Hangover ನಿಂದ ಹಿಡಿದು ಹೃದ್ರೋಗದವರೆಗೆ ಹಲವು ಸಮಸ್ಯೆಗಳಿಗೆ ರಾಮಬಾಣ ಎಳನೀರು

ತೆಂಗಿನಕಾಯಿ ನೀರು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ಹೃದಯದ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶವಾಗಿದೆ. ತೆಂಗಿನ ನೀರು ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುವುದರ ಜೊತೆಗೆ ಹೆಚ್ಚು ವ್ಯಾಪಕವಾಗಿ ಸೇವಿಸುವ ಪಾನೀಯಗಳಲ್ಲಿ ಒಂದಾಗಿದೆ.

Last Updated : Nov 15, 2020, 10:39 AM IST
  • ಎಳನೀರು ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುವುದರ ಜೊತೆಗೆ ಹೆಚ್ಚು ವ್ಯಾಪಕವಾಗಿ ಸೇವಿಸುವ ಪಾನೀಯಗಳಲ್ಲಿ ಒಂದು.
  • ಇದರಲ್ಲಿ ಹೇರಳ ಪ್ರಮಾಣದಲ್ಲಿ ಪೊಟ್ಯಾಸಿಯಂ ಅಂಶ ಇರುತ್ತದೆ.
  • ಹೃದಯ ಸಮಸ್ಯೆ ಹಾಗೂ ಹ್ಯಾಂಗೊವರ್ ಇಳಿಸಲು ಇದು ತುಂಬಾ ಸಹಕಾರಿ.
Hangover ನಿಂದ ಹಿಡಿದು ಹೃದ್ರೋಗದವರೆಗೆ ಹಲವು ಸಮಸ್ಯೆಗಳಿಗೆ ರಾಮಬಾಣ ಎಳನೀರು title=

ನವದೆಹಲಿ: ಎಳನೀರು  ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುವುದರ ಜೊತೆಗೆ ಹೆಚ್ಚು ವ್ಯಾಪಕವಾಗಿ ಸೇವಿಸುವ ಪಾನೀಯಗಳಲ್ಲಿ ಒಂದಾಗಿದೆ. ತೆಂಗಿನ ನೀರು ಅನೇಕ ಅದ್ಭುತ ಆರೋಗ್ಯ ಲಾಭಗಳನ್ನು ಸಹ ಹೊಂದಿದೆ. ತೆಂಗಿನ ನೀರು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಮತ್ತು ಹ್ಯಾಂಗೊವರ್ ಅನ್ನು ಕಡಿಮೆ ಮಾಡುತ್ತದೆ.

ತೆಂಗಿನ ನೀರು ಹಸಿರು ತೆಂಗಿನಕಾಯಿಯ ಒಳಗಿನಿಂದ ಬರುವ ಸ್ಪಷ್ಟ ದ್ರವವಾಗಿದೆ. ತೆಂಗಿನ ನೀರು ಕಾಯಿಗೆ ಪೋಷಿಸುತ್ತದೆ, ಅದು ಅಂತಿಮವಾಗಿ ತೆಂಗಿನಕಾಯಿಯೊಳಗೆ ಕಾಯಿ ನಿರ್ಮಾಣಗೊಳ್ಳಲು ಸಹಕರಿಸುತ್ತದೆ. ತೆಂಗಿನ ನೀರಿನಲ್ಲಿ ಸಕ್ಕರೆ ಮತ್ತು ನೀರು ಕಂಡುಬರುತ್ತದೆಯಾದರೂ, ಇದರಲ್ಲಿ ಇತರ ಹಣ್ಣುಗಳ ರಸಕ್ಕೆ ಹೋಲಿಸಿದರೆ ಅರ್ಧದಷ್ಟು ಸಕ್ಕರೆ ಕಂಡುಬರುತ್ತದೆ. ಇದು ಆರೋಗ್ಯಕರ ಆಯ್ಕೆಯಾಗಿದೆ. ತೆಂಗಿನ ಕಾಯಿಯ 8 ಔನ್ಸ್ ಗ್ಲಾಸ್ ನಲ್ಲಿ 44 ಕ್ಯಾಲರಿ ಶಕ್ತಿ ಇರುತ್ತದೆ.

