Unhealthy Sleep Habit: ನಿಮಗೂ ತಡರಾತ್ರಿಯವರೆಗೆ ಎಚ್ಚರದಿಂದಿರುವ ಅಭ್ಯಾಸವೇ? ಈಗಲೇ ಎಚ್ಚೆತ್ತುಕೊಳ್ಳಿ

Unhealthy Sleep Habit Effects: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಡ ರಾತ್ರಿಯವರೆಗೆ ಎಚ್ಚರದಿಂದಿರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ತಡರಾತ್ರಿಯವರೆಗೆ ಎಚ್ಚರವಾಗಿರುವುದರಿಂದ ಏನೆಲ್ಲಾ ಅನಾನುಕೂಲತೆಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Apr 25, 2023, 08:24 PM IST
  • ಬಹುತೇಕರು ರಾತ್ರಿ ಮಲಗುವಾಗ ಫೋನ್ ಬಳಸುವ ಅಭ್ಯಾಸವನ್ನು ಹೊಂದಿರುತ್ತಾರೆ.
  • ಆದರೆ ಪ್ರತಿದಿನ ತಡರಾತ್ರಿಯವರೆಗೂ ಎಚ್ಚರದಿಂದ ಇರುವುದರಿಂದ ದೃಷ್ಟಿ ಕುಂಠಿತವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
  • ಹೌದು, ಅತಿಯಾದ ಫೋನ್ ಬಳಕೆಯಿಂದ ಕಣ್ಣುಗಳಿಗೆ ಸಾಕಷ್ಟು ಹಾನಿಯಾಗುತ್ತದೆ.
Unhealthy Sleep Habit: ನಿಮಗೂ ತಡರಾತ್ರಿಯವರೆಗೆ ಎಚ್ಚರದಿಂದಿರುವ ಅಭ್ಯಾಸವೇ? ಈಗಲೇ ಎಚ್ಚೆತ್ತುಕೊಳ್ಳಿ title=

Unhealthy Sleep Habit Effects: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಡರಾತ್ರಿಯವರೆಗೆ ಎಚ್ಚರವಾಗಿರುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಇದರಿಂದ ನಿದ್ರೆ ಪೂರ್ಣವಾಗುವುದಿಲ್ಲ ಮತ್ತು ನಿಮಗೆ ತಿಳಿಯದೆಯೇ ಹಲವಾರು ರೋಗಗಳು ನಿಮ್ಮನ್ನು ಸುತ್ತುವಯಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮಗೂ ತಡರಾತ್ರಿಯವರೆಗೆ ಎಚ್ಚರದಿಂದ ಇರುವ ಅಭ್ಯಾಸವಿದ್ದರೆ ಜಾಗರೂಕರಾಗಿರಿ. ತಡರಾತ್ರಿಯವರೆಗೂ ಎಚ್ಚರವಾಗಿರುವುದರ ಅನನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ?

ತಡರಾತ್ರಿಯವರೆಗೆ ಎಚ್ಚರದಿಂದರುವುದರ ಹಾನಿಗಳು
ದೃಷ್ಟಿ ಕಡಿಮೆಯಾಗುತ್ತದೆ 

ಬಹುತೇಕರು ರಾತ್ರಿ ಮಲಗುವಾಗ ಫೋನ್ ಬಳಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಪ್ರತಿದಿನ ತಡರಾತ್ರಿಯವರೆಗೂ ಎಚ್ಚರದಿಂದ ಇರುವುದರಿಂದ ದೃಷ್ಟಿ ಕುಂಠಿತವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?  ಹೌದು, ಅತಿಯಾದ ಫೋನ್ ಬಳಕೆಯಿಂದ ಕಣ್ಣುಗಳಿಗೆ ಸಾಕಷ್ಟು ಹಾನಿಯಾಗುತ್ತದೆ.

ಒತ್ತಡ ಸಮಸ್ಯೆ
ನೀವು ಕೂಡ ತಡರಾತ್ರಿಯವರೆಗೂ ಎಚ್ಚರದಿಂದ ಇದ್ದರೆ, ನಿಮಗೆ ಟೆನ್ಷನ್ ಸಮಸ್ಯೆ ಶುರುವಾಗುತ್ತದೆ. ಏಕೆಂದರೆ ನಿದ್ರೆಯ ಕೊರತೆಯು ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೀಗಾಗಿ ತಡರಾತ್ರಿಯವರೆಗೆ ಎಚ್ಚರದಿಂದ ಇರುವುದನ್ನು ತಪ್ಪಿಸಿ.

ಜೀರ್ಣಕ್ರಿಯೆಯಲ್ಲಿ ಅಡಚಣೆಗಳು
ತಡರಾತ್ರಿಯವರೆಗೂ ಎಚ್ಚರದಿಂದಿರುವುದರಿಂದ, ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ, ಇದರಿಂದಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ, ಹೀಗಾಗಿ ತಡರಾತ್ರಿಯವರೆಗೆ ಎಚ್ಚರವಾಗಿರುವುದನ್ನು ತಪ್ಪಿಸಿ.

ಇದನ್ನೂ ಓದಿ-Magical Juices: ಈ ಮೂರು ತರಕಾರಿಗಳ ಜ್ಯೂಸ್ ಸೇವಿಸಿ ಹಲವು ಕಾಯಿಲೆಗಳಿಂದ ದೂರ ಉಳಿಯಿರಿ

ಸ್ಥೂಲಕಾಯತೆ ಸಮಸ್ಯೆ ಎದುರಾಗುತ್ತದೆ
ತಡರಾತ್ರಿಯವರೆಗೆ ಎಚ್ಚರದಿಂದ ಇರುವುದು ನಿಮ್ಮ ದೇಹವನ್ನು ದಣಿದಂತೆ ಮಾಡುತ್ತದೆ ಮತ್ತು ನೀವು ಸ್ಥೂಲಕಾಯತೆಗೆ ಬಲಿಯಾಗಲು ಪ್ರಾರಂಭಿಸುತ್ತೀರಿ. ಹೀಗಾಗಿ ಸಾಕಷ್ಟು ನಿದ್ರೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ರಾತ್ರಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ ಬೆಳಗ್ಗೆ ಫ್ರೇಶ್ ಆಗಿ ಏಳಬೇಕು.

ಇದನ್ನೂ ಓದಿ-​Chanakya Niti: ಮಹಿಳೆಯರು ಮಾಡುವ ಈ 3 ತಪ್ಪುಗಳು ಭಾರಿ ನಷ್ಟ ತಂದೊಡ್ಡುತ್ತವೆ!

ಚರ್ಮದ ಮೇಲೆ ಪ್ರರಿಣಾಮ
ತಡರಾತ್ರಿಯವರೆಗೆ ಎಚ್ಚರದಿಂದಿರುವುದು ತ್ವಚೆಯ ಮೇಲೂ ಪ್ರಭಾವ ಬೀರುತ್ತದೆ. ಈ ಕಾರಣದಿಂದಾಗಿ, ಚರ್ಮವು ಕಾಂತಿ ಕಳೆದುಕೊಂಡು, ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ. ಆದ್ದರಿಂದ, ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಇರುವಂತೆ ಮಾಡಲು ನೀವೂ ಕೂಡ ಬಯಸುತ್ತಿದ್ದರೆ,  ತಡರಾತ್ರಿಯವರೆಗೆ ಎಚ್ಚರವಾಗಿರುವುದನ್ನು ನಿಲ್ಲಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News