ತುಳಸಿ ಎಲೆ ಸೇವನೆ ಕೂಡಾ ಅಪಾಯಕಾರಿಯಾಗಬಹುದು..! ದೇಹದ ಈ ಭಾಗಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ ತುಳಸಿ

 ಶೀತ, ಕೆಮ್ಮು ಮತ್ತು ಸಾಮಾನ್ಯ ಜ್ವರಗಳಂತ ಕಾಯಿಲೆಗಳಿಗೆ ತುಳಸಿಯನ್ನು ಔಷಧಿಯಾಗಿ ಬಳಸಲಾಗುತ್ತದೆ. ಕೆಲವರಿಗೆ ತುಳಸಿ ಎಲೆಯನ್ನು ಹಾಗೇ ಜಗಿದು ತಿನ್ನುವ ಅಭ್ಯಾಸವಿರುತ್ತದೆ. ಇದು ಕೆಲ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. 

Written by - Ranjitha R K | Last Updated : May 14, 2021, 03:30 PM IST
  • ತುಳಸಿಗೆ ಹಿಂದೂ ಪದ್ಧತಿಯಲ್ಲಿ ವಿಶೇಷ ಪ್ರಾಧಾನ್ಯತೆಯಿದೆ
  • ತುಳಸಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
  • ಅತಿಯಾಗಿ ಸೇವಿಸಿದರೆ ಅಡ್ಡ ಪರಿಣಾಮವೂ ಆಗುತ್ತದೆ
ತುಳಸಿ ಎಲೆ ಸೇವನೆ ಕೂಡಾ ಅಪಾಯಕಾರಿಯಾಗಬಹುದು..! ದೇಹದ ಈ ಭಾಗಗಳ ಮೇಲೆ ಭಾರೀ ಪರಿಣಾಮ ಬೀರುತ್ತದೆ ತುಳಸಿ title=
ಅತಿಯಾಗಿ ತುಳಸಿ ಸೇವಿಸಿದರೆ ಅಡ್ಡ ಪರಿಣಾಮವೂ ಆಗುತ್ತದೆ (file photo)

ಬೆಂಗಳೂರು : ಶಾಸ್ತ್ರದಲ್ಲಿ ತುಳಸಿಗೆ (Tulsi) ಬಹಳ ಪ್ರಾಧಾನ್ಯತೆಯಿದೆ. ಮನೆಯಂಗಳಲ್ಲಿ ತುಳಸಿ ಗಿಡವನ್ನು ನೆಡುವುದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ತುಳಸಿ ಆರೋಗ್ಯಕ್ಕೆ (Health benefits of Tulsi) ತುಂಬಾ ಪ್ರಯೋಜನಕಾರಿ. ಅನೇಕ ಜನರು ಪ್ರತಿದಿನ ತುಳಸಿಯನ್ನು ಸೇವಿಸುತ್ತಾರೆ. ತುಳಸಿ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಸೇವಿಸಲು ಕೂಡಾ ಒಂದು ನಿಯಮವಿದೆ.  ತುಳಸಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುವುದು ಮಾತ್ರವಲ್ಲ ಇನ್ನೂ ಅನೇಕ ಔಷಧೀಯ ಪ್ರಯೋಜನಗಳಿವೆ. ಹೌದು,  ಶೀತ, ಕೆಮ್ಮು ಮತ್ತು ಸಾಮಾನ್ಯ ಜ್ವರಗಳಂತ ಕಾಯಿಲೆಗಳಿಗೆ ತುಳಸಿಯನ್ನು ಔಷಧಿಯಾಗಿ ಬಳಸಲಾಗುತ್ತದೆ. ಕೆಲವರಿಗೆ ತುಳಸಿ ಎಲೆಯನ್ನು ಹಾಗೇ ಜಗಿದು ತಿನ್ನುವ ಅಭ್ಯಾಸವಿರುತ್ತದೆ. ಇದು ಕೆಲ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. 

 ಹಲ್ಲುಗಳನ್ನು ಹಾಳುಮಾಡುತ್ತವೆ -:
ತುಳಸಿ ಎಲೆಗಳನ್ನು (Tulsi leaves) ಅಗಿಯುವುದರಿಂದ ಹಲ್ಲುಗಳಿಗೆ ಹಾನಿಯುಂಟಾಗಬಹುದು. ತುಳಸಿ ಎಲೆಗಳಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುತ್ತದೆ. ಅಲ್ಲದೆ ಇದರಲ್ಲಿ ಆರ್ಸೆನಿಕ್ ಸಹ ಇರುತ್ತದೆ. ಇದರಿಂದ ಹಲ್ಲು ನೋವು (Tooth pain) ಕಾಣಿಸಿಕೊಳ್ಳಬಹುದು. 

ಇದನ್ನೂ ಓದಿ : White Onion Benefits : ಬೇಸಿಗೆಯಲ್ಲಿ ಪುರುಷರು ಬಿಳಿ ಈರುಳ್ಳಿ ಸೇವಿಸಬೇಕು! ಯಾಕೆ ಇಲ್ಲಿ ನೋಡಿ

ರಕ್ತವನ್ನು ತೆಳ್ಳಗೆ ಮಾಡುತ್ತದೆ :
ಹೆಚ್ಚು ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿ ರಕ್ತ (Blood) ತೆಳ್ಳಗಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಾಲ್ಫಾರಿನ್ ಮತ್ತು ಹೆಪಾರಿನ್ ನಂತಹ ಔಷಧಿಗಳನ್ನು ತೆಗೆದುಕೊಳ್ಳುವವರು ತುಳಸಿ ಎಲೆಗಳನ್ನು ಸೇವಿಸಬಾರದು.

ಇನ್ ಫರ್ಟಿಲಿಟಿ  ಸಮಸ್ಯೆ ಕಾಡಬಹುದು : 
ಹೆಚ್ಚು ತುಳಸಿ ಎಲೆಗಳನ್ನು ಸೇವಿಸುವುದರಿಂದ ಇನ್ ಫರ್ಟಿಲಿಟಿ (Infertility) ಸಮಸ್ಯೆ ಕಾಡಬಹುದು. ತುಳಸಿ ಎಲೆಗಳ ಅತಿಯಾದ ಸೇವನೆಯು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಗರ್ಭಿಣಿಯರಿಗೆ ಸಮಸ್ಯೆಯಾಗಬಹುದು : 
ಗರ್ಭಿಣಿಯರು ಹೆಚ್ಚು ತುಳಸಿ ಎಲೆಗಳನ್ನು ಸೇವಿಸಿದರೆ, ಅದು ಅವರ ಆರೋಗ್ಯ (Health) ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ : ಇಮ್ಯೂನಿಟಿ ಹೆಚ್ಚಿಸಲು ಬಿಸಿ ಬಿಸಿ ರಸಂ ಸೇವಿಸಿ, ಖರ್ಚು ಕಡಿಮೆ ತುಂಬಾ ಟೇಸ್ಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News