ಎಳನೀರಿನ ಆರೋಗ್ಯಕರ ಲಾಭಗಳು
ಹೃದಯದ ಆರೋಗ್ಯಕ್ಕೆ ಉತ್ತಮ 

ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಇದ್ದು, ಇದು ಹೃದಯದ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶವಾಗಿದೆ. ತೆಂಗಿನ ನೀರಿನ ಕುರಿತಾದ ಕೆಲವು ಸಂಶೋಧನೆಗಳು ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಸೂಚಿಸುತ್ತವೆ. ಇದು ನಿಮ್ಮ ಹೃದಯದ ಆರೋಗ್ಯದ ಪ್ರಮುಖ ಸೂಚಕವಾಗಿದೆ. 2005 ರಲ್ಲಿ ನಡೆದ ಸಣ್ಣ ಅಧ್ಯಯನದ ಪ್ರಕಾರ, 1.3 ಕಪ್ ತೆಂಗಿನ ನೀರನ್ನು ದಿನಕ್ಕೆ ಎರಡು ಬಾರಿ 10 ದಿನಗಳವರೆಗೆ ಸೇವಿಸಿದ ಜನರು ಬಾಟಲಿ ನೀರನ್ನು ಕುಡಿಯುವವರಿಗೆ ಹೋಲಿಸಿದರೆ ಅವರ ರಕ್ತದೊತ್ತಡದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ಶರೀರವನ್ನು ಹೈಡ್ರೇಟ್ ಆಗಿ ಇಡುತ್ತದೆ
ಶರೀರದಲ್ಲಿ ನೀರು ಮತ್ತು ಲವಣಗಳ ನಡುವೆ ಗಮನಾರ್ಹ ಸಮತೋಲನವನ್ನು ಕಾಪಾಡಿಕೊಳ್ಳಲು ನಮಗೆ ಇಲೆಕ್ಟ್ರೋಲೈಟ್ಸ್ ಗಳ ಅವಶ್ಯಕತೆ ಇರುತ್ತದೆ. ವ್ಯಾಯಾಮದ ವೇಳೆ ನೀವು ಬೆವರಿದಾಗ, ನೀವು ದೇಹದಿಂದ ನೀರಿನ ಮಟ್ಟವನ್ನು ಕಳೆದುಕೊಳ್ಳುವುದಲ್ಲದೆ, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಇಲೆಕ್ಟ್ರೋಲೈಟ್ಸ್ ಗಳನ್ನು  ಸಹ ಕಳೆದುಕೊಳ್ಳುತ್ತೀರಿ. ಉತ್ತಮ ವ್ಯಾಯಾಮದ ನಂತರ ದೇಹದಲ್ಲಿನ ಇಲೆಕ್ಟ್ರೋಲೈಟ್ಸ್ ಗಳನ್ನು ಮರುಸ್ಥಾಪಿಸಲು  ತುಂಬಲು ಎಳನೀರು  ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ಹ್ಯಾಂಗ್ ಓವರ್ ದೂರಗೊಳಿಸುತ್ತದೆ
ಹ್ಯಾಂಗ್ ಓವರ್ ನಿಂದ ದೂರಗೊಳಿಸಲು ಕೆಲ ಜನರು ಸ್ಪೋರ್ಟ್ಸ್ ಡ್ರಿಂಕ್ ಗೆ ಮೊರೆಹೋಗುತ್ತಾರೆ. ಆದರೆ, ಎಳನೀರು ಇದಕ್ಕೆ ಉತ್ತಮ ವಿಕಲ್ಪವಾಗಿದೆ. ಮದ್ಯ ಹೊಟ್ಟೆ ಮತ್ತು ಕರುಳಿಗೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ನಿಮಗೆ ವಾಕರಿಕೆ ಬಂದ ಅನುಭವವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕ ಪ್ರಮಾಣದ ಶುಗರ್ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಇಂತಹುದರಲ್ಲಿ ಕಡಿಮೆ ಶುಗರ್ ಹೊಂದಿರುವ ಎಳನೀರು ಹ್ಯಾಂಗೋವರ್ ಇಳಿಸಲು ಸಹಾಯ ಮಾಡುತ್ತದೆ.

Trending News