Hair Fall Remedies For Men: ಸಾಮಾನ್ಯವಾಗಿ ಕೂದಲುದುರುವ ಸಮಸ್ಯೆಯಿಂದ ಮಹಿಳೆಯರು ಮಾತ್ರ ತೊಂದರೆಗೆ ಒಳಗಾಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರೂ ಕೂಡ ಕಳಪೆ ಆಹಾರ, ಒತ್ತಡದಿಂದ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ, ಪುರುಷರು ಕೂದಲು ಉದುರುವಿಕೆಯನ್ನು ತಡೆಯಲು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ. ಆದರೂ ಕೂಡ ಅವರಿಗೆ ಸಿಗಬೇಕಾದ ಪರಿಣಾಮ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ಚಿನಿತಿಸುವ ಅವಶ್ಯಕತೆ ಇಲ್ಲ, ನೀವೂ ಕೂಡ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಕೂದಲು ಉದುರುವಿಕೆಯ ಸಮಸ್ಯೆಯನ್ನು  ನಿವಾರಿಸಿಕೊಳ್ಳಬಹುದು.

COMMERCIAL BREAK
SCROLL TO CONTINUE READING

ಕೂದಲು ಉದುರುವಿಕೆಯನ್ನು ತಡೆಯಲು ಈ ಕ್ರಮಗಳನ್ನು ಅನುಸರಿಸಿ
ಪುದೀನಾ ಎಣ್ಣೆ

ನಿಮ್ಮ ಕೂದಲು ನಿರಂತರವಾಗಿ ಉದುರುತ್ತಿದ್ದರೆ, ನೀವು ಪುದೀನಾ ಎಣ್ಣೆಯನ್ನು ಬಳಸಬಹುದು. ಪುದೀನಾ ಎಣ್ಣೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪೆಪ್ಪರ್ ಮಿಂಟ್ ಎಣ್ಣೆಯು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ . ಅಷ್ಟೇ ಅಲ್ಲ ಅದು ಕೂದಲು ಬೆಳವಣಿಗೆಗೂ ಕೂಡ ಸಹಕಾರಿಯಾಗಿದೆ. ಇದಲ್ಲದೆ, ಪುರುಷರು ತೆಂಗಿನ ಎಣ್ಣೆ, ಆಲಿವ್ ಎಣ್ಣೆಯನ್ನು ಸಹ ಬಳಸಬಹುದು.

ಈರುಳ್ಳಿ ರಸ
ಕೂದಲು ಬೆಳವಣಿಗೆಗೆ ಈರುಳ್ಳಿ ರಸವು ಅತ್ಯಂತ ಪರಿಣಾಮಕಾರಿ ಮನೆಮದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈರುಳ್ಳಿ ರಸವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲುಗಳ ಬುಡಭಾಗ ಬಲಗೊಳ್ಳುತ್ತವೆ. ಇದರಿಂದ ಕೂದಲು ಉದುರುವುದು ಬಹುತೇಕ ನಿಲ್ಲುತ್ತದೆ. ಅಷ್ಟೇ ಅಲ್ಲ ಇದರಿಂದ ಹೊಸ ಕೂದಲು ಬೆಳೆಯಲು ಕೂಡ ಈರುಳ್ಳಿ ರಸವೂ ಸಹಾಯ ಮಾಡುತ್ತದೆ.


ಇದನ್ನೂ ಓದಿ-ಕೊಲೆಸ್ಟ್ರಾಲ್-ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ವರದಾನಕ್ಕೆ ಸಮಾನ ಈ ತರಕಾರಿ!

ಒತ್ತಡವನ್ನು ಕಡಿಮೆ ಮಾಡುತ್ತದೆ
ಪುರುಷರಲ್ಲಿ ಕೂದಲು ಉದುರಲು ಒತ್ತಡವೂ ಒಂದು ಪ್ರಮುಖ ಕಾರಣವಾಗಿದೆ. ನಿಮ್ಮ ಕೂದಲು ಉದುರುತ್ತಿದ್ದರೆ, ಮೊದಲನೆಯದಾಗಿ ಒತ್ತಡವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಒತ್ತಡವನ್ನು ಕಡಿಮೆ ಮಾಡಲು ನೀವು ನಿತ್ಯ ವ್ಯಾಯಾಮ ಮಾಡಿ. ಇದಲ್ಲದೆ, ಉತ್ತಮ ನಿದ್ರೆ ಮಾಡುವುದು ಕೂಡ ಒತ್ತಡವನ್ನು ಕಡಿಮೆ ಮಾಡುವ ಒಂದು ಉತ್ತಮ ಮಾರ್ಗವಾಗಿದೆ.


ಇದನ್ನೂ ಓದಿ-ತೂಕ ಇಳಿಕೆಯಿಂದ ಹಿಡಿದು ಕಾಂತಿಯುತ ಚರ್ಮದವರೆಗೆ ಹಸಿ ಮೆಣಸಿನಕಾಯಿ ಸೇವನೆಯ ಈ 8 ಲಾಭಗಳು ನಿಮಗೂ ತಿಳಿದಿರಲಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.