ದೆಹಲಿ : ಕರೋನಾ (Coronavirus) ಕಾಲದಲ್ಲಿ ಮನೆಯಲ್ಲೇ ಕುಳಿತು ಬೋರ್ ಆಗಿದ್ದರೆ ಖಂಡಿತಾ ಪನೀರ್ ಪೆಪ್ಪರ್ (Paneer pepper) ಡ್ರೈ ಟ್ರೈ ಮಾಡಿ. ಇದು ಫಟಾ ಫಟ್ ಇಮ್ಯೂನಿಟಿಗಾಗಿ (immunity) ತುಂಬಾ ಒಳ್ಳೆಯದು. ಡಾಕ್ಟರ್ ಕೂಡಾ ಪನೀರ್ ಪೆಪ್ಪರ್ ಡ್ರೈ ನಿಮಗೆ ಎನರ್ಜಿ ಕೊಡುತ್ತೆ ಜೊತೆಗೆ ಇಮ್ಯೂನಿಟಿ ಬೂಸ್ಟ್ ಮಾಡುತ್ತೆ ಎಂದು ಹೇಳುತ್ತಾರೆ.


COMMERCIAL BREAK
SCROLL TO CONTINUE READING

ಬೇಕಾದ ಸಾಮಾಗ್ರಿ. 
200 ಗ್ರಾಂ ಪನೀರ್ (Paneer) (ಸಣ್ಣ ಕಟ್ ಮಾಡಿ ಇಟ್ಟುಕೊಳ್ಳಿ), 1 ಚಮಚ ಪೆಪ್ಪರ್, ಅರ್ಧ ಚಮಚ ಜೀರಿಗೆ, ಒಂದು ಕಪ್ ಕ್ಯಾಪ್ಸಿಕಮ್ (Capcicum) ಮತ್ತು ಉದ್ದಗೆ ಹಚ್ಚಿದ ಈರುಳ್ಳಿ.  ಒಂದು ಚಮಚ ಲಿಂಬೆ ರಸ (Lemon juice) , ರುಚಿಗೆ ತಕ್ಕಷ್ಟು ಉಪ್ಪು. 


ಇದನ್ನೂ ಓದಿ : ತುಳಸಿ ಎಲೆ ಸೇವನೆ ಕೂಡಾ ಅಪಾಯಕಾರಿಯಾಗಬಹುದು..! ದೇಹದ ಈ ಭಾಗಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ ತುಳಸಿ


ಮಾಡುವ ವಿಧಾನ :
1 ಮೊದಲು ಪೆಪ್ಪರ್ ಮತ್ತು ಜೀರಿಗೆಯನ್ನು ಗ್ರೃಂಡರಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ.
2. ಈ ಪುಡಿಯನ್ನು ಕಟ್ ಮಾಡಿ ಇಡಲಾಗಿರುವ ಪನೀರ್ ಗೆ ಮಿಕ್ಸ್ ಮಾಡಿ. ಚೆನ್ನಾಗಿ ಮಿಕ್ಸ್ ಮಾಡಿ ಹತ್ತು ನಿಮಿಷ ಹಾಗೇ ಇಡಿ.  
3. ಒಲೆ ಮೇಲೆ ಪಾನ್ ಇಟ್ಟು, ಸ್ವಲ್ಪ  ಎಣ್ಣೆ ಅಥವಾ ತುಪ್ಪ (Ghee) ಹಾಕಿ ಬಿಸಿ ಮಾಡಿ, ನಂತರ ಕತ್ತರಿಸಿದ ಈರುಳ್ಳಿ (Onion) ಹಾಕಿ, ಬಾಡಿಸುತ್ತಾ ಇರಿ.
4. ನಂತರ ಕ್ಯಾಪ್ಸಿಕಂ ಸೇರಿಸಿ. ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು ಸೇರಿಸಿ ಫ್ರೈ ಮಾಡುತ್ತಾ ಇರಿ.
5.  ಮಸಾಲೆ ಹಾಕಿ ನೆನೆಸಿಟ್ಟ ಪನೀರನ್ನು ಈಗ ಪಾನ್ ಗೆ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. 
6. ಲಿಂಬೆ ರಸ ಸೇರಿಸಿ ಚೆನ್ನಾಗಿ ಗಾರ್ನಿಶ್ ಮಾಡಿ. 
7. ಪನೀರ್ ಪೆಪ್ಪರ್ ಡ್ರೈ (paneer pepper dry)  ಈಗ ಸವಿಯಲು ಸಿದ್ದ.


ಪೆಪ್ಪರ್, ಪನೀರ್, ಲಿಂಬೆ, ಜೀರಿಗೆ ಇತ್ಯಾದಿ ಮಸಾಲೆಗಳಲ್ಲಿ ಉತ್ತಮ ರೋಗ ನಿರೋಧಕ ಶಕ್ತಿ (Immunity) ಇರುತ್ತದೆ. ಇವೆಲ್ಲವನ್ನೂ ಸೇರಿಸಿ ಪನೀರ್ ಪೆಪ್ಪರ್ ಡ್ರೈ ಮಾಡಿದರೆ, ನಾಲಿಗೆಗೂ ರುಚಿ. ಆರೋಗ್ಯಕ್ಕೂ ಖುಷಿ. ಇವತ್ತೇ ಟ್ರೈ ಮಾಡಿ. ಆರೋಗ್ಯ ಕಾಪಾಡಿಕೊಳ್ಳಿ.


ಇದನ್ನೂ ಓದಿ : ಇಮ್ಯೂನಿಟಿ ಹೆಚ್ಚಿಸಲು ಬಿಸಿ ಬಿಸಿ ರಸಂ ಸೇವಿಸಿ, ಖರ್ಚು ಕಡಿಮೆ ತುಂಬಾ ಟೇಸ್ಟಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.