Fruit Juice: ಹಣ್ಣುಗಳ ಜ್ಯೂಸ್ ತೆಗೆಯುವಾಗ ನೀವೂ ಈ ಕೆಲಸ ಮಾಡುತ್ತಿಲ್ಲವಲ್ಲ? ಲಾಭದ ಬದಲು ಹಾನಿಯೇ ಜಾಸ್ತಿ
Homemade Juice -ಹೆಚ್ಚಿನ ಜನರು ಮನೆಯಲ್ಲಿ ಜ್ಯೂಸ್ ತಯಾರಿಸಲು ಜ್ಯೂಸರ್ ಮಿಕ್ಸರ್ ಬಳಸುತ್ತಾರೆ, ಆದರೆ ಜ್ಯೂಸ್ ತಯಾರಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಇದನ್ನು ಮಾಡದಿದ್ದರೆ ಅದರ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುವುದಿಲ್ಲ.
ನವದೆಹಲಿ: Health Benefits Of Juice - ಹಣ್ಣುಗಳಿಂದ ರಸವನ್ನು ಹೊರತೆಗೆಯುವಾಗ ಅನೇಕ ಬಾರಿ ನಾವು ಮಾಡುವ ಕೆಲ ತಪ್ಪುಗಳಿಂದ ನಮಗೆ ಲಾಭದ ಬದಲು ಹಾನಿಯೇ ಜಾಸ್ತಿಯಾಗುತ್ತದೆ. ಒಂದು ಗ್ಲಾಸ್ ತಾಜಾ ಜ್ಯೂಸ್ ಕುಡಿಯುವುದರಿಂದ ನಿಮಗೆ ತ್ವರಿತ ಶಕ್ತಿ ಸಿಗುತ್ತದೆ ಏಕೆಂದರೆ ಅದು ರಕ್ತದಿಂದ ಸುಲಭವಾಗಿ ಹೀರಲ್ಪಡುತ್ತದೆ ಮತ್ತು ನಮಗೆ ಚೇತರಿಕೆಗೆ ಅದು ಸಹಾಯ ಮಾಡುತ್ತದೆ. ಹಣ್ಣುಗಳು (Fruit Juice) ಮತ್ತು ತರಕಾರಿಗಳು (Vegitable Juice) ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತವೆ, ಆದ್ದರಿಂದ ಅವುಗಳನ್ನು ನಮ್ಮ ದೈನಂದಿನ ಆಹಾರದಲ್ಲಿ (Daily Diet) ಸೇರಿಸುವುದು ಮುಖ್ಯವಾಗಿದೆ. ಹಣ್ಣುಗಳಿಂದ ರಸವನ್ನು ಹೊರತೆಗೆಯುವಾಗ ನಾವು ಕೆಲವು ಸಂಗತಿಗಳ ಬಗ್ಗೆ ಗಮನ ಹರಿಸಬೇಕು, ಅದರಿಂದ ನಮಗೆ ಹೆಚ್ಚಿನ ಲಾಭ ಸಿಗುತ್ತದೆ.
ಹೋಮ್ ಮೇಡ್ ಜ್ಯೂಸ್ (Homemade Juice) ತಯಾರಿಸುವ ಸರಿಯಾದ ವಿಧಾನ
ಮನೆಯಲ್ಲಿ ತಯಾರಿಸಲಾಗುವ ಹಣ್ಣಿನ ರಸ ಹೆಚ್ಚು ಪ್ರಯೋಜನಕಾರಿ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ, ಆದರೆ ಅದನ್ನು ಹೊರತೆಗೆಯಲು ಸರಿಯಾದ ಮಾರ್ಗ ಯಾವುದು ಎಂಬುದನ್ನು ತಿಳಿಯುವುದು ಭಹಲ ಮುಖ್ಯ. ಹೆಚ್ಚಿನವರು ಮನೆಯಲ್ಲಿ ಜ್ಯೂಸ್ ತಯಾರಿಸಲು ಜ್ಯೂಸರ್ ಮಿಕ್ಸರ್ ಬಳಸುತ್ತಾರೆ, ಆದರೆ ಜ್ಯೂಸ್ ತಯಾರಿಸುವಾಗ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಇದನ್ನು ಮಾಡದಿದ್ದರೆ ಅದರ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುವುದಿಲ್ಲ. ಇದರಿಂದ ಅದರ ರುಚಿಯೂ ಕೂಡ ಹಾಳಾಗುತ್ತದೆ. ನೀವು ಬೆಳಗಿನ ಉಪಹಾರದಲ್ಲಿ ಜ್ಯೂಸ್ ಕುಡಿದರೆ, ನಂತರ ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
>> ನೀವು ಮನೆಯಲ್ಲಿ ಹಣ್ಣುಗಳಿಂದ ರಸವನ್ನು ತಯಾರಿಸುತ್ತಿದ್ದರೆ, ಜ್ಯೂಸರ್ ಯಂತ್ರವು ತುಂಬಾ ಬಿಸಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.
