Papaya Side Effects: ಇಂತಹವರೂ ಮರೆತೂ ಕೂಡ ಪರಂಗಿ ತಿನ್ನಬೇಡಿ

Papaya Side Effects: ಕೈಗೆಟುಕು ದರದಲ್ಲಿ ದೊರೆಯುವ ಹಣ್ಣುಗಳಲ್ಲಿ ಪರಂಗಿಯೂ ಒಂದು. ಪರಂಗಿ ಹಣ್ಣನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಆದರೆ, ಕೆಲವರು ಅಪ್ಪಿತಪ್ಪಿಯೂ ಸಹ ಪರಂಗಿ ಹಣ್ಣನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ.  ಯಾರು ಪರಂಗಿಹಣ್ಣನ್ನು ತಿನ್ನಬಾರದು, ಅದರಿಂದಾಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ... 

Written by - Yashaswini V | Last Updated : Oct 13, 2022, 01:19 PM IST
  • ಉತ್ತಮ ಆರೋಗ್ಯಕ್ಕಾಗಿ ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವುದು ಬಹಳ ಮುಖ್ಯ.

    ಪರಂಗಿ ಹಣ್ಣನ್ನು ಪೋಷಕಾಂಶಗಳ ಆಗರ ಎಂದು ಹೇಳಲಾಗುತ್ತದೆ.
  • ಪಪ್ಪಾಯಿಯು ಜೀವಸತ್ವಗಳು, ನಾರಿನಂಶ ಮತ್ತು ಖನಿಜಗಳ ನಿಧಿಯಾಗಿದ್ದು, ಇದರ ಸೇವನೆಯಿಂದ ಹಲವು ರೋಗಗಳಿಂದ ದೂರ ಉಳಿಯಬಹುದು.
Papaya Side Effects: ಇಂತಹವರೂ ಮರೆತೂ ಕೂಡ ಪರಂಗಿ ತಿನ್ನಬೇಡಿ title=
Papaya side effects

Papaya Side Effects: ಸುಲಭವಾಗಿ, ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಹಣ್ಣುಗಳಲ್ಲಿ ಪರಂಗಿಹಣ್ಣು ಸಹ ಒಂದು. ಪರಂಗಿ ಹಣ್ಣನ್ನು ಪೋಷಕಾಂಶಗಳ ಆಗರ ಎಂದು ಹೇಳಲಾಗುತ್ತದೆ. ಪಪ್ಪಾಯಿಯು ಜೀವಸತ್ವಗಳು, ನಾರಿನಂಶ ಮತ್ತು ಖನಿಜಗಳ ನಿಧಿಯಾಗಿದ್ದು, ಇದರ ಸೇವನೆಯಿಂದ ಹಲವು ರೋಗಗಳಿಂದ ದೂರ ಉಳಿಯಬಹುದು. ಇದು ಪ್ರತಿ ಋತುವಿನಲ್ಲೂ ತಿನ್ನಬಹುದಾದ ಹಣ್ಣಾಗಿದ್ದು ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ರೋಗಿಗಳಿಗೆ ಪ್ರಯೋಜನಕಾರಿ. ಆದರೆ, ಪರಂಗಿ ಹಣ್ಣಿನ ಸೇವನೆಯು ಕೆಲವರಿಗೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.  ಹೌದು, ಕೆಲವು ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಸಹ ಪರಂಗಿ ಹಣ್ಣನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾರು ಪರಂಗಿಹಣ್ಣನ್ನು ತಿನ್ನಬಾರದು, ಅದರಿಂದಾಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ... 

