Hangover home medicine : ನ್ಯೂ ಇಯರ್‌ ಪಾರ್ಟಿ ಅಂತ ಸಖತ್‌ ಆಗಿ ಕುಡಿದು ಮಸ್ತ್‌ ಮಜಾ ಮಾಡಿ ಬೆಳಿಗ್ಗೆ ಎದ್ರೆ ತಲೆ ಹಿಡ್ಕೊಂಡಿರುತ್ತೇ. ಅಯ್ಯಪ್ಪಾ....ಈ ನೋವು ಸಾಕು.. ಇನ್ನೊಮ್ಮೆ ಕುಡಿಯಲ್ಲ ಅಂತ ಫೀಲ್‌ ಬರುತ್ತದೆ. ಇದು ಮದ್ಯಪ್ರೀಯರು ಪಾರ್ಟಿ ಮಾಡಿದ ಮರುದಿನ ಅನುಭವಿಸುವ ಕಷ್ಟಗಳು. ಆದ್ರೆ ಯಾವುದೇ ಕಾರಣಕ್ಕೂ ಲಿಕ್ಕರ್‌ ಮತ್ತು ಪಾರ್ಟಿ ಮಿಸ್‌ ಅಂತ್ರೂ ಮಾಡ್ಕೋಳೋದಿಲ್ಲ. ಆದ್ರೆ ನಿಮ್ಗೆ ಹ್ಯಾಂಗೊವರ್‌ ಹೇಗೆ ಕಡಿಮೆ ಮಾಡ್ಕೋಬೇಕು ಅಂತ ಐಡಿಯಾ ಇದ್ಯಾ..? ಗೊತ್ತಿಲ್ಲ ಅಂದ್ರೆ ಜಸ್ಟ್‌ ಹೀಗೆ ಮಾಡಿ ಸಾಕು..


COMMERCIAL BREAK
SCROLL TO CONTINUE READING

ಹ್ಯಾಂಗೊವರ್ ಅಂದ್ರೆ ಅತಿಯಾಗಿ ಆಲ್ಕೋಹಾಲ್ ಸೇವಿಸಿದ ನಂತರ ಮಲಗಿ ಎದ್ದಾಗ ಉಂಟಾಗುವ ಒಂದು ಅಹಿತಕರ ಭಾವನೆ. ಮದ್ಯ ಕುಡಿಯುವುದನ್ನು ನಿಲ್ಲಿಸಿದ ಹಲವಾರು ಗಂಟೆಗಳ ನಂತರ ಹ್ಯಾಗೊಂವರ್‌ ಪ್ರಾರಂಭವಾಗುತ್ತದೆ. ಲಿಕ್ಕರ್‌ ಎಷ್ಟು ಸೇವಿಸಿದ್ರಿ ಎನ್ನುವ ಪ್ರಮಾಣದ ಮೇಲೆ ಹ್ಯಾಂಗೊವರ್ ಪರಿಣಾಮ ಬೀರುತ್ತದೆ.  ಸಾಮಾನ್ಯವಾಗಿ ಒಂದು ದಿನದೊಳಗೆ ತಾನಾಗಿಯೇ ಸರಿಹೋಗುತ್ತದೆ. ಆದ್ರೆ ಆಪೀಸ್‌, ಕಾಲೇಜ್‌, ಮನೆಗೆ ಹೋಗ್ಬೇಕಪ್ಪಾ ಅಂತ ತಲೆ ಮೇಲೆ ಕೈಹಿಟ್ಟುಕೊಂಡು ಕುಂತವರು ಹೀಗೆ ಮಾಡಿ ಹ್ಯಾಂಗೊವರ್‌ ಸರಿಪಡಿಸಿಕೊಳ್ಳಬಹುದು.


ಇದನ್ನೂ ಓದಿ: Health Tips: ನೆಲದ ಮೇಲೆ ಕುಳಿತುಕೊಳ್ಳುವುದರಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆ ಗೊತ್ತಾದರೆ.....!


