ಈ ನೀರು..ನಿಜಕ್ಕೂ ಅಮೃತ ಸಮಾನ..! ಜಪಾನಿ ಜಲ ಥೆರಪಿ ಟ್ರೈ ಮಾಡಿ. ತುಂಬಾ ಸಿಂಪಲ್..!

ನೀರು ನಮಗೆ ಎಷ್ಟು ಅಗತ್ಯ ಅನ್ನೋದು ಯಾರಿಗೂ ಹೇಳಬೇಕಾಗಿಲ್ಲ. ನಮ್ಮ ದೇಹಲ್ಲಿ ಶೇ. 70 ರಷ್ಟು ಪ್ರಮಾಣದಲ್ಲಿ ನೀರು ಇದೆ.  ದಿನಕ್ಕೆ ಕನಿಷ್ಠ 7 ರಿಂದ 10 ಗ್ಲಾಸ್ ನೀರು ಕುಡಿಯಲೇ ಬೇಕು.

Written by - Ranjitha R K | Last Updated : Jan 22, 2021, 04:24 PM IST
  • ಕೇವಲ ನೀರು ಕುಡಿಯುವುದರಿಂದಲೇ ಎಷ್ಟೋ ಕಾಯಿಲೆಗಳನ್ನು ಗುಣಮಾಡಬಹುದು. ಫಿಟ್ ಇರಬಹುದು.
  • ನೀರು ನಿಜಕ್ಕೂ ಸಂಜೀವಿನಿ. ಜಪಾನಿಯರು ದೇಹಾರೋಗ್ಯಕ್ಕೆ ಬಳಸುತ್ತಾರೆ ಜಲಥೆರಪಿ.!
  • ಈ ಜಲ ಥೆರಪಿ ತುಂಬಾ ಸಿಂಪಲ್..ಯಾವುದೇ ಖರ್ಚಿಲ್ಲ. ಅದರ ಟಿಪ್ಸ್ ಇಲ್ಲಿದೆ.
ಈ ನೀರು..ನಿಜಕ್ಕೂ ಅಮೃತ ಸಮಾನ..!  ಜಪಾನಿ ಜಲ ಥೆರಪಿ ಟ್ರೈ ಮಾಡಿ. ತುಂಬಾ ಸಿಂಪಲ್..! title=
ನೀರು ನಿಜಕ್ಕೂ ಸಂಜೀವಿನಿ. ಜಪಾನಿಯರು ದೇಹಾರೋಗ್ಯಕ್ಕೆ ಬಳಸುತ್ತಾರೆ ಜಲಥೆರಪಿ.!(file photo)

ಬೆಂಗಳೂರು : ನೀರು ನಮಗೆ ಎಷ್ಟು ಅಗತ್ಯ ಅನ್ನೋದು ಯಾರಿಗೂ ಹೇಳಬೇಕಾಗಿಲ್ಲ. ನಮ್ಮ ದೇಹಲ್ಲಿ ಶೇ. 70 ರಷ್ಟು ಪ್ರಮಾಣದಲ್ಲಿ ನೀರು ಇದೆ.  ದಿನಕ್ಕೆ ಕನಿಷ್ಠ 7 ರಿಂದ 10 ಗ್ಲಾಸ್ ನೀರು ಕುಡಿಯಲೇ ಬೇಕು. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಜೇನು ತುಪ್ಪ ಹಾಗೂ ಲಿಂಬು ರಸ ಸೇರಿಸಿ ಬೆಳಗ್ಗೆ ಎದ್ದ ಕೂಡಲೇ ಕುಡಿದರೆ, ದೇಹಕ್ಕೆ ತುಂಬಾ ಶಕ್ತಿ ಸಿಗುತ್ತೆ ಮತ್ತು ದೇಹದ ಮೆಟಬಾಲಿಸಂ ಕೂಡಾ ಹೆಚ್ಚಾಗುತ್ತೆ ಅನ್ನೋದು ಹಲವು ಆಹಾರ ಪಂಡಿತರ ಅಭಿಮತ.