ಇಂತಹವರು ಪರಂಗಿ ಹಣ್ಣಿನಿಂದ ಅಂತರ ಕಾಯ್ದುಕೊಳ್ಳಬೇಕು:
ಅನಿಯಮಿತ ಹೃದಯ ಬಡಿತ:

ಪಪ್ಪಾಯಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ, ಆದರೆ ಹೃದಯ ಬಡಿತ ಅನಿಯಮಿತವಾಗಿರುವವರು ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿಯು ಸೈನೋಜೆನಿಕ್ ಗ್ಲೈಕೋಸೈಡ್ ಎಂಬ ಅಮೈನೋ ಆಮ್ಲವನ್ನು ಹೊಂದಿರುತ್ತದೆ. ಇದು ಜೀರ್ಣಾಂಗದಲ್ಲಿ ಹೈಡ್ರೋಜನ್ ಸೈನೈಡ್ ಅನ್ನು ಉತ್ಪಾದಿಸುತ್ತದೆ. ಹಾಗಾಗಿ, ಅನಿಯಮಿತ ಹೃದಯ ಬಡಿತ ಸಮಸ್ಯೆ ಇರುವವರು ಪರಂಗಿ ಹಣ್ಣನ್ನು ಸೇವಿಸದೆ ಇರುವುದು ಉತ್ತಮ. 

ಗರ್ಭಿಣಿಯರು: 
ಗರ್ಭಿಣಿ ಮಹಿಳೆಯರು ಪರಂಗಿ ಹಣ್ಣನ್ನು ತಿನ್ನಬಾರದುಲ್.  ಪಪ್ಪಾಯಿಯು ಲ್ಯಾಟೆಕ್ಸ್ ಅನ್ನು ಹೊಂದಿರುತ್ತದೆ, ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ.  ಪಪ್ಪಾಯಿಯನ್ನು ತಿನ್ನುವುದರಿಂದ ಭ್ರೂಣವನ್ನು ಬೆಂಬಲಿಸುವ ಪೊರೆಯು ದುರ್ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ, ಮಗು ಅವಧಿಗೆ ಮುಂಚೆಯೇ ಜನಿಸಬಹುದು. 

ಇದನ್ನೂ ಓದಿ- ಉದ್ದ ಕೂದಲು, ಸುಂದರ ತ್ವಚೆ, ಬಳುಕುವ ಸೊಂಟಕ್ಕಾಗಿ ಟೊಮೇಟೊವನ್ನು ಈ ರೀತಿ ಬಳಸಿ

ಅಲರ್ಜಿ ಇರುವವರು:
ನಿಮಗೆ ಯಾವುದೇ ರೀತಿಯ ಅಲರ್ಜಿ ಇದ್ದರೆ, ಅಂತಹ ಜನರು ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿಯು ಕಿಣ್ವವನ್ನು ಹೊಂದಿರುತ್ತದೆ, ಇದು ಅಡ್ಡ-ಪ್ರತಿಕ್ರಿಯಿಸಬಲ್ಲದು. ಇದರ ಸೇವನೆಯು ಸೀನುವಿಕೆ, ಕೆಮ್ಮು ಅಥವಾ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಹಾಗಾಗಿ, ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ಪರಂಗಿ ಹಣ್ಣಿನಿಂದ ದೂರವಿರಿ.

ಲೋ ಬ್ಲಡ್ ಶುಗರ್ ಇರುವವರು: 
ಪಪ್ಪಾಯಿ ಸಿಹಿಯಾಗಿದ್ದು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.  ಲೋ ಬ್ಲಡ್ ಶುಗರ್ ಸಮಸ್ಯೆ ಇರುವವರು ಪಪ್ಪಾಯಿಯನ್ನು ತಿನ್ನಬಾರದು. ಅಂತಹ ಸ್ಥಿತಿಯನ್ನು ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ. 

ಇದನ್ನೂ ಓದಿ- Curd Benefits: ಉತ್ತಮ ಆರೋಗ್ಯಕ್ಕಾಗಿ ನಿತ್ಯ ಸೇವಿಸಿ ಒಂದು ಕಪ್ ಮೊಸರು

ಕಿಡ್ನಿ ಸ್ಟೋನ್:
ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದರ ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕಿಡ್ನಿಯಲ್ಲಿ ಇರುವ ಕಲ್ಲುಗಳ ಗಾತ್ರವನ್ನು ಹೆಚ್ಚಿಸಬಹುದು. ಹಾಗಾಗಿ ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಪರಂಗಿ ಹಣ್ಣಿನ ಸೇವನೆ ತಪ್ಪಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News