ಮೂಳೆ ಗಟ್ಟಿ ಇರಬೇಕಾದರೆ ನಿಮ್ಮ ಡಯಟ್ ನಲ್ಲಿರಲಿ ಈ ಆಹಾರ
ದೇಹ ಬಲಿಷ್ಠವಾಗಿರಬೇಕಾದರೆ ಮೂಳೆ ಬಲಿಷ್ಠವಾಗಿರಬೇಕು. ಮೂಳೆ ಬಲಿಷ್ಠವಿಲ್ಲದೇ ಹೋದರೆ, ಏಳಲು, ಕುಳಿತುಕೊಳ್ಳಲು, ನಡೆಯಲು ತುಂಬಾ ಸಮಸ್ಯೆಯಾಗುತ್ತದೆ.
ನವದೆಹಲಿ : ದೇಹ ಬಲಿಷ್ಠವಾಗಿರಬೇಕಾದರೆ ಮೂಳೆ ಬಲಿಷ್ಠವಾಗಿರಬೇಕು (strong bone). ಮೂಳೆ ಬಲಿಷ್ಠವಿಲ್ಲದೇ ಹೋದರೆ, ಏಳಲು, ಕುಳಿತುಕೊಳ್ಳಲು, ನಡೆಯಲು ತುಂಬಾ ಸಮಸ್ಯೆಯಾಗುತ್ತದೆ. ಗೊತ್ತಿರಲಿ..ದೇಹದಲ್ಲಿ ವಿಟಮಿನ್ ಡಿ (Vitamin D) ಕೊರತೆಯಾದರೆ ನಮ್ಮ ಮೂಳೆಗಳು ದುರ್ಬಲವಾಗುತ್ತದೆ. ವಿಟಮಿನ್ ಡಿ ಅಷ್ಟೇ ಅಲ್ಲ. ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಕೊರತೆಯಾದರೂ ಮೂಳೆ ದುರ್ಬಲವಾಗುತ್ತದೆ. ಹಾಗಾಗಿ, ಮೂಳೆ ಗಟ್ಟಿ ಇರಬೇಕಾದರೆ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಭರಪೂರ ಇರುವ ಆಹಾರ ತಿನ್ನಬೇಕು. ಹಾಗಾದರೆ ಮೂಳೆ ಗಟ್ಟಿ ಇರಬೇಕಾದರೆ ನಿಮ್ಮ ಡಯಟ್ (Diet) ಇವೆಲ್ಲಾ ಇರಬೇಕು.
1. ಮೊಟ್ಟೆ :
ಮೊಟ್ಟೆ (egg) ಪ್ರೊಟೀನ್ ನ ಪವರ್ ಹೌಸ್ ಎನ್ನಲಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ ಪ್ರೊಟೀನ್ ಅದರಲ್ಲಿದೆ. ಯಾವುದೇ ಹೊತ್ತಿನಲ್ಲಿ ಮೊಟ್ಟೆ ತಿನ್ನಬಹುದಾಗಿದೆ. ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ.
ಇದನ್ನೂ ಓದಿ : Raw Rice: ಅಕ್ಕಿ ತಿನ್ನುವ ಅಭ್ಯಾಸ ನಿಮಗೂ ಇದೆಯೇ? ಭಾರೀ ತೊಂದರೆಯಾಗಬಹುದು ಎಚ್ಚರ
2. ಮೀನು:
ಮೀನು (fish) ಮಿಟಮಿನ್ ಡಿ ಅತ್ಯಂತ ಉತ್ತಮ ಮೂಲ. ಇದರಿಂದ ಮೂಳೆ ಬಲಿಷ್ಠವಾಗುತ್ತದೆ. ಮೀನು ಖಂಡಿತಾ ನಿಮ್ಮ ಡಯಟ್ (diet) ನಲ್ಲಿರಬೇಕು.
3. ಏಕ ದಳ ಧಾನ್ಯಗಳು
ಏಕದಳ ಧಾನ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಗೋಧಿ, ಜೋಳ, ಮೆಕ್ಕೆಜೋಳ, ಬ್ರೌನ್ ರೈಸ್ ಇವುಗಳಲ್ಲಿ ಅಗತ್ಯ ವಿಟಮಿನ್ ಮತ್ತು ಫೈಬರ್ ಇರುತ್ತದೆ. ಇವು ಮೂಳೆಯನ್ನು ಬಲಿಷ್ಠಗೊಳಿಸಲು ಹಾಗೂ ಆರೋಗ್ಯವಾಗಿಡಲು ನೆರವಾಗುತ್ತದೆ.
4. ಪನೀರ್
ಹಾಲಿನ ಉತ್ಪನ್ನ ಪನೀರ್ (paneer). ಪನೀರ್ ನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಬೇಕಾದಷ್ಟಿರುತ್ತದೆ. ಮೂಳೆ ಗಟ್ಟಿಯಾಗಿರಬೇಕಾದರೆ ನಿಮ್ಮ ಆಹಾರದಲ್ಲಿ ಪನೀರ್ ಇರಬೇಕು.
ಇದನ್ನೂ ಓದಿ : ಸೇಬು ತಿಂದರೆ ಆರೋಗ್ಯಕ್ಕೆ ಲಾಭ ಅಷ್ಟೇ ಅಲ್ಲ ನಷ್ಟವೂ ಇದೆ.
5. ನೆಲ್ಲಿಕಾಯಿ
ನೆಲ್ಲಿಕಾಯಿಯ (Amla) ಔಷಧೀಯ ಗುಣದ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಬೇರೆ ಇತರ ಪೋಷಕಾಂಶಗಳು ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತವೆ. ಮೂಳೆ ಗಟ್ಟಿಯಾಗಬೇಕಾದರೆ ನೆಲ್ಲಿಯೂ ನಿಮ್ಮ ಡಯಟಿನಲ್ಲಿರಬೇಕು.