ರುಚಿಗೂ ಆರೋಗ್ಯಕ್ಕೂ ಬೆಸ್ಟ್ ಅಪರೂಪದ ಹಕ್ಕರಕಿ ಸೊಪ್ಪು..ಉತ್ತರ ಕರ್ನಾಟಕ ಕಡೆ ಹೋದ್ರ ತಿನ್ನೋದ್ನ ಮರಿಬ್ಯಾಡ್ರಿ
Hakkaraki Pallya : ಉತ್ತರ ಕರ್ನಾಟಕದ ಜೋಳದ ರೊಟ್ಟಿ ಕಾಯಿಪಲ್ಲೆ ತಿಂದರೆ ಜೀವನಾನೇ ಪಾವನ ಅನಿಸೋದು ಗ್ಯಾರಂಟಿ. ಅದರಲ್ಲೂ ಈ ಹಕ್ಕರಕಿ ಸೊಪ್ಪನ್ನು ರೊಟ್ಟಿ ಜೊತೆ ಸೇರಿಸಿಕೊಂಡರೆ ಎರಡರ ಕಾಂಬೀನೇಷನ್ ಇನ್ನು ಸಖತ್ ಆಗಿರುತ್ತೆ. ನೀವು ಉತ್ತರ ಕರ್ನಾಟಕದ ಕಡೆ ಹೋದರೆ ಮಿಸ್ ಮಾಡದೇ ತಿನ್ನಿ.
Uttar Karnataka Hakkaraki Pallya : ಹಕ್ಕರಕಿ ಎನ್ನುವುದು ಕಪ್ಪು ಹಾಗೂ ಕೆಂಪು ಮಣ್ಣಿನಲ್ಲಿ ಬೆಳೆಯುವ ಒಂದು ಕಳೆ ಸಸ್ಯ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಸೇವಿಸಿದರೆ ಆರೋಗ್ಯಕ್ಕೆ, ಬಿಟ್ಟರೆ ಭೂಮಿಗೆ ಸತ್ವ ನೀಡುವ ಗೊಬ್ಬರದ ಗುಣಲಕ್ಷಣ ಹೊಂದಿದ ಅಪರೂಪದ ಸಸ್ಯವಿದು.
ಜನಪದರು ‘ ಹಕ್ಕರಕಿ ತಿಂದ್ರ ಹದಿನಾರು ರೋಗ ಮುಕ್ತಿ’ ಅಂತಾ ಹಾಡನ್ನೇ ಸೃಷ್ಟಿ ಮಾಡಿದ್ದರು. ಕಾರಣ ಅಂತಹ ಶಕ್ತಿ ಈ ಸೊಪ್ಪಿಗಿದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕಡೆ ರೈತರು ಭೂಮಿ ಅಥವಾ ಹೊಲದಲ್ಲಿ ಊಟ ಮಾಡುವಾಗ ಹಸಿ ಹಕ್ಕರಕಿ ಸೊಪ್ಪನ್ನು ಸೇವಿಸುವುದುಂಟು. ಜೊತೆಗೆ ಈ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳು ಇವೆ ಹಾಗಾಗಿಯೇ ಇದಕ್ಕೆ ಹಿಂದಿನ ಕಾಲದಿಂದಲೂ ಅಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ.
ಇದನ್ನೂ ಓದಿ-ಡಿಟಾಕ್ಸ್ ಡೈಯಟ್ ನಿಂದ ತೂಕ ಇಳಿಕೆ ಮಾಡಿಕೊಳ್ಳುವ ವಿಧಾನ ಎಷ್ಟೊಂದು ಸರಿ!
ಈ ಹಕ್ಕರಕಿ ಸೊಪ್ಪಿನಲ್ಲಿ ನಾರಿನ ಅಂಶ ಹೇರಳವಾಗಿದ್ದು, ಇದರಿಂದ ಗ್ಲಯೋಕ್ಸಿಲೇಟ್, ರಿಡಕ್ಟೇಸ್ ಎಂಬ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಇವು ಮೂತ್ರ ಪಿಂಡಗಳಲ್ಲಿ ಹರಳು ಉಂಟಾಗುವುದನ್ನು ತಡೆಗಟ್ಟುತ್ತವೆ. ರಕ್ತದೊತ್ತಡ ನಿಯಂತ್ರಣ, ಚರ್ಮರೋಗದಂತಹ ಕಾಯಿಲೆಗಳಿಗೆ ರಾಮಬಾಣ ಈ ಹಕ್ಕರಕಿ ಸೊಪ್ಪು. ಜೊತಗೆ ಈ ಹಕ್ಕರಕಿ ಸೊಪ್ಪಿನಿಂದ ಬಾಣಂತಿಯರಿಗೂ ಸಾಕಷ್ಟು ಪ್ರಯೋಜನಗಳಿವೆ.
ಉತ್ತರ ಕರ್ನಾಟಕದ ಜನರಿಗೆ ಹಕ್ಕರಕಿ ಸೊಪ್ಪು ವರದಾನವಿದ್ದವಿಂದಂತೆ. ಅದನ್ನು ಅವರು ಸಲಾಡ್ ರೀತಿಯಲ್ಲಿ ಸೇವಿಸುತ್ತಾರೆ. ಹಕ್ಕರಕಿ ಸೊಪ್ಪಿಗೆ ಈರುಳ್ಳಿ, ಉಪ್ಪು, ಸ್ವಲ್ಪ ಖಾರ ಸೇರಿಸಿ ಮಿಶ್ರಣ ಮಾಡಿದರೆ ಹಕ್ಕರಗಿ ಸೊಪ್ಪಿನ ಸಲಾಡ್ ಸಿದ್ಧವಾಗುತ್ತದೆ. ಇದಕ್ಕೆ ಒಗ್ಗರಣೆ ಕೊಟ್ಟರೆ ಪಲ್ಯ ಕೂಡ ರೆಡಿಯಾಗುತ್ತದೆ. ಹೀಗೆ ಬಹುಮುಖ ಉಪಯೋಗಗಳನ್ನು ಹೊಂದಿರುವ ಹಕ್ಕರಕಿ ಸೊಪ್ಪನ್ನು ಉತ್ತರ ಕರ್ನಾಟಕದ ಕಡೆ ಹೋದರೆ ನೀವು ತಿನ್ನಿ..
ಇದನ್ನೂ ಓದಿ-ಕೆಲವೇ ದಿನಗಳಲ್ಲಿ ಚಮತ್ಕಾರಿಕ ಪದ್ಧತಿಯಲ್ಲಿ ತೂಕ ಇಳಿಕೆ ಮಾಡುತ್ತೆ ಈ ಪೇಯ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.