ಹ್ಯಾಂಗೊವರ್‌ಗಾಗಿ ಸೂಚಿಸಲಾದ ಮನೆಮದ್ದುಗಳು
 


  • ಹೆಚ್ಚು ನೀರು ಕುಡಿಯಿರಿ : ಮದ್ಯಪಾನವು ಜನರಲ್ಲಿ ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಲಿಕ್ಕರ್‌ ದೇಹಕ್ಕೆ ಹೀಟ್‌ ಆಗಾಗಿ ಬಾಡಿ ಡಿಹೈಡ್ರೇಟ್‌ ಆಗಿರುತ್ತದೆ. ಕೆಲವೊಮ್ಮೆ ಬೆವರು, ಅತಿಸಾರ ಮತ್ತು ವಾಂತಿಯನ್ನೂ ಅನುಭವಿಸಿಬೇಕಾಗುತ್ತದೆ. ಇದರಿಂದ ನಿಮ್ಮ ದೇಹವು ನಿರ್ಜಲೀಕರಣಗೊಳ್ಳಬಹುದು. ಕುಡಿದು ಮಲಗಿದ ನಂತರ ಎಚ್ಚರವಾದಾಗ ಸಾಕಷ್ಟು ನೀರು ಕುಡಿಯಲು ಪ್ರಯತ್ನಿಸಿ.

  • ಕಾರ್ಬೋಹೈಡ್ರೇಟ್‌ ಆಹಾರ ಸೇವಿಸಿ : ಮದ್ಯಪಾನವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಆಯಾಸ ಮತ್ತು ತಲೆನೋವುಗೆ ಕಾರಣವಾಗುತ್ತದೆ. ಜನರು ಸಾಮಾನ್ಯವಾಗಿ ಮದ್ಯಪಾನ ಮಾಡುವಾಗ ತಿನ್ನಲು ಮರೆಯುತ್ತಾರೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಇದರಿಂದ ಹ್ಯಾಂಗೊವರ್‌ ಹೆಚ್ಚಾಗುವ ಲಕ್ಷಣಗಳು ಜಾಸ್ತಿ ಇರುತ್ತವೆ. ಆಗಾಗಿ ಮದ್ಯ ಸೇವನೆ ಮಾಡುವಾಗ ಕಾರ್ಬೋಹೈಡ್ರೇಟ್‌ ಅಂಶ ಒಳಗೊಂಡ ಆಹಾರ ಸೇವಿಸಿ. ಬೆಳಿಗ್ಗೆ ಹಾಂಗೊವರ್‌ ಆದಾಗ, ಟೋಸ್ಟ್‌ನಂತಹ ಬಿಸ್ಕತ್‌ ತಿನ್ನಿ.

  • ಟೀ ಅಥವಾ ಕಾಫಿ ಕುಡಿಯಿರಿ : ಕಾಫಿ ಮತ್ತು ಟೀನಲ್ಲಿರುವ ಕೆಫೀನ್ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಹ್ಯಾಂಗೊವರ್‌ಗೆ ಒಳ್ಳೆಯ ಮದ್ದು. ನೀವು ಎದ್ದಾಗ ಚಹಾ ಅಥವಾ ಕಾಫಿಯನ್ನು ಕುಡಿಯಿರಿ. ಇದು ಹ್ಯಾಂಗೊವರ್‌ ತೆಗೆದುಹಾಕುತ್ತದೆ.

  • ವಿಶ್ರಾಂತಿ ಪಡೆಯಿರಿ : ಹ್ಯಾಂಗೊವರ್‌ನಿಂದ ಚೇತರಿಸಿಕೊಳ್ಳಲು ನೀವು ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಮರುದಿನ ಬೆಳಿಗ್ಗೆ ನೀವು ಉತ್ತಮ ಭಾವನೆ ಹೊಂದಿದ್ದರೂ ಸಹ, ಆಲ್ಕೋಹಾಲ್‌ ನಿಮ್ಮ ಕೆಲಸಗಳಗೆ ಅಡ್ಡಿಯಾಗುತ್ತದೆ. ಆಯಾಸವನ್ನು ಎದುರಿಸಲು ಸಾಧ್ಯವಾದಷ್ಟು ಹೆಚ್ಚುಹೊತ್ತು ನಿದ್ರೆ ಮಾಡಲು ಪ್ರಯತ್ನಿಸಿ.

