲವು ಸಂಶೋಧನೆಗಳು ಹೇಳಿದೆ. ಆದರೆ, ಇವು ಕ್ಯಾಲೋರಿಗಳ ಆಗರವಾಗಿರುವುದರಿಂದ, ಅವುಗಳನ್ನು ಕಡಿಮೆ ತಿನ್ನಬೇಕು. ಬಾದಾಮಿಯ ಒಂದು ಸೇವೆಯು 165 ಕ್ಯಾಲೋರಿಗಳು, 6 ಗ್ರಾಂ ಪ್ರೋಟೀನ್ ಮತ್ತು 3 ಗ್ರಾಂ ಫೈಬರ್ ಅನ್ನು ಒದಗಿಸುತ್ತದೆ.


4. ದ್ವಿದಳ ಧಾನ್ಯಗಳು
ದಿನಕ್ಕೆ 100 ಗ್ರಾಂ ದ್ವಿದಳ ಧಾನ್ಯಗಳನ್ನು ತಿನ್ನುವುದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಒಂದು ಬೀನ್ಸ್‌ನಲ್ಲಿ 8 ಗ್ರಾಂ ಪ್ರೋಟೀನ್ ಮತ್ತು 9 ಗ್ರಾಂ ಫೈಬರ್ ಇರುತ್ತದೆ.


5. ಸಂಪೂರ್ಣ ಧಾನ್ಯಗಳು
ಧಾನ್ಯಗಳು ಪೌಷ್ಟಿಕಾಂಶ-ಸಮೃದ್ಧ ಆಹಾರಗಳಾಗಿವೆ ಮತ್ತು ಈ ಧಾನ್ಯಗಳು ಹೃದಯದ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಧಾನ್ಯಗಳು ಬಿ ಜೀವಸತ್ವಗಳು, ಕಬ್ಬಿಣ, ತಾಮ್ರ, ಸತು, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.


6. ಬಿಳಿಬದನೆ
ಬದನೆಕಾಯಿ ಫೈಬರ್ ಸಮೃದ್ಧವಾಗಿದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಬದನೆ ಅತ್ಯುತ್ತಮ ಆಹಾರವಾಗಿದೆ. 100 ಗ್ರಾಂ ಬದನೆಕಾಯಿಯಲ್ಲಿ 25 ಕ್ಯಾಲೋರಿಗಳು, 3 ಗ್ರಾಂ ಫೈಬರ್ ಮತ್ತು 1 ಗ್ರಾಂ ಪ್ರೋಟೀನ್ ಇರುತ್ತದೆ.


ಇದನ್ನೂ ಓದಿ-Bad Habits: ಸಮಯ ಇರುವಾಗಲೇ ನಿಮ್ಮೀ ಬೆಳಗಿನ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ.. ಇಲ್ದಿದ್ರೆ?


7. ತರಕಾರಿ ತೈಲ
ಕ್ಯಾನೋಲ, ಸೂರ್ಯಕಾಂತಿ, ಕುಸುಬೆ ಮತ್ತು ಇತರ ಸಸ್ಯಜನ್ಯ ಎಣ್ಣೆಗಳ ಬಳಕೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯನ್ನು ಹೃದಯಕ್ಕೆ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-Diabetics: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬೇಕೆ? ಈ ಆಹಾರ ಪದಾರ್ಥಗಳಿಂದ ಅಂತರ ಕಾಯ್ದುಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.