Eyes Secrets: ನಿಮ್ಮ ಕಣ್ಣುಗಳು ಕೂಡ ನಿಮ್ಮ ಆರೋಗ್ಯದ ಗುಟ್ಟನ್ನು ಹೇಳುತ್ತವೆ ಗೊತ್ತಾ? ಈ ಲಕ್ಷಣಗಳನ್ನು ಇಗ್ನೋರ್ ಮಾಡ್ಬೇಡಿ

Eyes Can open Health Secrets - ನಿಮ್ಮ ಕಣ್ಣುಗಳು (Eyes) ಕೂಡ ನಿಮ್ಮ ಆರೋಗ್ಯದ (Health Secret) ಗುಟ್ಟನ್ನು ಹೇಳುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಕಣ್ಣುಗಳು ಹೃದಯದ ಸ್ಥಿತಿಯನ್ನು ಹೇಳುತ್ತವೆ ಎಂಬುದು ಎಲ್ಲರಿಗೂ ಗೊತ್ತು, ಆದರೆ ವೈದ್ಯರು ನಿಮ್ಮ ಕಣ್ಣುಗಳನ್ನು ನೋಡಿ ನಿಮ್ಮ ಆರೋಗ್ಯದ ಬಗ್ಗೆ ಹೇಳುವುದನ್ನು ಕೂಡ ನೀವು ನೋಡಿರಬಹುದು.  

Written by - Nitin Tabib | Last Updated : Feb 20, 2022, 06:42 PM IST
  • ನಿಮ್ಮ ಕಣ್ಣುಗಳು ನಿಮ್ಮ ಆರೋಗ್ಯದ ಗುಟ್ಟನ್ನು ಹೇಳುತ್ತವೆ.
  • ಹೃದಯದ ಸ್ಥಿತಿಗತಿ ಅಲ್ಲದೆ ಈ ಅಂಶಗಳನ್ನು ಕೂಡ ಕಣ್ಣುಗಳು ಹೇಳುತ್ತವೆ.
  • ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
Eyes Secrets: ನಿಮ್ಮ ಕಣ್ಣುಗಳು ಕೂಡ ನಿಮ್ಮ ಆರೋಗ್ಯದ ಗುಟ್ಟನ್ನು ಹೇಳುತ್ತವೆ ಗೊತ್ತಾ? ಈ ಲಕ್ಷಣಗಳನ್ನು ಇಗ್ನೋರ್ ಮಾಡ್ಬೇಡಿ  title=
Eyes Can open Health Secrets (File Photo)

ನವದೆಹಲಿ: ನಿಮ್ಮ ಕಣ್ಣುಗಳು (Eyes) ನಿಮ್ಮ ಆರೋಗ್ಯದ (Secret Of Your Health) ಗುಟ್ಟನ್ನು ಹೇಳಬಲ್ಲವು. ಕಣ್ಣುಗಳು ಹೃದಯದ ಸ್ಥಿತಿಯನ್ನು ಹೇಳುತ್ತವೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ, ಆದರೆ ಹೃದಯದ ಸ್ಥಿತಿಯನ್ನು ಹೇಳುವುದರ ಜೊತೆಗೆ, ನಿಮ್ಮ ಆರೋಗ್ಯದ (Health Tips) ಸ್ಥಿತಿಯನ್ನು ಸಹ ಹೇಳಬಹುದು. ಯಾವುದೇ ಕಾಯಿಲೆಯ ಕಾರಣವನ್ನು ಕಂಡುಹಿಡಿಯುವಾಗ ವೈದ್ಯರು ಮೊದಲು ಕಣ್ಣುಗಳನ್ನು ನೋಡುವುದರ ಹಿಂದಿನ ಕಾರಣ ಕೂಡ ಇದೆ. ನಿಮ್ಮ ಕಣ್ಣುಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ, ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ನಿಮಗೆ ನೋಡಲು ಕಷ್ಟವಾಗಿದ್ದರೆ, ಉರಿ ಅಥವಾ ನೋವು ಒಂದು ಪ್ರಮುಖ ಕಾಯಿಲೆಯ ಸಂಕೇತವಾಗಿದೆ, ನಂತರ ಅದನ್ನು ಲಘುವಾಗಿ ಪರಿಗಣಿಸಬಾರದು
ಕಣ್ಣಲ್ಲಿ ನೀರು ಬಂದರೆ...
ಕಣ್ಣುಗಳಲ್ಲಿ ಹೆಚ್ಚು ನೀರು ಬರುತ್ತಿರುವಾಗ ನಿಮ್ಮ ಕಣ್ಣುಗಳಲ್ಲಿ ಕಪ್ಪು ಅಥವಾ ಕಂದು ಕಲೆಗಳು ಕಾಣಿಸಿಕೊಂಡರೆ, ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಏಕೆಂದರೆ ಇದು ತೊಂದರೆಯ ಸಂಕೇತವಾಗಿದೆ. ಅಂದರೆ, ಯಾವುದೇ ಪರಿಸ್ಥಿತಿಯಲ್ಲಿ ನೀವು ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸಬೇಕಾಗಿಲ್ಲ.

