Brinjal For Health : ಬದನೆಕಾಯಿ ಎಂದರೆ ಮೂಗು ಮುರಿಯುವವರು ಒಮ್ಮೆ ಈ ಲೇಖನ ಓದಿ....

 brinjal benefits: ಬದನೆಕಾಯಿಯಲ್ಲಿ ಫೈಬರ್, ಕ್ಯಾಲೋರಿ, ಫೈಬರ್,ಪ್ರೋಟೀನ್,ಫೋಲೇಟ್, ಪೊಟ್ಯಾಸಿಯಮ್, ಜೀವಸತ್ವಗಳು ಮತ್ತು ಖನಿಜಗಳ ಹೇರಳವಾಗಿದೆ. ಆದ್ದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.

Written by - Zee Kannada News Desk | Last Updated : May 25, 2023, 01:12 PM IST
Brinjal For Health : ಬದನೆಕಾಯಿ ಎಂದರೆ ಮೂಗು ಮುರಿಯುವವರು ಒಮ್ಮೆ ಈ ಲೇಖನ ಓದಿ.... title=

Health Tipes: ಬದನೆಕಾಯಿ ಎಂದರೆ ಮೂಗು ಮೂಗು ಮುರಿಯುವವರೇ ಹೆಚ್ಚು. ರುಚಿ ಖಾದ್ಯ ನೀಡಿದರೂ ಬದನೆಕಾಯಿಯನ್ನು ದೂಷಿಸಿಸುತ್ತಾರೆ. ಬದನೆಕಾಯಿ ಹಲವಾರು ವಿಧಗಳನ್ನು ಒಳಗೊಂಡಿದೆ. ಇದು ಸಹ ಉತ್ತಮ ಆರೋಗ್ಯ ವೃದ್ದಿಸುವವಲ್ಲಿ ಸಹಕಾರಿಯಾಗದೆ.  ಬದನೆಕಾಯಿಯಲ್ಲಿ  ಫೈಬರ್, ಕ್ಯಾಲೋರಿ, ಫೈಬರ್,ಪ್ರೋಟೀನ್,ಫೋಲೇಟ್, ಪೊಟ್ಯಾಸಿಯಮ್, ಜೀವಸತ್ವಗಳು ಮತ್ತು ಖನಿಜಗಳ ಹೇರಳವಾಗಿದೆ. 

ಇದನ್ನೂ ಓದಿ: AC Side Effects: ಬೇಸಿಗೆಯಲ್ಲಿ ದಿನವಿಡೀ ಎಸಿ ರೂಂನಲ್ಲಿ ಇರ್ತಿರಾ? ಅಡ್ಡಪರಿಣಾಮ ತಿಳಿದ್ರೆ ಬೆಚ್ಚಬೀಳ್ತೀರಾ!!

ಬದನೆಕಾಯಿಯಿಂದ ಆರೋಗ್ಯಕ್ಕೆ ಇರುವ ಉಪಯೋಗಗಳು

ಹೃದ್ರೋಗ ನಿಯಂತ್ರಣ:

ಅಧ್ಯಯನ ಪ್ರಕಾರ ಬದನೆಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಅಂಶ, ಆಂಟಿಆಕ್ಸಿಡೆಂಟ್‌ಗಳು ಹೆಚ್ಚು ಇರುವುದರಿಂದ ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣ: 

ಬಿಳಿಬದನೆ ಫೈಬರ್ ಮತ್ತು ಪಾಲಿಫಿನಾಲ್‌ಗಳಲ್ಲಿ ಅಧಿಕವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಮಧುಮೇಹ ನಿಯಂತ್ರಿಸುತ್ತದೆ.

ತೂಕ ಇಳಿಕೆ:
ಬದನೆಯಲ್ಲಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಇದರ ಖಾದ್ಯ  ತೂಕ ಇಳಿಕೆಗೆ ಸಹಕಾರಿಯಾಗಿದೆ. 

ಇದನ್ನೂ ಓದಿ: Cardamom Health Benefits: ಏಲಕ್ಕಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು

ಕ್ಯಾನ್ಸರ್ ನಿಯಂತ್ರಣ: 
ಕ್ಯಾನ್ಸರ್ ಎಂಬ ಮಾರಣಾಂತಿಕ ರೋಗ ಇತ್ತಿಚೇಗೆ ಸಾಮಾನ್ಯವಾಗಿದೆ. ಅದನ್ನು ನಿಯಂತ್ರಣಕ್ಕೆ ತರಲು ಮುಂದಾಗಿದ್ದರೇ ಜೀವವನ್ನೇ ಕಳೆದುಕೊಳ್ಳಬಹುದು. ಸಂಶೋಧನೆ ಪ್ರಕಾರ ಬದನೆಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಸೋಲಾಸೋಡಿನ್ ರಾಮ್ನೋಸಿಲ್ ಗ್ಲೈಕೋಸೈಡ್ಸ್  ಪ್ರಮುಖ ಅಂಶವನ್ನು ಹೊಂದಿದೆ. ಅದರ ಇದರ ನಿಯಮಿತ್ತ ಸೇವನೆಯಿಂದ ಕಡಿಮೆ ಮಟ್ಟದಲ್ಲಿ ಕ್ಯಾನ್ಸರ್ ನಿಯಂತ್ರಿಸಬಹುದಾಗಿದೆ. 

ಬದನೆಕಾಯಿ ಆರೋಗ್ಯಕ್ಕೆ ಮಾತ್ರ ಸಹಕಾರಿಯಾಗದೇ ಇದರ ಖಾದ್ಯ ಉತ್ತಮ ರುಚಿ ನೀಡುತ್ತದೆ. ಹಾಗೆಯೇ ಸುಲಭವಾಗಿ ಬೇಗನೆ ಇದರಿಂದ ರೆಸಿಪಿ ತಯಾರಿಸಲು ಸಹಕಾರಿಯಾಗಿದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News