ನವದೆಹಲಿ: ಹಸಿರು ಏಲಕ್ಕಿಯನ್ನು ಭಾರತೀಯ ಅಡಿಗೆಮನೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಮಸಾಲೆ, ಚಹಾ, ಸಿಹಿ ತಿಂಡಿಗಳಲ್ಲಿ, ಸುಗಂಧ ವರ್ಧಕಗಳಲ್ಲಿ  ಮತ್ತು ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಇದೊಂದು ಆಯುರ್ವೇದಿಕ್ ಔಷಧಿಯಾಗಿದ್ದು, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಅನೇಕ ಸಮಸ್ಯೆಗಳನ್ನು ನಿವಾರಿಸಲು ಇದು ಮನೆಮದ್ದು (Home Remedy). ನಿತ್ಯ ಇದರ ಸೇವನೆ ಆರೋಗ್ಯಕ್ಕೆ ಹಲವು ಲಾಭಗಳನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಕೇವಲ ಎರಡೇ ಹನಿ ಮೂಗಿಗೆ ಹಾಕಿ... Corona ತೊಡೆದುಹಾಕಿ


ಶರೀರದಿಂದ ವಿಷಪದಾರ್ಥಗಳನ್ನು ಹೊರಹಾಕುತ್ತದೆ
ಏಲಕ್ಕಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಇರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಏಲಕ್ಕಿ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.


ಇದನ್ನು ಓದಿ- ಗೊರಕೆಯಿಂದ ನೀವೂ ತೊಂದರೆಗೀಡಾಗಿದ್ದರೆ... ಈ ಸುದ್ದಿ ನಿಮಗಾಗಿ... ಓದಲು ಮಿಸ್ ಮಾಡ್ಬೇಡಿ ...?


ಶೀತ, ಕಫಾ ನಿಯಂತ್ರಣಕ್ಕೆ ಲಾಭಕಾರಿ
ಏಲಕ್ಕಿ ಕಫ, ಶೀತ, ಕೆಮ್ಮಿನಂತಹ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ. ಏಲಕ್ಕಿ ಎಣ್ಣೆಯ ಕೆಲವು ಹನಿಗಳನ್ನು ಬಿಸಿ ನೀರಿನಲ್ಲಿ ಹಾಕಿ 15 ನಿಮಿಷಗಳ ಕಾಲ ಉಗಿ ತೆಗೆದುಕೊಳ್ಳಿ, ಇದು ಎದೆಯ ಬಿಗಿತ ಮತ್ತು ಉಸಿರಾಟದ ತೊಂದರೆಗಳನ್ನು ತೆಗೆದುಹಾಕುತ್ತದೆ. ಇದು ಕಫವನ್ನು ನಿವಾರಿಸುತ್ತದೆ.


ಇದನ್ನು ಓದಿ-Hangover ನಿಂದ ಹಿಡಿದು ಹೃದ್ರೋಗದವರೆಗೆ ಹಲವು ಸಮಸ್ಯೆಗಳಿಗೆ ರಾಮಬಾಣ ಎಳನೀರು


ಅಜೀರ್ಣ ಸಮಸ್ಯೆ ಹಾಗೂ ಬಾಯಿಯ ದುರ್ವಾಸನೆ ನಿವಾರಿಸುತ್ತದೆ
ಏಲಕ್ಕಿ ಜೀರ್ಣಕ್ರಿಯೆಯನ್ನು ಸರಿಪಡಿಸಲು ಸಹಕರಿಸುತ್ತದೆ. ಇದೊಂದು ರೀತಿಯ ಮೌತ್ ಫ್ರೆಶ್ನರ್ ಕೂಡ ಹೌದು. ಇದು ಬಾಯಿಯ ವಾಸನೆಯನ್ನು ಕಡಿಮೆ ಮಾಡುತ್ತದೆ. ಬಾಯಿಯಿಂದ ಕೆಟ್ಟ ವಾಸನೆಯ ಸಮಸ್ಯೆ ಇದ್ದರೆ, ಆಹಾರವನ್ನು ಸೇವಿಸಿದ ನಂತರ ಒಂದು ಅಥವಾ ಎರಡು ಏಲಕ್ಕಿಯನ್ನು ಅಗಿಯಬೇಕು.


ಇದನ್ನು ಓದಿ-ಈ ಕಾಯಿಲೆಗಳಿಗೆ ರಾಮಬಾಣ ಅಜ್ವಾಯಿನ್ ನೀರು, ಹೇಗೆ ತಯಾರಿಸಬೇಕು? ಇಲ್ಲಿದೆ ವಿಧಾನ


ಅಸಿಡಿಟಿ ಸಮಸ್ಯೆಗೆ ಪರಿಣಾಮಕಾರಿ
ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಯಿಂದ ತಲೆನೋವು ಸಹ ಉಂಟಾಗುತ್ತದೆ. ಆದ್ದರಿಂದ, ನಿಮಗೆ ಇಷ್ಟವಾದಲ್ಲಿ, ಏಲಕ್ಕಿ ತಿನ್ನಿರಿ. ನಿಮ್ಮ ಆಹಾರವನ್ನು ಸೇವಿಸಿದ ನಂತರ, ಏಲಕ್ಕಿಯನ್ನು ಬಾಯಿಯಲ್ಲಿ ಐದು ನಿಮಿಷಗಳ ಕಾಲ ಅಗಿಯಿರಿ. ಈ ಮೂಲಕ, ಜೀರ್ಣಕ್ರಿಯೆಯ ಪ್ರಕ್ರಿಯೆಯು ಸಹ ಸರಿಯಾಗಿದೆ.