Garlic Health Benefits - ಹಾಗೆ ನೋಡಿದರೆ, ದಿನದ ಯಾವುದೇ ಹೊತ್ತಿನಲ್ಲಿ ಕೂಡ ನೀವು ಬೆಳ್ಳುಳ್ಳಿಯನ್ನು ಸೇವಿಸಬಹುದು, ಆದರೆ ಕೆಲವರು ಇದನ್ನು ರಾತ್ರಿಯ ಹೊತ್ತು ಹೆಚ್ಚು ಸೇವಿಸುತ್ತಾರೆ. ಹೀಗಿರುವಾಗ ರಾತ್ರಿ ಮಲಗುವಾಗ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ ಮತ್ತು ಪುರುಷರಿಗೆ ಇದರಿಂದ ಹೇಗೆ ಲಾಭವಾಗುತ್ತದೆ ಎಂಬ ಪ್ರಶ್ನೆ ಹಲವರಿಗೆ ಕಾಡುತ್ತದೆ. ಇನ್ನೊಂದೆಡೆ ಬೆಳ್ಳುಳ್ಳಿ ಮನೆಯ ಅಡುಗೆ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಒಂದು ಪದಾರ್ಥವಾಗಿದೆ. ಆದ್ದರಿಂದ ಇದನ್ನು ಆಹಾರದಲ್ಲಿ ಸೇರಿಸುವ ಮೊದಲು, ಅದರ ಪ್ರಯೋಜನಗಳೇನು ಮತ್ತು ರಾತ್ರಿಯಲ್ಲಿ ಇದನ್ನು ಏಕೆ ತಿನ್ನುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

COMMERCIAL BREAK
SCROLL TO CONTINUE READING

ರಾತ್ರಿ ಮಲಗುವಾಗ ಬೆಳ್ಳುಳ್ಳಿಯನ್ನು ಏಕೆ ಸೇವಿಸಬೇಕು?
ಮೊದಲನೆಯದಾಗಿ, ರಾತ್ರಿಯಲ್ಲಿ ಬೆಳ್ಳುಳ್ಳಿ ಸೇವನೆಯು ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ.ಇದರಿಂದ ಹಲವು ದೊಡ್ಡ ರೋಗಗಳು ನಿಮ್ಮಿಂದ ದೂರ ಉಳಿಯುತ್ತವೆ. ಅಂದರೆ ಬೆಳ್ಳುಳ್ಳಿ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಹೀಗಾಗಿ ಅದನ್ನು ನೀವು ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳಬೇಕು. ರಾತ್ರಿಯಲ್ಲಿ ಇದನ್ನು ಸೇವಿಸಿದರೆ ಹೆಚ್ಚು ಲಾಭವಾಗುತ್ತದೆ.


ರಾತ್ರಿ ಬೆಳ್ಳುಳ್ಳಿ ಸೇವನೆಯಿಂದಾಗುವ ಲಾಭಗಳೇನು?
>> ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ರಾತ್ರಿ ಹೊತ್ತು ಬೆಳ್ಳುಳ್ಳಿಯನ್ನು ಸೇವಿಸಬೇಕು.
>> ತೂಕ ಇಳಿಕೆಗೂ ಕೂಡ ಇದು ತುಂಬಾ ಲಾಭಕಾರಿಯಾಗಿದೆ.
>> ಶೀತ ಮತ್ತು ಜ್ವರ ಇರುವವರು ಬೆಳ್ಳುಳ್ಳಿಯನ್ನು ಸೇವಿಸಿದರೆ ಅದರಿಂದ ಲಾಭ ಸಿಗುತ್ತದೆ.
>> ಮೂಳೆಗಳ ಬೆಳವಣಿಗೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
>> ಅಷ್ಟೇ ಅಲ್ಲ ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
>> ನೆನಪಿನ ಶಕ್ತಿ ಹೆಚ್ಚಿಸಲು ಬೆಳ್ಳುಳ್ಳಿ ತುಂಬಾ ಉಪಯುಕ್ತ.


ಇದನ್ನೂ ಓದಿ-Drinking Water Before Brushing: ಬೆಳಗ್ಗೆ ಬ್ರಷ್ ಮಾಡದೆಯೇ ನೀರು ಕುಡಿಯುವುದು ಲಾಭಕಾರಿಯೇ ಅಥವಾ ಹಾನಿಕಾರಕ?

ಪುರುಷರ ಪಾಲಿಗೆ ಇದು ಹೇಗೆ ಲಾಭಕಾರಿಯಾಗಿದೆ?
ವೈವಾಹಿಕ ಜೀವನ ಸರಿಯಾಗಿ ಇಲ್ಲದ ಪುರುಷರು ಬೆಳ್ಳುಳ್ಳಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದು ನಿಮ್ಮಲ್ಲಿರುವ ದೌರ್ಬಲ್ಯವನ್ನು ತೊಡೆದುಹಾಕಿ, ಪತ್ನಿಯ ಜೊತೆಗಿನ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಅಂದರೆ, ದೈಹಿಕ ದೌರ್ಬಲ್ಯ ಹೊಂದಿರುವ ಪುರುಷರಿಗೆ ಬೆಳ್ಳುಳ್ಳಿ ತುಂಬಾ ಉಪಯುಕ್ತವಾಗಿದೆ. ಹೀಗಾಗಿ ನೀವು ಖಂಡಿತವಾಗಿಯೂ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆದರೆ. ನೀವು ಇದನ್ನು ನಿಯಮಿತವಾಗಿ ಸೇವಿಸಬೇಕು, ಆಗ ಮಾತ್ರ ನೀವು ಅದರ ಸಂಪೂರ್ಣ ಲಾಭವನ್ನು ಪಡೆಯಬಹುದು.


ಇದನ್ನೂ ಓದಿ-Ginger Oil: ಈ ಎಣ್ಣೆ ಬಳಕೆಯಿಂದ ಕೀಲುನೋವು ಮಂಗಮಾಯ, ನೀವೂ ಟ್ರೈ ಮಾಡಿ ನೋಡಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.