  • ಜಿನ್ಸೆಂಗ್ ರೂಟ್‌ (ಮೂಲಿಕೆ) : ಜಿನ್ಸೆಂಗ್ ರೂಟ್‌ ದೇಹದಿಂದ ಆಲ್ಕೋಹಾಲ್ ಅನ್ನು ತ್ವರಿತವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹ್ಯಾಂಗೊವರ್ ರೋಗಲಕ್ಷಣಗಳನ್ನು ಬಹುಬೇಗ ನಿವಾರಿಸಲು ಪ್ರಯೋಜನಕಾರಿಯಾಗಿದೆ. ಜಿನ್ಸೆಂಗ್ ಹ್ಯಾಂಗೊವರ್ ವಿರೋಧಿ ಏಜೆಂಟ್ ಇದ್ದಂತೆ. ಜಿನ್ಸೆಂಗ್ ಅನ್ನು ಬಳಸಲು ಹಲವಾರು ಮಾರ್ಗಗಳಿವೆ. ಉದಾಹರಣೆಗೆ, ನೀವು ಸ್ವಲ್ಪ ತಾಜಾ ಜಿನ್ಸೆಂಗ್ ಅನ್ನು ನೀರಿನೊಂದಿಗೆ ಕುದಿಸಿ ಚಹಾದಲ್ಲಿ ಮಿಕ್ಸ್‌ ಮಾಡಿ ಕುಡಿಯಬಹುದು. ನಿಮ್ಮ ಆಹಾರದ ಜೊತೆ ಕೂಡ ಸೇರಿಸಬಹುದು.

  • ಶುಂಠಿ : ಶುಂಠಿಯು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದ್ದು ಅದು ಆಲ್ಕೋಹಾಲ್‌ನಲ್ಲಿರುವ ವಿಷತ್ವವನ್ನು ತೊಡೆದುಹಾಕುತ್ತದೆ. ಶುಂಠಿಯು ಅತಿಸಾರ, ವಾಕರಿಕೆ ಮತ್ತು ವಾಂತಿಯಂತಹ ಹ್ಯಾಂಗೊವರ್ ರೋಗಲಕ್ಷಣಗಳನ್ನು ನಿವಾರಿಸುತ್ತದೆ. ಹ್ಯಾಂಗೊವರ್‌ಗೆ ಸಂಬಂಧಿಸಿದ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ತಾಜಾ ಶುಂಠಿ ಚಹಾದಲ್ಲಿ ಬಳಸಿ ಕುಡಿಯಬಹುದು.

  • ತಾಳ್ಮೆಯಿಂದಿರಿ : ಹ್ಯಾಂಗೊವರ್‌ ಆದಾಗ ಇದರಿಂದ ನಿವು ಹೊರಗೆ ಬರಲು ನಿಮಗೆ ಕನಿಷ್ಠ 24 ಗಂಟೆಗಳ ಸಮಯಬೇಕು. ದೇಹದಲ್ಲಿರುವ ಆಲ್ಕೋಹಾಲ್‌ನ ಎಲ್ಲಾ ವಿಷಕಾರಿ ಉಪ-ಉತ್ಪನ್ನಗಳನ್ನು ತೆರವುಗೊಳಿಸಲು, ದೇಹದಲ್ಲಿ ಜಲಸಂಚಾರ ಅವಶ್ಯಕ. ಯಕೃತ್ತನ್ನು ಗುಣಪಡಿಸಲು ಮತ್ತು ದೇಹದ ಚಟುವಟಿಕೆಗನ್ನು ಪುನಃ  ಸಾಮಾನ್ಯ ಸ್ಥಿತಿಗೆ ತರಲು ನಿಮ್ಮ ದೇಹಕ್ಕೆ ಸಮಯ ಬೇಕಾಗುತ್ತದೆ ತಾಳ್ಮೆಯಿಂದಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.