ತುಂಬಾ ಒಳ್ಳೆಯ ಅಂಟಿ ಬಯಾಟಿಕ್ ಅಂತಲೂ ಹೇಳುತ್ತಾರೆ : 
ನೀರಿನ (Water) ಬಗ್ಗೆ ವಿಶ್ವಾದ್ಯಂತ ಹಲವು ರೀತಿಯ ನಂಬಿಕೆಗಳಿವೆ. ಆರೋಗ್ಯ (Health) ನಿಯಮಗಳಿವೆ.  ಇವತ್ತು ನಾವು ವಿಶೇಷವಾಗಿ ಜಪಾನಿನ ವಾಟರ್ ಥೆರಪಿ (Water therapy) ಬಗ್ಗೆ ತಿಳಿದುಕೊಳ್ಳೋಣ.   ಜಪಾನಿಯನ್ನರು ಒಂದು ವಿಶಿಷ್ಠ ರೀತಿಯ ವಾಟರ್ ಥೆರಪಿಯನ್ನು ಅನುಸರಿಸುತ್ತಾರೆ. ಈ ಥೆರಪಿಯಿಂದ ದೇಹದ ತೂಕ (Weight Loss) ಕಡಿಮೆಯಾಗುತ್ತದೆ ಮತ್ತು  ದಿನವಿಡೀ ಫಿಟ್ ಇರಲು ನೆರವಾಗುತ್ತದೆ  ಅಂತಾರೆ ಜಪಾನಿಯನ್ನರು. ನೀರನ್ನು ಬಳಸಿ ಆರೋಗ್ಯದ ಸಮತೋಲನ ಹಾಗೂ ಫಿಟ್ನೆಸ್ ಕಾಯ್ದುಕೊಳ್ಳುವುದು ಈ ಥೆರಪಿಯ ಉದ್ಧೇಶ. ಜಪಾನಿನ ಜಲ ಥೆರಪಿಯಿಂದ ನಮ್ಮ ಕರಳು ಸ್ವಚ್ಛವಾಗುತ್ತದೆ. ಜೊತೆಗೆ ಜೀರ್ಣ ವ್ಯವಸ್ಥೆ ಬಲವಾಗುತ್ತದೆ. 

ಇದನ್ನೂ ಓದಿಅಡುಗೆ ಎಣ್ಣೆಯಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು! ಯಾವ Cooking Oil ಬೆಸ್ಟ್..?

ಹಾಗಾದ್ರೆ, ಈ ಜಲ ಥೆರಪಿ ಏನು ಹೇಳುತ್ತದೆ..?:
ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಿರಿ ಎನ್ನುವುದು ಈ ಥೆರಪಿಯ ಮೂಲ ಮಂತ್ರ. ಜಪಾನಿಯನ್ನರು ಬೆಳಗ್ಗಿನ ಸಮಯವನ್ನು ಆರೋಗ್ಯಕ್ಕೆ (Health) ಸಂಬಂಧ ಪಟ್ಟಂತೆ ಗೋಲ್ಡನ್ ಸಮಯ ಅಂತಾ ಹೇಳ್ತಾರೆ. ಬೆಳಗ್ಗೆ ನೀರು ಕುಡಿಯುವುದರಿಂದ ಜೀರ್ಣ ವ್ಯವಸ್ಥೆ (Digestive System) ಬಲವಾಗುತ್ತದೆ. ಅಲ್ಲದೇ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸಲು ಕೂಡಾ ನೆರವಾಗುತ್ತದೆ. ತೂಕ ಕಡಿಮೆಯಾಗುತ್ತದೆ. ಇದು ಸ್ಟ್ರೆಸ್ ಕೂಡಾ ಕಡಿಮೆ ಮಾಡುತ್ತದೆಯಂತೆ.  ದಿನವಿಡಿ ನಮ್ಮನ್ನು ಎನರ್ಜೆಟಿಕ್ ಆಗಿಡುತ್ತದೆ.  ಆದರೆ, ನೆನಪಿಡಿ. ಯಾವುದಾದರೂ ಕಾಯಿಲೆಯಿಂದ ಬಳಲುತಿದ್ದರೆ ಡಾಕ್ಟರ್ ಸಲಹೆ ಬಳಿಕವೇ ವಾಟರ್ ಥೆರಪಿ ಬಳಸಿ.

