French fries: ನೀವು ಬಾಯಿ ಚಪ್ಪರಿಸಿ ತಿನ್ನುವ ʻಫ್ರೆಂಚ್ ಫ್ರೈʼ ಈ ಮಾರಕ ರೋಗಕ್ಕೆ ಕಾರಣ!
French fries Effects On Mental Health: ಕರಿದ ಆಹಾರಗಳನ್ನು, ವಿಶೇಷವಾಗಿ ಆಲೂಗಡ್ಡೆಗಳನ್ನು ಎಣ್ಣೆಯಲ್ಲಿ ಕರಿದು ಸೇವಿಸುವುದರಿಂದ ಖಿನ್ನತೆಯ ಅಪಾಯ ಹೆಚ್ಚಾಗುತ್ತದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆಯು ಚೀನಾದಲ್ಲಿ ನಡೆದಿದೆ.
Disadvantages Of Eating French Fries: ಫ್ರೆಂಚ್ ಫ್ರೈಗಳು ಅನೇಕ ಜನರ ನೆಚ್ಚಿನ ಆಹಾರವಾಗಿದೆ. ಕಾಲ ಬದಲಾದರೂ ಜನರ ಕ್ರೇಜ್ ಕಡಿಮೆಯಾಗಿಲ್ಲ. ಈ ಆಹಾರ ಆರೋಗ್ಯಕರವಲ್ಲದಿದ್ದರೂ ಜನ ಇದನ್ನು ಸೇವಿಸಲು ಇಷ್ಟ ಪಡುತ್ತಾರೆ. ಇದು ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಫ್ರೆಂಚ್ ಫ್ರೈಗಳಂತಹ ಕರಿದ ಆಹಾರಗಳನ್ನು ಆಗಾಗ್ಗೆ ಸೇವಿಸುವ ಜನರು ಖಿನ್ನತೆಗೆ ಒಳಗಾಗುತ್ತಾರಂತೆ. ಅಂತಹ ಆಹಾರವನ್ನು ಸೇವಿಸದವರಿಗಿಂತ 12 ಪ್ರತಿಶತದಷ್ಟು ಹೆಚ್ಚು ಖಿನ್ನತೆಗೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಾರೆ. ಫಾಸ್ಟ್ ಫುಡ್ ಸೇವಿಸದ ಜನರಿಗಿಂತ ಕರಿದ ಆಹಾರ ಪ್ರಿಯರಲ್ಲಿ ಖಿನ್ನತೆಯ ಅಪಾಯವು ಶೇಕಡಾ 7 ರಷ್ಟು ಹೆಚ್ಚಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಕುತ್ತಿಗೆಯ ಸುತ್ತಲಿನ ಕಪ್ಪು ಕಲೆಗೆ ಇಲ್ಲಿದೆ ಶಾಶ್ವತ ಪರಿಹಾರ
ಯುನೈಟೆಡ್ ಸ್ಟೇಟ್ಸ್ ಆಫ್ ಸೈನ್ಸಸ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ೀ ಸಂಶೋಧನೆ ಪ್ರಕಟವಾಗಿವೆ. ಸಂಶೋಧನೆಯ ಪ್ರಕಾರ, ಮಾನಸಿಕ ಆರೋಗ್ಯಕ್ಕಾಗಿ ಕರಿದ ಆಹಾರದ ಸೇವನೆಯನ್ನು ಕಡಿಮೆ ಮಾಡಬೇಕು. ಆದರೆ ಸಂಶೋಧನೆಗಳಲ್ಲಿ ಒಂದು ಪ್ರಮುಖ ಎಚ್ಚರಿಕೆ ಉಳಿದಿದೆ.
ವರದಿಗಳ ಪ್ರಕಾರ, ತಜ್ಞರು ಹೇಳುವ ಪ್ರಕಾರ, ಸಂಶೋಧನೆಯ ಫಲಿತಾಂಶಗಳು ಪ್ರಾಥಮಿಕವಾಗಿರುವುದರಿಂದ, ಕರಿದ ಆಹಾರಗಳು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತವೆಯೇ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳಿರುವವರು ಕರಿದ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ನಿಮಗೂ ತಡರಾತ್ರಿಯವರೆಗೆ ಎಚ್ಚರದಿಂದಿರುವ ಅಭ್ಯಾಸವೇ? ಈಗಲೇ ಎಚ್ಚೆತ್ತುಕೊಳ್ಳಿ
ಏಕೆಂದರೆ ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಹೊಂದಿರುವ ಜನರು ಸಾಮಾನ್ಯವಾಗಿ ಫಾಸ್ಟ್ ಫುಡ್ ಗಳತ್ತ ತಿರುಗುತ್ತಾರೆ. ಅಧ್ಯಯನವು 11.3 ವರ್ಷಗಳ ಅವಧಿಯಲ್ಲಿ 140,728 ಜನರನ್ನು ಪರೀಕ್ಷಿಸಿದೆ. ಕರಿದ ಆಹಾರವನ್ನು ಸೇವಿಸುವ ಜನರಲ್ಲಿ ಸಂಶೋಧನೆಯಲ್ಲಿ ಒಟ್ಟು 8,294 ಆತಂಕ ಮತ್ತು 12,735 ಖಿನ್ನತೆಯ ಪ್ರಕರಣಗಳು ಕಂಡುಬಂದಿವೆ. ಈ ಡೇಟಾವು ಸಂಶೋಧನೆಯ ಮೊದಲ ಎರಡು ವರ್ಷಗಳಲ್ಲಿ ಖಿನ್ನತೆಯ ಲಕ್ಷಣಗಳನ್ನು ಹೊಂದಿರುವ ಜನರನ್ನು ಒಳಗೊಂಡಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.