ನವದೆಹಲಿ : ಇನ್ನೇನು ಹಲಸಿನ ಹಣ್ಣಿನ (Jackfruit) ಸೀಸನ್ ಆರಂಭವಾಗಲಿದೆ. ಮೇಣ, ಮುಳ್ಳು, ರಚ್ಚೆ ಅಂಥ ಹೇಳಿ ಹಲಸು ತಿನ್ನದೇ ಇರಬೇಡಿ. ನಿಮ್ಮ ಆರೋಗ್ಯಕ್ಕೆ ಇದು ನಿತ್ಯ ಸಂಜೀವಿನಿ (Health Benefits). ಇವತ್ತು ನಿಮಗೆ ಹಲಸಿನ ಹಣ್ಣಿನ ಪ್ರಯೋಜನಗಳ ಬಗ್ಗೆ ಹೇಳುತ್ತೇವೆ.  ಹಲಸು ತಿನ್ನಲು ಎಷ್ಟು ರುಚಿಯೋ ದೇಹಾರೋಗ್ಯಕ್ಕೂ ಅಷ್ಟೇ ಉತ್ತಮ. ಹಲಸಿನ ಹಣ್ಣಿಲ್ಲಿ ಬಗೆ ಬಗೆಯ ಖಾದ್ಯ, ಪಲ್ಯ , ಮುಳ್ಕ,  ಇತ್ಯಾದಿ ರುಚಿಕರ ತಿನಿಸನ್ನು ಮಾಡುತ್ತಾರೆ. ನಾಲಗೆಗಷ್ಟೇ ಅಲ್ಲ, ದೇಹಾರೋಗ್ಯಕ್ಕೂ ಹಲಸು ಹಲವು ರೀತಿಯಲ್ಲಿ ಅನುಕೂಲಕಾರಿ.


COMMERCIAL BREAK
SCROLL TO CONTINUE READING

ಹಲಸು ತಿಂದರೆ ಭರ್ಜರಿಯಾಗಿ ಸಿಗುತ್ತೆ ವಿಟಮಿನ್ :
ಹಲಸಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತದೆ. ವಿಟಮಿನ್ ಎ ದೃಷ್ಟಿ (Eye sight) ಬಲಪಡಿಸುತ್ತದೆ. ವಿಟಮಿನ್ ಬಿ6 ಮೆದುಳಿನ ಆರೋಗ್ಯ (Health) ಕಾಪಾಡುತ್ತದೆ. ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾಕಷ್ಟು ಹಲಸನ್ನು ತಿನ್ನಿ ಎಂದು ವೈದ್ಯರು ಸಲಹೆ ನೀಡುತ್ತಾರೆ.


ಇದನ್ನೂ ಓದಿ :  ಈ ನೀರು..ನಿಜಕ್ಕೂ ಅಮೃತ ಸಮಾನ..! ಜಪಾನಿ ಜಲ ಥೆರಪಿ ಟ್ರೈ ಮಾಡಿ. ತುಂಬಾ ಸಿಂಪಲ್..!


ಕರೋನಾ ವಿರುದ್ಧ ಸಮರಕ್ಕೆ ಸಹಕಾರಿ :
ಹಲಸಿನ ವಿಶೇಷವೆಂದರೆ, ಅದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು  (Immunity) ಅತ್ಯಂತ ವೇಗವಾಗಿ ಹೆಚ್ಚಿಸುತ್ತದೆ. ಹಾಗಾಗಿ ಕರೋನಾ (Coronavirus) ವಿರುದ್ಧ ಸಮರಕ್ಕೆ ಅದರ ಸೇವನೆ ಅತ್ಯಂತ ಒಳ್ಳೆಯದು. ದಿನ ನಿತ್ಯ ಹಲಸು ತಿಂದರೆ ದೇಹದ ಬ್ಲಡ್ ಶುಗರ್ (Blood Sugar) ನಿಯಂತ್ರಣದಲ್ಲಿರುತ್ತದೆ.  ಬ್ಲಡ್ ಶುಗರ್ ಕಡಿಮೆ ಮಾಡಲು ಇದಕ್ಕಿಂತ ಒಳ್ಳೆಯ ಹಣ್ಣು ಬೇರೊಂದಿಲ್ಲ. ಹೃದಯಾಘಾತವನ್ನೂ (Heart Attack) ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟಾಶಿಯಂ ಸಿಗುತ್ತದೆ. ಇದು ಹೃದಯದ ಮಾಂಸಖಂಡಗಳನ್ನು ಬಲಗೊಳಿಸುತ್ತದೆ.  


