Cholesterol Symptoms: ಕಾಲಿನಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ

Cholesterol Symptoms: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವಿಕೆಯ ಹಲವು ಲಕ್ಷಣಗಳಿದ್ದರೂ ಕೂಡ, ಅವುಗಳಲ್ಲಿನ ಕೆಲ ಲಕ್ಷಣಗಳು ಕಂಡು ಬಂದರೆ ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ. ಕಾರಣ ಅದರಿಂದ ನಿಮ್ಮ ಪ್ರಾಣಕ್ಕೆ ಬಹುದೊಡ್ಡ ಸಂಚಕಾರವೇ ಬರಬಹುದು.   

Written by - Nitin Tabib | Last Updated : May 28, 2022, 07:09 PM IST
  • ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಅದರ ಲಕ್ಷಣಗಳು ಕಾಲುಗಳಲ್ಲಿಯೂ ಕಂಡುಬರುತ್ತವೆ.
  • ನೀವು ಸರಿಯಾದ ಸಮಯದಲ್ಲಿ ಅದರ ಬಗ್ಗೆ ಗಮನ ಹರಿಸದಿದ್ದರೆ, ನಂತರ ನಿಮ್ಮ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು.
  • ಸಾಧ್ಯವಾದರೆ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬೇಡಿ.
Cholesterol Symptoms: ಕಾಲಿನಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ title=
Cholesterol Symptoms

Cholesterol Symptoms: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಅದರ ಲಕ್ಷಣಗಳು ಕಾಲುಗಳಲ್ಲಿಯೂ ಕಂಡುಬರುತ್ತವೆ. ನೀವು ಸರಿಯಾದ ಸಮಯದಲ್ಲಿ ಅದರ ಬಗ್ಗೆ ಗಮನ ಹರಿಸದಿದ್ದರೆ, ನಂತರ ನಿಮ್ಮ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು. ಸಾಧ್ಯವಾದರೆ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಇಲ್ಲದಿದ್ದರೆ, ನೀವು ಹೃದಯಾಘಾತಕ್ಕೆ ಬಲಿಯಾಗಬಹುದು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಹಲವಾರು ರೀತಿಯ ರೋಗಗಳು ನಿಮ್ಮ ದೇಹದಲ್ಲಿ ಮನೆಮಾಡುವ ಸಾಧ್ಯತೆ ಇದೆ. ಹಾಗಾದರೆ ಕಾಲುಗಳ ಮೇಲೆ ಕಾಣಿಸಿಕೊಳ್ಳುವ ಲಕ್ಷಣಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

ಪಾದಗಳು ತಂಪಾಗುವುದು ಅಧಿಕ ಕೊಲೆಸ್ಟ್ರಾಲ್ ಲಕ್ಷಣ
ಚಳಿಗಾಲದಲ್ಲಿ ಪಾದಗಳು ತಂಪಾಗುವುದು ಸರ್ವೇಸಾಮಾನ್ಯ, ಆದರೆ ಸುಡುವ ಬೇಸಿಗೆ ಕಾಲದಲ್ಲಿಯೂ ಕೂಡ ಇದು ಸಂಭವಿಸುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ ಏನೋ ದೊಡ್ಡ ತಪ್ಪು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದು ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು. ಇಂತಹ ಸಂದರ್ಭಗಳಲ್ಲಿ, ತಕ್ಷಣ ತಪಾಸಣೆಗೆ ಒಳಗಾಗಬೇಕು. 

ಪಾದದ ಚರ್ಮದ ಬಣ್ಣ ಬದಲಾವಣೆ
ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಕಾರಣ, ಪಾದಗಳ ರಕ್ತ ಪೂರೈಕೆಯ ಮೇಲೆ ಪರಿಣಾಮವೂ ಉಂಟಾಗುತ್ತದೆ, ಈ ಪರಿಣಾಮವನ್ನು ನೀವು ಪಾದಗಳ ಮೇಲೆ ಸ್ಪಷ್ಟವಾಗಿ ಕಾಣಬಹುದು. ರಕ್ತದ ಕೊರತೆಯಿಂದಾಗಿ, ರಕ್ತದ ಮೂಲಕ ತಲುಪುವ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗುವುದರಿಂದ ಚರ್ಮದ ಮತ್ತು ಕಾಲುಗಳ ಉಗುರುಗಳ ಬಣ್ಣವು ಬದಲಾಗಲಾರಂಭಿಸುತ್ತದೆ.

ಇದನ್ನೂ ಓದಿ-Health Care Tips: ಅಧಿಕ ರಕ್ತದೊತ್ತಡ ಇರುವವರು ಈ ಜ್ಯೂಸ್ ಖಂಡಿತ ಸೇವಿಸಬೇಕು, ಬಿಪಿ ನಿಯಂತ್ರಣದಲ್ಲಿರುತ್ತದೆ

ಕಾಲಿನ ಸೆಳೆತ
ರಾತ್ರಿ ಮಲಗುವಾಗ ಹಲವು ರೀತಿಯಲ್ಲಿ ಕಾಲು ನೋವು ಇರುವ ಸಾಧ್ಯತೆ ಇರುತ್ತದೆ, ಇದು ಅಧಿಕ ಕೊಲೆಸ್ಟ್ರಾಲ್‌ನ ಒಂದು ಸಾಮಾನ್ಯ ಲಕ್ಷಣವಾಗಿದೆ. ಅಂದರೆ ನಿಮ್ಮ ದೇಹದ ಕೆಳಭಾಗದಲ್ಲಿರುವ ನರಗಳು ಹಾನಿಗೊಳಗಾಗುತ್ತಿವೆ ಎಂಬುದು ಇದರರ್ಥ. ಪಾದದ ಹೊರತಾಗಿ, ತೋರುಬೆರಳು, ಹಿಮ್ಮಡಿ ಅಥವಾ ಕಾಲ್ಬೆರಳುಗಳಲ್ಲಿಯೂ ಸೆಳೆತವಿದ್ದರೆ, ಅದು ನಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.

ಇದನ್ನೂ ಓದಿ-Heart Attack Risk: ಈ ಜನರಿಗೆ ಹೃದಯಾಘಾತದ ಅಪಾಯ ಹೆಚ್ಚು, ಈ ಕ್ರಮಗಳನ್ನು ಅನುಸರಿಸಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News