ಫುಡ್ ಪಾಯಿಸನ್ ಆದರೆ ತಕ್ಷಣ ಸೇವಿಸಿ ಈ ವಸ್ತುಗಳನ್ನು, ಚಿಟಿಕಿಯಲ್ಲಿ ಪರಿಹಾರ ಸಿಗುತ್ತದೆ

Herbs For Food Poisoning: ಕೆಲವೊಮ್ಮೆ ನಮಗಿಷ್ಟವಾದ ಆಹಾರ ಸೇವಿಸಿದಾಗಲೂ ಫುಡ್ ಪಾಯಿಸನ್ ಆಗಬಹುದು. ಇನ್ನು ಮಳೆಗಾಲದಲ್ಲಂತೂ ಫುಡ್ ಪಾಯಿಸನ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

Written by - Ranjitha R K | Last Updated : Sep 20, 2021, 08:38 PM IST
  • ಪ್ರತಿ ವರ್ಷ ಅನೇಕ ಜನರು ಫುಡ್ ಪಾಯಿಸನ್ ಗೆ ಬಲಿಯಾಗುತ್ತಾರೆ.
  • ಕೆಲವೊಮ್ಮೆ ಇಷ್ಟದ ಆಹಾರ ತಿಂದರೂ ಅನಾರೋಗ್ಯ ಉಂಟಾಗಬಹುದು.
  • ಫುಡ್ ಪಾಯಿಸನ್ ಗುಣಪಡಿಸಲು ಈ ವಸ್ತುಗಳ ಸೇವನೆಯು ಪ್ರಯೋಜನಕಾರಿ.
ಫುಡ್ ಪಾಯಿಸನ್ ಆದರೆ ತಕ್ಷಣ ಸೇವಿಸಿ ಈ ವಸ್ತುಗಳನ್ನು,  ಚಿಟಿಕಿಯಲ್ಲಿ ಪರಿಹಾರ ಸಿಗುತ್ತದೆ

ನವದೆಹಲಿ : Herbs For Food Poisoning: ಕೆಲವೊಮ್ಮೆ ನಮಗಿಷ್ಟವಾದ ಆಹಾರ ಸೇವಿಸಿದಾಗಲೂ ಫುಡ್ ಪಾಯಿಸನ್ (Food Poision) ಆಗಬಹುದು. ಇನ್ನು ಮಳೆಗಾಲದಲ್ಲಂತೂ ಫುಡ್ ಪಾಯಿಸನ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಸಿಹಿ ತಿನಿಸು, ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದಾಗ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಎದುರಾಗುವುದು ಸಾಮಾನ್ಯ. ನೈರ್ಮಲ್ಯವಿಲ್ಲದ ಆಹಾರ ನಿರ್ವಹಣೆಯಿಂದ ಫುಡ್ ಪಾಯಿಸನ್ ಸಮಸ್ಯೆ ಉಂಟಾಗುತ್ತದೆ.  ಇದು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಬೆಳೆಸುತ್ತದೆ ಮತ್ತು ಹರಡುತ್ತದೆ. ಪ್ರತಿ ವರ್ಷ ಅನೇಕ ಜನರು  ಈ ಫುಡ್ ಪಾಯಿಸನ್ ನಿಂದಲೇ ಪ್ರಾಣ ಕಳೆದುಕೊಳ್ಳುತ್ತಾರೆ. ಹಾಗಿದ್ದರೆ ಫುಡ್ ಪಾಯಿಸನ್ ಆದಾಗ ಏನು ಮಾಡಬೇಕು ? 

ಫುಡ್ ಪಾಯಿಸನ್ ತಡೆಯುವ ನೈಸರ್ಗಿಕ ಗಿಡಮೂಲಿಕೆಗಳು :
1. ಶುಂಠಿ :
ಶುಂಠಿಯು (Ginger) ಫುಡ್ ಪಾಯಿಸನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯ ಆಂಟಿ ಇನ್ಫ್ಲಮೇಟರಿ ಗುಣಲಕ್ಷಣ ಹೊಟ್ಟೆಯ ಒಳಪದರವನ್ನುಶಾಂತವಾಗಿರಿಸುತ್ತದೆ. ತುರಿದ ಶುಂಠಿಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ಅಗತ್ಯವಿರುವಂತೆ ಜೇನುತುಪ್ಪ (Honey) ಅಥವಾ ಸಕ್ಕರೆ ಸೇರಿಸಿ ಮಿಶ್ರಣ ಮಾಡಿ ಕುಡಿಯಿರಿ. ಇದರ ಬದಲು ಸಾಧ್ಯವಾದರೆ ಶುಂಠಿಯ ತುಂಡುಗಳನ್ನು ಹಾಗೇಯೇ ತಿನ್ನಬಹುದು.

