Benefits of Guava in Diabetes : ಆರೋಗ್ಯಕರವಲ್ಲದ ಆಹಾರಗಳ ಸೇವನೆ ಮತ್ತು ದೈಹಿಕ ವ್ಯಾಯಾಮವನ್ನು ಮಾಡದೇ ಇರುವ ಕಾರಣ, ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗ ದೇಹದಲ್ಲಿ ವೇಗವಾಗಿ ಹರಡುತ್ತಿದೆ.  ನಾಲ್ಕರ ಲ್ಲಿ ಒಬ್ಬ ವ್ಯಕ್ತಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಮ್ಮೆ ಈ ರೋಗ ಬಂತೆಂದರೆ, ಮನುಷ್ಯನ ದೇಹವನ್ನು ಕುಗ್ಗಿಸಿ ಬಿಡುತ್ತದೆ. ಈ ಕಾರಣದಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಸೇವಿಸುವ  ಆಹಾರ, ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಒಂದು ಹಣ್ಣಿನ ಮೂಲಕ ಮಧುಮೇಹ ರೋಗವನ್ನು ನಿಯಂತ್ರಣಕ್ಕೆ ತರಬಹುದು. 


COMMERCIAL BREAK
SCROLL TO CONTINUE READING

ಪೇರಳೆ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ :
ವೈದ್ಯರ ಪ್ರಕಾರ, ಮಧುಮೇಹ ರೋಗಿಗಳು ಸಿಹಿ ಪ್ರಮಾಣವು ತುಂಬಾ ಕಡಿಮೆ ಇರುವ ಆಹಾರ ಸೇವನೆಯತ್ತ ಗಮನ ಹರಿಸಬೇಕು. ಮಾತ್ರವಲ್ಲ ಮಧುಮೇಹ ನಿಯಂತ್ರಿಸಬಲ್ಲ ಹಣ್ಣು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಪೇರಳೆ ಹಣ್ಣು  ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.  ಈ ಹಣ್ಣಿನಲ್ಲಿ ವಿಟಮಿನ್-ಎ, ವಿಟಮಿನ್-ಬಿ, ವಿಟಮಿನ್-ಸಿ ಮತ್ತು ರಂಜಕ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಿಸುತ್ತದೆ. 


ಇದನ್ನೂ ಓದಿ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇಲ್ಲವಾದರೆ ಎದುರಾಗುವುದು ಈ ಸಮಸ್ಯೆಗಳು. !


ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ :
ಪೇರಳೆ  ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಕಂಡುಬರುತ್ತದೆ. ಈ ಫೈಬರ್ ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೇರಳೆಯಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿರುತ್ತದೆ. ಈ ಕಾರಣದಿಂದಾಗಿ ಅದರ ಸೇವನೆಯು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


ಪೇರಳೆ ಎಲೆಗಳಿಂದ ಮಾಡಿದ ಚಹಾ  : 
ಪೇರಳೆ ಹಣ್ಣು ಮಾತ್ರವಲ್ಲ, ಇದರ ಎಲೆಗಳು ಕೂಡಾ ಮಧುಮೇಹ ರೋಗ ನಿವಾರಣೆಗೆ ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಪೇರಳೆ ಎಲೆಗಳಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು. ಈ ಚಹಾವನ್ನು ಕುಡಿಯುವುದರಿಂದ,  ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.


ಇದನ್ನೂ ಓದಿ :  ಲಿವರ್ ಆರೋಗ್ಯಕ್ಕಾಗಿ ಸೇವಿಸಿ ಈ ಆಹಾರ.! ಉದರದ ಸಮಸ್ಯೆಗಳಿಗೆ ಸಿಗುವುದು ಪರಿಹಾರ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.