Health Tipes: ಸೋರೆಕಾಯಿ ಕಂಡರೆ ಅದನ್ನು ದೂರ ಇಡುವವರೇ ಹೆಚ್ಚು ಆದರೆ ಅದರಿಂದ ಆರೋಗ್ಯಕ್ಕೆ ಲಾಭಗಳು ಮಾತ್ರ ಹಲವಾರು ಇವೆ. ಸೋರೆಕಾಯಿ ಬಳ್ಳಿಯಲ್ಲಿ ಬಿಡುವ ಒಂದು ತರಕಾರಿಯಾಗಿದೆ. ಇದನ್ನು ಹೆಚ್ಚಾಗಿ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಇದನ್ನು ಬೆಳೆಯುವುದನ್ನು ಕಾಣಬಹುದು. 


COMMERCIAL BREAK
SCROLL TO CONTINUE READING

ಸೋರೆಕಾಯಿ ಪದರ್ಥ,ಖಾದ್ಯಗಳನ್ನು ಇಷ್ಟ ಪಡುವವರ ಸಂಖ್ಯೆ ತೀರ ಕಡಿಮೆ. ಈ  ತರಕಾರಿಯಲ್ಲಿ ಹೇರಳ ನೀರಿನಾಂಶ ವಿರುವುದರಿಂದ ಉಷ್ಣ ದೇಹವನ್ನು ಹೊಂದಿದ್ದವರಿಗೆ ಉತ್ತಮ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಸಿ,ಕ್ಯಾಲ್ಸಿಯಂ ಹೇರಳವಾಗಿದೆ.


ಇದನ್ನೂ ಓದಿ: Brinjal For Health : ಬದನೆಕಾಯಿ ಎಂದರೆ ಮೂಗು ಮುರಿಯುವವರು ಒಮ್ಮೆ ಈ ಲೇಖನ ಓದಿ....


ಸೋರೆಕಾಯಿ ಬಳ್ಳಿಯಲ್ಲಿ ಬಿಡುವ ಒಂದು ತರಕಾರಿ. ಅಧಿಕ ನೀರಿನಂಶವನ್ನು ಒಳಗೊಂಡಿರುವ ಸೋರೆಕಾಯಿಯು ಅತ್ಯಂತ ಔಷಧೀಯಗುಣಗಳನ್ನು ಒಳಗೊಂಡಿದೆ. ಈ ತರಕಾರಿ ಹಿಂದಿನ ಕಾಲದಲ್ಲಿ ಸೀಮಿತ ಅವಧಿಯಲ್ಲಿ ಅಥವಾ ಕಾಲದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಆದರೆ ಈಗ ಎಲ್ಲಾ ಕಾಲದಲ್ಲೂ ಬೆಳೆಯನ್ನು ಬೆಳೆಯುತ್ತಾರೆ.


ತೂಕ ಇಳಿಕೆಗೆ ಸಹಕಾರಿ 
ಸೋರೆಕಾಯಿಯಲ್ಲಿ ಹೆಚ್ಚು ನೀರಿನಾಂಶ ಹಾಗೂ  ಕಡಿಮೆ ಕ್ಯಾಲರಿ ಹೊಂದಿದ್ದರಿಂದ ಇದು ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಅಧಿಕ ಕೊಲೆಸ್ಟ್ರಾಲ್, ಹೃದಯದ ಆರೋಗ್ಯಕ್ಕೆ  ಸಮಸ್ಯೆಗೆ ಉಪಯುಕ್ತ.


ಇದನ್ನೂ ಓದಿ: Paneer: ಹಸಿ ಪನೀರ್ ತಿನ್ನುವುದರಿಂದ ಮಾತ್ರ ನೀವು ಈ 7 ಸಮಸ್ಯೆಗಳನ್ನು ಹೋಗಲಾಡಿಸಬಹುದು!


ಉತ್ತಮ ಆರೋಗ್ಯ ಚರ್ಮ ಆರೋಗ್ಯಕ್ಕೆ ಸಹಕಾರಿ
ಸೋರೆಕಾಯಿ ವಿಟಮಿನ್ ಎ, ಕ್ಯಾಲ್ಸಿಯಂ ಹೊಂದಿರುವುದರಿಂದ ಇದರ ನಿಯಮಿತ್ತ ಸೇವನೆ ಉತ್ತಮ ತ್ವಚ್ಛೆಗೆ ಸಹಕಾರಿಯಾಗಿದೆ.


ಕೂದಲಿಗೆ ಉತ್ತಮ ಔಷಧಿ
ಸೋರೆಕಾಯಿಯಲ್ಲಿರುವ ವಿಟಮಿನ್ ಎ ಮತ್ತು ಸತು ಪೋಷಕಾಂಶವು ಉತ್ತಮ ಆರೋಗ್ಯ ಜೊತೆಗೆ ಕಾಂತಿ ಹಾಗೂ, ಉತ್ತಮ ಕೇಶರಾಶಿಗೆ ಸಹಕಾರಿಯಾಗಿದೆ. 


ಕಿಡ್ನಿ ಸಮಸ್ಯೆಗೆ ಪರಿಹಾರ
ಈ ತರಕಾರಿಯಲ್ಲಿರುವ ನೀರಿನಾಂಶ ಇರುವುದರಿಂದ ಮೂತ್ರವ್ಯವಸ್ಥೆಯಲ್ಲಿ  ಸಮಸ್ಯೆಗಳಿಲ್ಲಿದ್ದರೆ,  ಸೋರೆಕಾಯಿ ಖಾದ್ಯವನ್ನು ಸೇವಿಸುವುದರಿಂದ  ಮೂತ್ರಪೀಂಡದಲ್ಲಿ ಕಲ್ಲು, ಮೂತ್ರದಲ್ಲಿ ಸೋಂಕಿನ ಸಮಸ್ಯೆ ಯನ್ನು ನಿವಾರಿಸುತ್ತದೆ.  


ಜೀರ್ಣಕ್ರಿಯೆ ಆರೋಗ್ಯ ಕಾಪಾಡುವುದು
ಮಲಬದ್ಧತೆಯಿಂದಾಗಿ ಹಲವಾರು ಸಮಸ್ಯೆಗೂ ಉತ್ತಮ ಆಹಾರವಾಗಿದೆ. 


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