Face Mask: ಮುಖ ಹೊಳೆಯುವಂತೆ ಮಾಡಲು ಈ ಫೇಸ್ ಮಾಸ್ಕ್ಗಳನ್ನು ಟ್ರೈ ಮಾಡಿ ನೋಡಿ
Face Mask: ಸ್ತ್ರೀ ಆಗಿರಲಿ, ಪುರುಷನೇ ಆಗಿರಲಿ, ಇಂದಿನ ದಿನಗಳಲ್ಲಿ ಎಲ್ಲರೂ ಮುಖದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಬಿಡುವಿಲ್ಲದ ಜೀವನದಿಂದ ಸಾಮಾನ್ಯವಾಗಿ ತ್ವಚೆಯ ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಅದಾಗ್ಯೂ, ಕೆಲವು ಸರಳ ಕ್ರಮಗಳ ಮೂಲಕ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು.
Face Mask: ಮಹಿಳೆಯರೇ ಇರಲಿ ಅಥವಾ ಗಂಡಸರೇ ಇರಲಿ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಮುಖದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಬಿಡುವಿಲ್ಲದ ಕೆಲಸದಿಂದಾಗಿ ಹಲವು ಬಗ್ಗೆ ಚರ್ಮದ ಬಗ್ಗೆ ಕಾಳಜಿ ವಹಿಸಲು ಸಮಯವೇ ಸಿಗುವುದಿಲ್ಲ. ಅದರ ಪರಿಣಾಮ ಮುಖದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ನೀವೂ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಬೆಳಗಿನ ಸಮಯದಲ್ಲಿ ಮುಖದ ಬಗ್ಗೆ ಕಾಳಜಿ ವಹಿಸಲು ಸಮಯದ ಅಭಾವ ಇರುತ್ತದೆ. ಆದರೆ, ರಾತ್ರಿ ಮಲಗುವ ಮೊದಲು ಮುಖಕ್ಕೆ ಕೆಲವು ಫೇಸ್ ಮಾಸ್ಕ್ (Face Mask) ಅನ್ವಯಿಸುವುದರಿಂದ ಚರ್ಮ ಹೊಳೆಯುವಂತೆ ಮಾಡಬಹುದು.
ಮುಖದ ಸೌಂದರ್ಯ ಹೆಚ್ಚಿಸಲು ರಾತ್ರಿ ವೇಳೆ ಈ ರೀತಿಯ ಫೇಸ್ ಮಾಸ್ಕ್ ಅನ್ವಯಿಸಿ:
* ಕಲ್ಲಂಗಡಿ ರಸ :
ಕಲ್ಲಂಗಡಿ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ, ವಿಟಮಿನ್ ಎ ಮತ್ತು ವಿಟಮಿನ್ ಸಿ (Vitamin C) ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಕಲ್ಲಂಗಡಿ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ನಂತರ ಮರುದಿನ ಬೆಳಿಗ್ಗೆ ತೊಳೆಯಿರಿ. ಕಲ್ಲಂಗಡಿ ಸಹಾಯದಿಂದ, ಸುಕ್ಕುಗಳು ಕಡಿಮೆಯಾಗುತ್ತವೆ ಮತ್ತು ವಯಸ್ಸಿನ ಪರಿಣಾಮವು ಕಡಿಮೆ ಗೋಚರಿಸುತ್ತದೆ.
* ರೋಸ್ ವಾಟರ್ :
ಮುಖದ ಕಾಂತಿಗಾಗಿ ರೋಸ್ ವಾಟರ್ (Rose Water) ಬಳಸುತ್ತಾರೆ. ಇದು ತ್ವಚೆಯಲ್ಲಿ ಅಡಗಿರುವ ಕೊಳೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ತ್ವಚೆಯನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಮಲಗುವ ಮೊದಲು, ಹತ್ತಿಯ ಮೂಲಕ ಮುಖಕ್ಕೆ ರೋಸ್ ವಾಟರ್ ಅನ್ನು ಅನ್ವಯಿಸಿ ಮತ್ತು ಬೆಳಿಗ್ಗೆ ಅದನ್ನು ತೊಳೆಯಿರಿ.
