Good News: Black Fungus ರೋಗಿಗಳಿಗೊಂದು ನೆಮ್ಮದಿಯ ಸುದ್ದಿ MSN Laboratories ನಿಂದ Posaconazole ಬಿಡುಗಡೆ
Medicine For Black Fungus Launched - ಈ ಕುರಿತು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಎಂಎಸ್ಎನ್ ಲ್ಯಾಬೋರೇಟರಿಸ್, ಬ್ಲಾಕ್ ಫಂಗಸ್ ಅಥವಾ ಕಪ್ಪು ಸಿಲಿಂಧ್ರಿ ಮಹಾಮಾರಿಯ ಚಿಕಿತ್ಸೆಯಲ್ಲಿ ಬಳಕೆಯಾಗುವ `ಪ್ರೋಸಾಕೋನಾಜೊಲ್ (Posaconazole) ಔಷಧಿ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ.
ನವದೆಹಲಿ: Medicine For Black Fungus Launched - ಕೊರೊನಾ ವೈರಸ್ (Coronavirus) ನ ಎರಡನೇ ಅಲೆ ದುರ್ಬಲಗೊಳ್ಳುತ್ತಿರುವ ಬೆನ್ನಲ್ಲೇ ಮತ್ತೊಂದು ಘಾತಕ ಮಹಾಮಾರಿ ದೇಶಾದ್ಯಂತ ತನ್ನ ಪಾದ ಚಾಚುತ್ತಿದೆ. ದೇಶಾದ್ಯಂತ ಇದುವರೆಗೆ ಬ್ಲಾಕ್ ಫಂಗಸ್ ನ ಸುಮಾರು 7 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳೆಕಿಗೆ ಬಂದಿವೆ. ಈ ಈ ಕಾಯಿಲೆ ಎಷ್ಟೊಂದು ವಾರಕವಾಗಿದೆ ಎಂದರೆ, ಇದುವರೆಗೆ ಸುಮಾರು 200ಕ್ಕೂ ಅಧಿಕ ಜನರು ಈ ರೋಗಕ್ಕೆ ಬಲಿಯಾಗಿದ್ದಾರೆ. ಇನ್ನೊಂದೆಡೆ MSN Laboratories ಶುಕ್ರವಾರ ಮ್ಯೂಕರ್ ಮೈಕೊಸಿಸ್ ರೋಗಿಗಳ ಉಪಚಾರಕ್ಕೆ ಬಳಸಲಾಗುವ ಪೋಸಾಕೊನಾಜೋಲ್ ಔಷಧಿ ಬಿಡುಗಡೆಗೊಳಿಸಿರುವುದಾಗಿ ಘೋಷಿಸಿದೆ. ಇದೊಂದು ಶಿಲಿಂಧ್ರೀನಾಶಕ ಟ್ರೈಜೋಲ್ ಶ್ರೇಣಿಯ ಔಷಧಿಯಾಗಿದೆ.
ಕಂಪನಿಯ ಹೇಳಿಕೆಯ ಪ್ರಕಾರ, MSN ಪಾಸಾ ಒನ್ ಬ್ರಾಂಡ್ ಹೆಸರಿನಡಿ 100mg ಮಾತ್ರೆ ಹಾಗೂ 300mg ಸಾಮರ್ಥ್ಯದ ಇಂಜೆಕ್ಷನ್ ಬಿಡುಗಡೆಗೊಳಿಸಿದೆ ಎನ್ನಲಾಗಿದೆ. ಈ ಔಷಧಿ ಬ್ಲಾಕ್ ಫಂಗಸ್ ರೋಗಿಗಳ ಉಪಚಾರದಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ.
ಇದನ್ನೂ ಓದಿ-'ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ'
"ಶಿಲಿಂಧ್ರಿ ವಿರೋಧಿ ಔಷದಿಗಳ ಕ್ಷೇತ್ರದಲ್ಲಿ ನಡೆದ ಸಂಶೋಧನೆ ಹಾಗೂ ಉತ್ಪಾದನಾ ಸಾಮರ್ಥ್ಯದ ಫಲಿತಾಂಶವೆ ಈ ಔಷಧಿ" ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿ ಇದುವರೆಗೆ ತಮ್ಮ ಬಲವಾದ ಡಿಸ್ಟ್ರೀ ಬ್ಯೂಶನ್ ನೆಟ್ವರ್ಕ್ ಮೂಲಕ ಈ ಔಷಧಿಯನ್ನು ದೇಶಾದ್ಯಂತದ ರೋಗಿಗಳವರೆಗೆ ತಲುಪಿಸುವ ಗುರಿ ಹೊಂದಿದೆ ಎಂದು ಹೇಳಿದೆ.
ಪಾಸಾ ಒನ್ ಔಷಧಿಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆ DCGI ಅನುಮತಿ ದೊರೆತಿದೆ.
ಇದನ್ನೂ ಓದಿ-Nautapa 2021: ಕೊರೊನಾ ಮಧ್ಯೆ ಬರುತ್ತಿವೆ ಸುಡುಬಿಸಿಲಿನ 9 ದಿನಗಳು, ನೀವೂ ಸಿದ್ಧರಾಗಿ
ಮ್ಯೂಕರ್ ಮೈಕೊಸಿಸ್ ಒಂದು ಫಂಗಸ್ ಕಾಯಿಲೆಯಾಗಿದೆ. ಈಗಾಗಲೇ ಯಾವುದಾದರೊಂದು ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ವಾತಾವರಣದಲ್ಲಿ ಇರುವ ರೋಗಾಣುಗಳ ಜೊತೆಗೆ ಹೋರಾಡಲು ಅಸಮರ್ಥರಾಗಿರುವ ರೋಗಿಗಳಲ್ಲಿ ಈ ಶಿಲಿಂಧ್ರಿ ರೋಗ ಕಾಣಿಸಿಕೊಳ್ಳುತ್ತಿದೆ. ಇದಲ್ಲದೆ ಮೊದಲಿನಿಂದ ಯಾವುದಾದರೊಂದು ರೋಗದಿಂದ ಬಳಲುತ್ತಿರುವವರು, ವಿರಿಕೊನಾಜೋಲ್ ಥೆರಪಿ ಅಂದರೆ ಯಾವುದಾದರೊಂದು ಗಂಭೀರ ಫಂಗಲ್ ಇನ್ಫೆಕ್ಷನ್ ನ ಚಿಕಿತ್ಸೆ ಪಡೆಯುವವರು, ಡಯಾಬಿಟಿಸ್ ನಿಯಂತ್ರಣದಲ್ಲಿರುವವರು, ಸ್ಟೆರಾಯಿಡ್ ಬಳಕೆಯಿಂದ ರೋಗ ಪ್ರತಿರೋಧಕ ಶಕ್ತಿ ದುರ್ಬಲರಾಗಿರುವವರಲ್ಲಿ, ದೀರ್ಘ ಕಾಲ ICU ನಲ್ಲಿ ಚಿಕಿತ್ಸೆ ಪಡೆದವರಲ್ಲಿ ಈ ಇನ್ಫೆಕ್ಷನ್ ಬೇಗನೆ ಕಾಣಿಸಿಕೊಳ್ಳುತ್ತಿದೆ.
ಇದನ್ನೂ ಓದಿ-ಭಾರತ ಲಸಿಕೆ ರಪ್ತಿನ ಮೇಲೆ ನಿಷೇಧ ಹೇರಿದ್ದು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಸಮಸ್ಯೆಯಾಗಿದೆ-IMF
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.