ಅಸ್ಪಷ್ಟವಾಗಿ ಕಾಣಿಸುತ್ತಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ
ಇದರ ಹೊರತಾಗಿ, ನಿಮ್ಮ ದೃಷ್ಟಿ ಮಂದವಾಗಿದ್ದರೂ ಸಹ, ನೀವು ಅದನ್ನು ಲಘುವಾಗಿ ಪರಿಗಣಿಸಬಾರದು. ಅನೇಕ ಕಾರಣಗಳಿಂದ ಜನರಿಗೆ ಮಸುಕಾಗಿ ಕಾಣಿಸಲಾರಂಭಿಸುತ್ತದೆ. ನೀವು ಬೆಳಕಿನಲ್ಲಿ ಅಥವಾ ಕತ್ತಲೆಯಲ್ಲಿ ಅಸ್ಪಷ್ಟತೆಯನ್ನು ನೋಡಿದರೆ, ನೀವು ಅದನ್ನು ನಿರ್ಲಕ್ಷಿಸಬಾರದು.

ಇದನ್ನೂ ಓದಿ-ಡಯಾಬಿಟೀಸ್ ಗೆ ಕಾರಣವಾಗುವ ನಾಲ್ಕು ಪ್ರಮುಖ ಕಾರಣಗಳಿವು..! ನೀವೂ ಎಚ್ಚೆತ್ತುಕೊಳ್ಳಿ

ಒಣ ಕಣ್ಣುಗಳು
ನೀವು ಕಣ್ಣುಗಳಲ್ಲಿ ಶುಷ್ಕತೆಯನ್ನು ಅನುಭವಿಸಿದರೂ, ಅದನ್ನು ಲಘುವಾಗಿ ಪರಿಗಣಿಸಬೇಡಿ. ಏಕೆಂದರೆ ಕಣ್ಣುಗಳು ಒಣಗಲು ಹಲವು ಕಾರಣಗಳಿರಬಹುದು. ಲೇಟ್ ನೈಟ್ ಕುಳಿತು ಕಂಪ್ಯೂಟರ್ ಪರದೆಯ ಮೇಲೆ ಕೆಲಸ ಮಾಡುವುದು, ಫೋನ್ ಹೆಚ್ಚು ಬಳಸುವುದು ಇದಕ್ಕೆ ಕಾರಣ. ಈ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ-Barefoot walking: ಬರಿಗಾಲಿನಲ್ಲಿ ನಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ

ಕಣ್ಣುಗಳ ಊತ
ಕಣ್ಣುಗಳಲ್ಲಿ ಊತ ಮತ್ತು ಕಪ್ಪು ವರ್ತುಲಗಳಿದ್ದರೂ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇದಕ್ಕೆ ಹಲವು ಕಾರಣಗಳಿರಬಹುದು. ಹಲವು ಕಾರಣಗಳಿಂದ ಕಣ್ಣುಗಳಲ್ಲಿ ಊತ ಮತ್ತು ಕಪ್ಪು ವರ್ತುಲಗಳ ಸಮಸ್ಯೆ ಉಂಟಾಗುತ್ತದೆ ಎನ್ನಲಾಗುತ್ತದೆ. ಅದಕ್ಕೆ  ಕಾರಣಗಳನ್ನು ಗುರುತಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ, ತಕ್ಷಣ ವೈದ್ಯರಿಗೆ ತೋರಿಸಿ.

ಇದನ್ನೂ ಓದಿ-Coriander water : ಪ್ರತಿದಿನ ಕೊತ್ತಂಬರಿ ನೀರು ಕುಡಿಯಿರಿ : ಇದರಿಂದ ಆರೋಗ್ಯಕ್ಕಿದೆ ಈ 6 ಪ್ರಯೋಜನಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News