ಇದನ್ನೂ ಓದಿ : Snoring Problem: ಮಲಗುವಾಗ ನೀವೂ ಗೊರಕೆ ಹೊಡೆಯುತ್ತೀರಾ? ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತಿಳಿಯಿರಿ

2. ಮೊಸರು ಮತ್ತು ಮೆಂತ್ಯ ಬೀಜಗಳು :
ಮೊಸರಿನಲ್ಲಿರುವ (Curd) ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಫುಡ್ ಪಾಯಿಸನ್ ಗೆ ಕಾರಣವಾಗುವ ರೋಗಾಣುಗಳ ವಿರುದ್ಧದ ಹೋರಾಡುವಲ್ಲಿ ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳಲ್ಲಿ ನಾರಿನ ಅಂಶವಿರುತ್ತದೆ. ಮೆಂತ್ಯ ಬೀಜಗಳು ಹೊಟ್ಟೆ ನೋವಿಗೆ ಉತ್ತಮ ಪರಿಹಾರವಾಗಿರುತ್ತದೆ. 

3. ಬೆಳ್ಳುಳ್ಳಿ :
ಬೆಳ್ಳುಳ್ಳಿಯನ್ನು (Garlic) ಜ್ವರ ಮತ್ತು ಹೃದಯರಕ್ತನಾಳದ ಸಮಸ್ಯೆಗಳಿಗೆ ಪರಿಹಾರವ಻ಗಿ ಬಳಸಲಾಗುತ್ತದೆ. ಇದು ಪ್ರಬಲವಾದ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಪರಿಣಾಮಗಳಿಂದಾಗಿ ಅತಿಸಾರ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ ದು ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ನೀರಿನೊಂದಿಗೆ 
(Water) ತೆಗೆದುಕೊಂಡರೆ ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ದೂರ ಮಾಡಬಹುದು. ಇನ್ನು ಬೆಳ್ಳುಳ್ಳಿಯ ವಾಸನೆಯನ್ನು ತಡೆದುಕೊಳ್ಳಬಹುದು ಎನ್ನುವ ಹಾಗಿದ್ದರೆ ಬೆಳ್ಳುಳ್ಳಿಯ ರಸ ತೆಗೆದು ಸೇವಿಸುವುದು ಕೂಡಾ ಒಳ್ಳೆಯದು. 

ಇದನ್ನೂ ಓದಿ : Immunity Booster: ಬೇವು ಹಾಗೂ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನುವುದರ ಹಲವು ಲಾಭಗಳಿವೆ, PM Modi ಕೂಡ ಈ ಉಪಾಯ ಅನುಸರಿಸುತ್ತಾರೆ

4. ಜೇನು :
ಜೇನುತುಪ್ಪದ (Honey) ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದಾಗಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಶುದ್ಧಜೇನುತುಪ್ಪವನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಬೇಕಾದರೆ, ಚಹಾ (Tea) ಅಥವಾ ನಿಂಬೆ ಪಾನಕದೊಂದಿಗೆ ಜೇನು ತುಪ್ಪ ಸೇವಿಸಬಹುದು. 

5. ಜೀರಿಗೆ :
ಫುಡ್ ಪಾಯಿಸನ್ ಆದಾಗ ಸಾಮಾನ್ಯವಾಗಿ ಬಳಸುವ ಮನೆ ಮದ್ದು ಎಂದರೆ ಜೀರಿಗೆ (Cumin seed). ಇದು ನಿಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಒಂದು ಕಪ್ ನೀರಿನಲ್ಲಿ ಜೀರಿಗೆಯನ್ನು ಕುದಿಸಿ, ಕೊತ್ತಂಬರಿ ಸೊಪ್ಪಿನ ರಸವನ್ನು ಮಿಶ್ರಣ ಮಾಡಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಿರಿ. ಉಪ್ಪು, ಜೀರಿಗೆ ಮತ್ತು ಹಿಂಗ್ ಮಿಶ್ರಣವನ್ನು ಸಹ ಬಳಸಬಹುದು.

ಇದನ್ನೂ ಓದಿ : Cardamom Benefits : ದೇಹ ತೂಕ ಇಳಿಕೆಗೆ ತಪ್ಪದೆ ಪ್ರತಿ ದಿನ ರಾತ್ರಿ ಈ ರೀತಿ ಸೇವಿಸಿ 4 ಏಲಕ್ಕಿ!

6. ತುಳಸಿ :
ಫುಡ್ ಪಾಯಿಸನ್ ವಿರುದ್ಧ ಬಳಸುವ ಅತ್ಯುತ್ತಮ ಗಿಡಮೂಲಿಕೆ ಎಂದರೆ, ತುಳಸಿ (Tulsi) ಅಥವಾ ತುಳಸಿ ಎಲೆಗಳು. ತುಳಸಿ ಎಲೆಗಳು ಆಂಟಿ ಇನ್ಫ್ಲಮೇಟರಿ ಗುಣಗಳನ್ನು ಹೊಂದಿದ್ದು ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News