ಸೇಬು ತಿಂದರೆ ಆರೋಗ್ಯಕ್ಕೆ ಲಾಭ ಅಷ್ಟೇ ಅಲ್ಲ ನಷ್ಟವೂ ಇದೆ.

ದಿನಕ್ಕೊಂದು ಸೇಬು ತಿಂದರೆ ಕ್ಯಾನ್ಸರ್, ಹೈಪರ್ ಟೆನ್ಶನ್, ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು (heart disease) ದೂರವಾಗುತ್ತದೆ.  ಇಷ್ಟೆಲ್ಲಾ ಲಾಭ ಇದ್ದರೂ ಕೂಡಾ ಸೇಬು ತಿಂದರೆ ಒಂದಿಷ್ಟು ಹಾನಿ ಕೂಡಾ ನಿಮ್ಮ ಆರೋಗ್ಯದ ಮೇಲಾಗುತ್ತದೆ.

Written by - Ranjitha R K | Last Updated : Jun 9, 2021, 12:50 PM IST
  • ಸೇಬು ಆರೋಗ್ಯಕ್ಕೆ ತುಂಬಾ ಹಿತಕಾರಿ
  • ಎಲ್ಲಾ ವೈದ್ಯರೂ ಸೇಬು ತಿನ್ನಲು ಸಲಹೆ ನೀಡುತ್ತಾರೆ.
  • ಸೇಬು ತಿನ್ನುವುದರ ಲಾಭ ಮತ್ತು ನಷ್ಟದ ಬಗ್ಗೆ ತಿಳಿಯೋಣ.
ಸೇಬು ತಿಂದರೆ ಆರೋಗ್ಯಕ್ಕೆ ಲಾಭ ಅಷ್ಟೇ ಅಲ್ಲ ನಷ್ಟವೂ ಇದೆ. title=
ಸೇಬು ತಿನ್ನುವುದರ ಲಾಭ ಮತ್ತು ನಷ್ಟ..! (photo zee news)

ನವದೆಹಲಿ : ಸೇಬು ಆರೋಗ್ಯಕ್ಕೆ ತುಂಬಾ ಹಿತಕಾರಿ(Apple benefits). ಸೇಬಿನಲ್ಲಿ ಪೆಕ್ಟಿನ್ ಎಂಬ ಒಂದು ಲಾಭದಾಯಕ ಫೈಬರ್ ಇದೆ. ಪೊಟ್ಯಾಶಿಯಂ, ಪಾಸ್ಪರೆಸ್, ಮೆಗ್ನೇಶಿಯಂ ಮತ್ತು ಕಬ್ಬಿಣದಾಂಶ ಸಮೃದ್ಧವಾಗಿದೆ.  ಆಯುರ್ವೇದದ ಪ್ರಕಾರ ಸೇಬು ಚರ್ಮದ ಆರೋಗ್ಯ, ಉರಿ, ಹೃದಯ, ಜ್ವರ, ಟೆನ್ಶನ್, ಮಲಬದ್ಧತೆ ಮುಂತಾದ  ಹಲವು ಕಾಯಿಲೆಗಳಿಗೆ ರಾಮಬಾಣ. ಡಾಕ್ಟರಿಂದ ಹಿಡಿದು ನ್ಯೂಟ್ರಿಶನಿಸ್ಟ್ ತನಕ ಸೇಬು ತಿನ್ನಲು ಸಲಹೆ ನೀಡುತ್ತಾರೆ. ದಿನಕ್ಕೊಂದು ಸೇಬು ತಿಂದರೆ ಕ್ಯಾನ್ಸರ್, ಹೈಪರ್ ಟೆನ್ಶನ್, ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು (heart disease) ದೂರವಾಗುತ್ತದೆ.  ಇಷ್ಟೆಲ್ಲಾ ಲಾಭ ಇದ್ದರೂ ಕೂಡಾ ಸೇಬು ತಿಂದರೆ ಒಂದಿಷ್ಟು ಹಾನಿ ಕೂಡಾ ನಿಮ್ಮ ಆರೋಗ್ಯದ ಮೇಲಾಗುತ್ತದೆ.