ಜೀರ್ಣಕ್ರೀಯೆಗೆ ರಾಮಬಾಣ :
ಹಲಸಿನಲ್ಲಿ ಸಾಕಷ್ಟು ಫೈಬರ್ ಸಿಗುತ್ತದೆ. ಮಲಬದ್ಧತೆ ಇರುವವರು ಇದನ್ನು ತಿನ್ನಲೇ ಬೇಕು. ಜೀರ್ಣ ಕ್ರಿಯೆ ಸರಾಗವಾಗಲು ಹಲಸು ಸಾಕಷ್ಟು ಸಹಕಾರಿ. ಜೀರ್ಣ ದೋಷ ಇರುವವರು ಹಲಸಿನ ಪಲ್ಯ ತಿನ್ನಬೇಕು. 


ಇದನ್ನೂ ಓದಿ :  ಅಡುಗೆ ಎಣ್ಣೆಯಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು! ಯಾವ Cooking Oil ಬೆಸ್ಟ್..?


ತ್ವಚೆಯನ್ನು ‘ಯಂಗ್’ ಆಗಿ ಇಡುತ್ತದೆ :
ಹಲಸು ನಮ್ಮ ದೇಹದಲ್ಲಿ ಕೊಲೆಜನ್ ಎಂಬ ಪ್ರೊಟೀನ್ ಉತ್ಪಾದನೆಗೆ ನೆರವಾಗುತ್ತದೆ. ಈ ಕೊಲೆಜನ್ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇಕು. ಇದು ತ್ವಚೆಯನ್ನು ಕಾಪಾಡುತ್ತದೆ. ಸುಕ್ಕು ಗಟ್ಟದಂತೆ (Wrinkle)  ತಡೆಯುತ್ತದೆ.  ವಿಟಮಿನ್ ಸಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕಂತೂ ಬಹಳಷ್ಟು ಉತ್ತಮ


ಅಸ್ತಮಾಕ್ಕಿದು ಅತ್ಯುತ್ತಮ:
ಹಲಸಿನ ಹಣ್ಣಿನಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಲಭ್ಯವಾಗುತ್ತದೆ.  ಅನಿಮಿಯ ಸಮಸ್ಯೆ ಇರುವವರಿಗೆ ಹಲಸು ರಾಮಬಾಣ. ಹಲಸು ತಿನ್ನುವುದರಿಂದ ರಕ್ತ ಪರಿಚಲನೆ (Blood  Circulation) ತುಂಬಾ ಚೆನ್ನಾಗಿ ಆಗುತ್ತದೆ. ಅಸ್ತಮ ರೋಗಿಗಳೂ ಹಲಸು  ತಿನ್ನಬೇಕು. ಹಲಸನ್ನು ನೀರಿನಿಂದ ಚೆನ್ನಾಗಿ ಬೇಯಿಸಿ ತಿಂದರೆ ಅಸ್ತಮ ಗುಣವಾಗುತ್ತದೆ.


ಇದನ್ನೂ ಓದಿ :  Quit Non Veg : ಉತ್ತಮ ಆರೋಗ್ಯಕ್ಕೆ ಸಸ್ಯಾಹಾರವೇ ಮುಖ್ಯ.. ತಿಳಿದುಕೊಳ್ಳಿ ಸಸ್ಯಾಹಾರದ ಪ್ರಯೋಜನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.