ಹೀಗಿದೆ ಜಪಾನ್ ಜಲ ಥೆರಪಿ :  
1. ಬೆಳಗ್ಗೆ ಎದ್ದ ಕೂಡಲೇ  4 ರಿಂದ 6 ಲೋಟ ನೀರು ಕುಡಿಯಿರಿ. ನೀರು ಸ್ವಲ್ಪ ಬಿಸಿ (Hot Water) ಇದ್ದರೂ ಪರವಾಗಿಲ್ಲ. ನಿಂಬು ರಸ ಸೇರಿಸಿದರೆ ಇನ್ನೂ ಉತ್ತಮ. 
2. ಒಂದೇ ಸಲ 4 ಗ್ಲಾಸ್ ನೀರು ಕುಡಿಯಲು ಆಗದಿದ್ದರೆ,  ಬಿಟ್ಟು ಬಿಟ್ಟು ನೀರು ಕುಡಿಯಬಹುದು
3. ನೀರು ಕುಡಿದ ಮೇಲೆ ಚೆನ್ನಾಗಿ ಹಲ್ಲುಜ್ಜಿ. 45 ನಿಮಿಷ ಏನನ್ನೂ ತಿನ್ನಬಾರದು. ಇದರ ನಂತರ ರೆಗ್ಯುಲರ್ ರೂಟಿನ್ ಶುರು ಮಾಡಬಹುದು. 
4. ಭೋಜನದ ನಂತರ ಕನಿಷ್ಠ 2 ಗಂಟೆಯ ತನಕ ಏನನ್ನೂ ಕುಡಿಯಬಾರದು ಮತ್ತು ತಿನ್ನಬಾರದು. 
5. ಕೋಲ್ಡ್ ನೀರು ಅಂದರೆ ಫ್ರಿಜಲ್ಲಿಟ್ಟ ನೀರು, ಐಸ್ (Ice) ಹಾಕಿದ ನೀರು ಕುಡಿಯಬಾರದು. ಇದರಿಂದ  ಬಿಪಿ (BP) ಹೆಚ್ಚಾಗುತ್ತದೆಯಂತೆ. 
6.  ದಿನನಿತ್ಯ ಕನಿಷ್ಠ ಅರ್ಧ ಗಂಟೆ ವಾಕ್ ಮಾಡಿ.
7. ಮಲಗುವ ಮುನ್ನ ಬಿಸಿನೀರಲ್ಲಿ ಬಾಯಿ ಮುಕ್ಕಳಿಸಿ.  ಇದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.
8. ಯಾವತ್ತು  ನಿಂತುಕೊಂಡು ಏನನ್ನೂ ಕುಡಿಯಬೇಡಿ, ತಿನ್ನಬೇಡಿ.  ಖಡ್ಡಾಯವಾಗಿ ಕುಳಿತು ಕುಡಿಯಿರಿ/ತಿನ್ನಿರಿ. 

ಇದನ್ನೂ ಓದಿ : Quit Non Veg : ಉತ್ತಮ ಆರೋಗ್ಯಕ್ಕೆ ಸಸ್ಯಾಹಾರವೇ ಮುಖ್ಯ.. ತಿಳಿದುಕೊಳ್ಳಿ ಸಸ್ಯಾಹಾರದ ಪ್ರಯೋಜನ

ಜಪಾನಿ ಜಲಪದ್ದತಿ ಒಂದು ಜೀವನ ಪದ್ದತಿ. ಅದನ್ನು ಅನುಸರಿಸುವುದು ಕಷ್ಟ ಏನಲ್ಲ. ವಯೋವೃದ್ಧರು ಮತ್ತು ಕಾಯಿಲೆಯಿಂದ ಬಳಲುವವರು ಈ ಥೆರಪಿ ಮಾಡುವ ಮುನ್ನ ವೈದ್ಯರ ಸಲಹೆ ಕೇಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News