ನವದೆಹಲಿ: Digital India Challange - ಕೇಂದ್ರ ಸರ್ಕಾರ (PM Narendra Modi Government) ಡಿಜಿಟಲ್ ಇಂಡಿಯಾ (Digital India) ಅಡಿ ಹೊಸ ಚಾಲೆಂಜ್ ಆರಂಭಿಸಿದ್ದು, ಈ ಚಾಲೆಂಜ್ ಜನರಿಗೆ 5 ಲಕ್ಷ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ಮೊದಲು ಜನರು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅದರ ನಂತರ ವಿಜೇತರಿಗೆ  ಬಹುಮಾನದ ಮೊತ್ತವನ್ನು ನೀಡಲಾಗುವುದು. ವಾಸ್ತವದಲ್ಲಿ ಭಾರತ  ಸರ್ಕಾರದ ಸ್ವಚ್ಛ ಭಾರತ್ ಮಿಶನ್ (Swachh Bharat Mission) ಹಾಗೂ ವಿಶ್ವಸಂಸ್ಥೆ SDG (UN SDGs) ಅನ್ನು ಬೆಂಬಲಿಸಿ, ಹಿಂದೂಸ್ತಾನ್ ಯುನಿಲೀವರ್ ಲಿಮಿಟೆಡ್  (Hindustan Unilever Ltd.) ಕಂಪನಿ ಇನ್ವೆಸ್ಟ್ ಇಂಡಿಯಾ ( Invest India), ಸ್ಟಾರ್ಟ್ ಅಪ್ ಇಂಡಿಯಾ (Startup India)ಹಾಗೂ AGNIi ಜೊತೆ ಸೇರಿಕೊಂಡು 'ಗ್ರ್ಯಾಂಡ್ ವಾಟರ್ ಸೇವಿಂಗ್ ಚಾಲೆಂಜ್' (Grand Water Saving Challenge) ಆರಂಭಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Emergency Credit Line Guarantee ಯೋಜನೆಯ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ


ಇನ್ನೋವೇಟಿವ್ ಐಡಿಯಾ ಬಳಸಿ ಫ್ಲಶ್ ತಯಾರಿಸಬೇಕು
ಈ ಚಾಲೆಂಜ್ ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕೆಲ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಸರ್ಕಾರದ (Central Government) ಮೂಲಕ ಆರಂಭಿಸಲಾಗಿರುವ ಈ ಚಾಲೆಂಜ್ ತುಂಬಾ ಇಂಟರೆಸ್ಟಿಂಗ್ ಆಗಿದೆ. ಈ ಕಾಂಟೆಸ್ಟ್ ಅಡಿ ಇಂಡಿಯನ್ ಟಾಯ್ಲೆಟ್ (Indian Toilet) ಗಾಗಿ ಒಂದು ಇನ್ನೋವೇಟಿವ್ ಫ್ಲಶ್ ಸಿಸ್ಟಮ್ (Innovate Flush System)ತಯಾರಿಸಬೇಕು. ಟಾಯ್ಲೆಟ್ ಅನ್ನು ಸ್ವಚ್ಛ ಹಾಗೂ ಹೈಜೀನ್ ಆಗಿಡುವುದರ ಜೊತೆಗೆ ನೀರಿನ ಉಳಿತಾಯ ಕೂಡ ಆಗಬೇಕು ಎಂಬುದು ಇದರ ಹಿಂದಿನ ಉದ್ದೇಶ. ಟಾಯ್ಲೆಟ್ ಸ್ವಚ್ಛವಾಗಿರದೇ ಇರುವ ಕಾರಣ ವ್ಯಕ್ತಿಗಳಲ್ಲಿ ಹಲವು ಕಾಯಿಲೆಗಳು ಬರುತ್ತಿವೆ. ಈ ಕಾಂಟೆಸ್ಟ್ ಮೂಲಕ ಸ್ವಚ್ಚತೆಯ ಜೊತೆಗೆ ನೀರಿನ ಉಪಯೋಗವನ್ನು ಕೂಡ ಕಡಿಮೆ ಮಾಡಬಹುದು ಮತ್ತು ಇದು ಸಮಯದ ಅವಶ್ಯಕತೆ ಕೂಡ ಹೌದು.


ಇದನ್ನೂ ಓದಿ- ಮೋದಿ ನೇತೃತ್ವದ NDA 2.O ಸರ್ಕಾರಕ್ಕೆ ಇಂದಿಗೆ 2 ವರ್ಷ : ಸಂಭ್ರಮಾಚರಣೆ ಹೇಗಿದೆ?


ಎಲ್ಲಿ ಮತ್ತು ಎಲ್ಲಿಯವರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು
ಈ ಕಾಂಟೆಸ್ಟ್ ನಲ್ಲಿ ಭಾಗವಹಿಸಲು ಬಯಸುವ ಜನರು https://www.startupindia.gov.in/content/sih/en/ams-application/challenge.html?applicationId=6050cc03e4b03f92cbc8c95e ಲಿಂಕ್ ಮೇಲೆ ಕ್ಲಿಕ್ಕಿಸಬೇಕು. ಇದಾದ ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಟಾರ್ಟ್ಅಪ್ ಇಂಡಿಯಾ ಹಬ್( Startup India HUB) ಮೇಲೆ ತಮ್ಮ ಎಂಟ್ರಿಯನ್ನು ಸಲ್ಲಿಸಬೇಕು . ಇದಲ್ಲದೆ  DPIIT (ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆ) ನಲ್ಲಿ ನೋಂದಣಿ ಮಾಡಿದ ಸ್ಟಾರ್ಟ್ಅಪ್ ಹಾಗೂ ಶೈಕ್ಷಣಿಕ ಸಂಸ್ಥೆಗಳು ಕೂಡ ಈ ಕಾಂಟೆಸ್ಟ್ ನಲ್ಲಿ ಭಾಗವಹಿಸಬಹುದು . ನಿಮ್ಮ ಮಾಡೆಲ್ ಅನ್ನು ಸಿದ್ಧಪಡಿಸಿ ಅದನ್ನು ಜೂನ್ 25, 2021 ರೊಳಗೆ ಸಬ್ಮಿಟ್ ಮಾಡಬೇಕು. ಅಂದರೆ, ನೀವು ಸಿದ್ಧಪಡಿಸಿದ ಮಾಡೆಲ್ ಸಲ್ಲಿಕೆಗೆ ಇದು ಅಂತಿಮ ದಿನಾಂಕವಾಗಿದೆ.


ಇದನ್ನೂ ಓದಿ-Black Fungus ಬಳಿಕ ಇದೀಗ ಕೋರೋನಾ ರೋಗಿಗಳ ಮೇಲೆ ಮತ್ತೊಂದು ಕಾಯಿಲೆಯ ದಾಳಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