ಸೇಬು ತಿನ್ನುವುದರ ಲಾಭ ಮತ್ತು ನಷ್ಟದ ಬಗ್ಗೆ ತಿಳಿಯೋಣ. 
1. ಡಯಾಬಿಟಿಸ್ 
ಸೇಬು ತಿಂದರೆ ಡಯಾಬಿಟಿಸ್ (diabetes) ದೂರವಾಗುತ್ತದೆ.  ಸೇಬಿನಲ್ಲಿರುವ ಫೈಬರ್ ಕೆಟ್ಟ ಕೊಲೆಸ್ಟಾರಲ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಡಯಾಬಿಟಿಸ್ ಅನ್ನು ಕಡಿಮೆ ಮಾಡಲು ನೆರವಾಗುತ್ತದೆ. 

ಇದನ್ನೂ ಓದಿ : Asafoetida health benefits : ಇಲ್ಲಿವೆ ಚಿಟಿಕೆ ಇಂಗಿನ ಅದ್ಭುತ ಆರೋಗ್ಯ ಲಾಭಗಳು

2. ಇಮ್ಯೂನಿಟಿ
ಸೇಬಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಫೈಟೋಕೆಮಿಕಲ್ ಇರುತ್ತದೆ. ಇದು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು (immunity)ಹೆಚ್ಚಿಸುತ್ತದೆ. 

3. ಬಲಿಷ್ಠ ಮೂಳೆ
ಸೇಬಿನಲ್ಲಿ ಕ್ಯಾಲ್ಸಿಯಂ, ಪಾಸ್ಪರಸ್ ಮುಂತಾದ ಪೋಷಕಾಂಶಗಳು ಬೇಕಾದಷ್ಟಿರುತ್ತವೆ. ಇವು ಬಲಿಷ್ಠ ಮೂಳೆಯ ಬೆಳವಣಿಗೆಗೆ (good for bone development) ನೆರವಾಗುತ್ತವೆ.

ಸೇಬು ತಿಂದರೆ ಉಂಟಾಗುವ ಹಾನಿ ಏನು.?
1. ಬೊಜ್ಜು
ಸೇಬು ಆರೋಗ್ಯಕ್ಕೆ ಒಳ್ಳೆಯದು ಹೌದು. ಆದರೆ ಇದರಲ್ಲಿ ಕ್ಯಾಲರಿ ಮತ್ತು ಶುಗರ್ ಬಹುದೊಡ್ಡ ಪ್ರಮಾಣದಲ್ಲಿರುತ್ತದೆ. ಅಧಿಕ ಸೇಬು ತಿಂದರೆ ಕೊಬ್ಬು (fat) ಬೆಳೆಯುತ್ತದೆ. ಜೊತೆಗೆ ಬೊಜ್ಜು ಬರುತ್ತದೆ.

ಇದನ್ನೂ ಓದಿ : Curd/Yoghurt Tips: ಈ ಪದಾರ್ಥಗಳನ್ನು ಮೊಸರಿನೊಂದಿಗೆ ಅಪ್ಪಿ-ತಪ್ಪಿಯೂ ತಿನ್ನಲೇಬಾರದು

2. ಅಲರ್ಜಿ
ಕೆಲವರಿಗೆ ಸೇಬು ತಿಂದರೆ ಅಲರ್ಜಿ (allergy) ಆಗುತ್ತದೆ. ಅಲರ್ಜಿ ಇದ್ದರೆ ಸೇಬು ಸೇವನೆಯಿಂದ ದೂರ ಇರಿ

3. ಹೊಟ್ಟೆಯ ಸಮಸ್ಯೆ
ಸೇಬಿನಲ್ಲಿ ಉಚ್ಛ ಮಟ್ಟದ ಫೈಬರ್ ಇದೆ. ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಉತ್ಪನ್ನವಾಗಬಹುದು. ಇದರಿಂದ ಹೊಟ್ಟೆ ನೋವು ಕೂಡಾ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ :  ಈರುಳ್ಳಿ ಕತ್ತರಿಸುವಾಗ ಈ ಟ್ರಿಕ್ಸ್ ಬಳಸಿ, ಖಂಡಿತಾ ಕಣ್ಣಲ್ಲಿ ನೀರು ಬರುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News