>> ಜ್ಯೂಸರ್‌ನಲ್ಲಿರುವ ಹೆಚ್ಚುವರಿ ಶಾಖವು ಹಣ್ಣುಗಳು ಮತ್ತು ತರಕಾರಿಗಳಲ್ಲಿರುವ ಪೋಷಕಾಂಶಗಳನ್ನು ನಾಶಪಡಿಸುತ್ತದೆ ಮತ್ತು ಆ ಜ್ಯೂಸ್‌ನ ಆರೋಗ್ಯ ಪ್ರಯೋಜನಗಳು ನಿಮಗೆ ಸಿಗುವುದಿಲ್ಲ.
ಇದನ್ನೂ ಓದಿ-ಫುಡ್ ಪಾಯಿಸನ್ ಆದರೆ ತಕ್ಷಣ ಸೇವಿಸಿ ಈ ವಸ್ತುಗಳನ್ನು, ಚಿಟಿಕಿಯಲ್ಲಿ ಪರಿಹಾರ ಸಿಗುತ್ತದೆ
>> ಯಾವಾಗಲೂ ಸಾಮಾನ್ಯ ತಾಪಮಾನದಲ್ಲಿ ಜ್ಯೂಸ್ ಕುಡಿಯಿರಿ. ಹೆಚ್ಚು ತಣ್ಣಗಾಗುವ ಮೂಲಕ ಅಲ್ಲ.
>> ರಸವನ್ನು ತೆಗೆದ ತಕ್ಷಣ ಅದನ್ನು ಎಂದಿಗೂ ಫ್ರಿಜ್ ನಲ್ಲಿ ಇಡಬೇಡಿ. ಇದು ರಸದ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ.
>> ಹಣ್ಣುಗಳು ಈಗಾಗಲೇ ಸಾಕಷ್ಟು ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ, ಆದ್ದರಿಂದ ಅದಕ್ಕೆ ಸಕ್ಕರೆ ಸೇರಿಸಬೇಡಿ. ಅತಿಯಾದ ಸಕ್ಕರೆ ರಸವು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.
>> ತರಕಾರಿ ರಸಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅದರ ಮೇಲೆ ಉಪ್ಪು ಅಥವಾ ಮಸಾಲೆಗಳನ್ನು ನೀವು ಸೇರಿಸುತ್ತಿಲ್ಲ ಎಂಬುದರ ಎಚ್ಚರಿಕೆವಹಿಸಿ.
>> ಹಣ್ಣಿನಲ್ಲಿ ಬೀಜಗಳಿದ್ದರೆ ಅವುಗಳನ್ನು ತೆಗೆಯಿರಿ. ಬೀಜಗಳಿಂದ ರಸದ ರುಚಿ ಹಾಳಾಗುತ್ತದೆ ಮತ್ತು ಅದರಿಂದ ನಿಮಗೆ ಯಾವುದೇ ಪ್ರಯೋಜನ ಕೂಡ ಆಗುವುದಿಲ್ಲ.
>> ಕಹಿ ರುಚಿಯನ್ನು ಹೊಂದಿರುವ ಎಲ್ಲಾ ತರಕಾರಿಗಳನ್ನು ಮಿಶ್ರಣ ಮಾಡಬೇಡಿ. ಇದು ರಸದ ರುಚಿಯನ್ನು ಹಾಳು ಮಾಡುತ್ತದೆ ಮತ್ತು ನೀವು ಅದನ್ನು ಕುಡಿಯಲು ಸಾಧ್ಯವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.