ಇದನ್ನೂ ಓದಿ- ಕಿವಿ ನೋವಿನ ತೊಂದರೆಯಿಂದ ಬಳಲುತ್ತಿದ್ದೀರಾ? ಮನೆಯಲ್ಲಿಯೇ ಇದೆ ಪರಿಹಾರ!
* ಆಲೂಗಡ್ಡೆ ಜ್ಯೂಸ್-ಗ್ರೀನ್ ಟೀ :
ತಣ್ಣನೆಯ ಹಸಿರು ಚಹಾ (Green Tea) ಮತ್ತು ಆಲೂಗಡ್ಡೆ ರಸವನ್ನು ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ ನಂತರ ಅದನ್ನು ಹತ್ತಿ ಪ್ಯಾಡ್ ಬಳಸಿ ಮುಖಕ್ಕೆ ಹಚ್ಚಿ ಮತ್ತು ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಮುಖವನ್ನು ಸ್ಪರ್ಶಿಸಿದಾಗ ಅದರ ಪರಿಣಾಮವು ಸ್ಪಷ್ಟವಾಗಿ ಗೋಚರಿಸುತ್ತದೆ. ಗ್ರೀನ್ ಟೀ ನಮ್ಮ ಆರೋಗ್ಯ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿಯಾಗಿದೆ.
* ನಿಂಬೆ-ಕ್ರೀಮ್ ಫೇಸ್ ಮಾಸ್ಕ್ :
ನಿಂಬೆ ರಸವು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಚರ್ಮವನ್ನು ಟೋನ್ ಮಾಡಲು ಮತ್ತು ಎಣ್ಣೆಯಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಇದರ ಹೊರತಾಗಿ ಕ್ರೀಮ್‌ನಲ್ಲಿರುವ ಕೊಬ್ಬಿನಾಮ್ಲಗಳು ನಿಮ್ಮ ಚರ್ಮವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ, ಒಂದು ಚಮಚ ಕೆನೆ ತೆಗೆದುಕೊಂಡು ಅದರಲ್ಲಿ ನಿಂಬೆ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ, ನಂತರ ಬೆಳಿಗ್ಗೆ ಮುಖವನ್ನು ತೊಳೆಯಿರಿ.
ಇದನ್ನೂ ಓದಿ- Lemon Water: ನಿತ್ಯ ನಿಂಬೆ ನೀರಿನೊಂದಿಗೆ ದಿನ ಆರಂಭಿಸಿ, ಪಡೆಯಿರಿ 5 ಆಶ್ಚರ್ಯಕರ ಆರೋಗ್ಯ ಪ್ರಯೋಜನ
* ಹಾಲು ಮತ್ತು ಅರಿಶಿನ:
ಕೆಲವೊಮ್ಮೆ ಬಲವಾದ ಸೂರ್ಯನ ಬೆಳಕಿನಲ್ಲಿ ಮುಖವು ಟ್ಯಾನ್ ಆಗುತ್ತದೆ, ಈ ಸಂದರ್ಭದಲ್ಲಿ ಹಾಲನ್ನು ಟ್ಯಾನರ್ ವಿರೋಧಿಯಾಗಿ ಬಳಸಲಾಗುತ್ತದೆ. ಅಲ್ಲದೆ, ಅರಿಶಿನದಲ್ಲಿರುವ ಆಂಟಿಸೆಪ್ಟಿಕ್ ಮುಖಕ್ಕೆ ಹೊಳಪು ನೀಡುತ್ತದೆ. ಇವೆರಡರ ಫೇಸ್ ಮಾಸ್ಕ್ ತಯಾರಿಸಲು ಅರ್ಧ ಚಮಚ ಅರಿಶಿನ ಮತ್ತು ಹಸಿ ಹಾಲನ್ನು ಬೆರೆಸಿ ಕೈಗಳ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ತೊಳೆಯಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.