ರಾತ್ರಿ ಭೋಜನದ ಬಳಿಕ ಕೇವಲ 15 ನಿಮಿಷಗಳ ವಾಕ್ ! ಈ ನಾಲ್ಕು ಕಾಯಿಲೆಯಿಂದ ಶಾಶ್ವತ ಮುಕ್ತಿ !
ರಾತ್ರಿ ಊಟದ ನಂತರ ಮಲಗುವುದಕ್ಕೂ ಮುನ್ನ 15 ನಿಮಿಷಗಳ ನಡಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುವುದಲ್ಲದೆ, ದೇಹದಲ್ಲಿ ಹಲವಾರು ಅದ್ಭುತ ಬದಲಾವಣೆಗಳಿಗೂ ಕಾರಣವಾಗುತ್ತದೆ.
ಬೆಂಗಳೂರು : ಇಂದಿನ ಬಿಡುವಿಲ್ಲದ ಜೀವನದಲ್ಲಿ, ಜನರು ಸಾಮಾನ್ಯವಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಯಾವಾಗ ಬೇಕೋ ಆಗ ಊಟ, ಯಾವಾಗ ಬೇಕೂ ಆಗ ನಿದ್ದೆ ಎನ್ನುವಂಥ ಪರಿಸ್ಥಿತಿ. ಇನ್ನು ರಾತ್ರಿ ಭೋಜನ ಮುಗಿಸಿದ ತಕ್ಷಣ ಕೈಯ್ಯಲ್ಲಿ ಮೊಬೈಲ್ ಹಿಡಿದು ಜಡವಾಗಿ ಕುಳಿತುಕೊಳ್ಳುವುದು, ಟಿವಿ ನೋಡುವುದು, ಇಲ್ಲ ಊಟ ಮುಗಿಸಿದ ತಕ್ಷಣ ನಿದ್ದೆಗೆ ಜಾರಿ ಬಿಡುವುದು ಇಂಥ ವಿಚಿತ್ರ ಜೀವನಶೈಲಿ ನಮ್ಮದು. ಆದರೆ ಹಾಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ರಾತ್ರಿ ಊಟದ ನಂತರ ಮಲಗುವುದು ಸಾಮಾನ್ಯ. ಆದರೆ ರಾತ್ರಿ ಊಟದ ನಂತರ ಮಲಗುವುದಕ್ಕೂ ಮುನ್ನ 15 ನಿಮಿಷಗಳ ನಡಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುವುದಲ್ಲದೆ, ದೇಹದಲ್ಲಿ ಹಲವಾರು ಅದ್ಭುತ ಬದಲಾವಣೆಗಳಿಗೂ ಕಾರಣವಾಗುತ್ತದೆ. ರಾತ್ರಿ ಊಟ ಮಾಡಿದ ನಂತರ 15 ನಿಮಿಷಗಳ ನಡಿಗೆಯ ಮೂಲಕ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳೋಣ.
ಇದನ್ನೂ ಓದಿ : ಅಮೃತಕ್ಕೆ ಸಮ ಕಲ್ಲಂಗಡಿ ಜ್ಯೂಸ್: ವಾರಕ್ಕೊಂದು ಗ್ಲಾಸ್ ಕುಡಿದರೆ ಈ 5 ಕಾಯಿಲೆಗಳನ್ನು ಶಾಶ್ವತವಾಗಿ ದೂರ ಮಾಡುತ್ತೆ
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ರಾತ್ರಿಯ ಊಟದ ನಂತರ ಹೊಟ್ಟೆ ತುಂಬಿರುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, 15 ನಿಮಿಷಗಳ ಕಾಲ ವಾಕಿಂಗ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆಹಾರವು ತ್ವರಿತವಾಗಿ ಜೀರ್ಣವಾಗುತ್ತದೆ. ಇದು ಮಲಬದ್ಧತೆ, ಗ್ಯಾಸ್ ಮತ್ತು ವಾಯು ಮುಂತಾದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ರಕ್ತದಲ್ಲಿನ ಸಕ್ಕರೆಯು ನಿಯಂತ್ರಣದಲ್ಲಿರುತ್ತದೆ :
ರಾತ್ರಿ ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಹಾಗಾಗಿ 15 ನಿಮಿಷಗಳ ಕಾಲ ನಡೆಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅನುವು ಮಾಡಿಕೊಡುತ್ತದೆ. ಮಧುಮೇಹ ರೋಗಿಗಳಿಗೆ ಇದರಿಂದ ಹೆಚ್ಚು ಪ್ರಯೋಜನವಾಗುವುದು.
ಇದನ್ನೂ ಓದಿ : ಮೊಸರು ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?
ಗಾಢ ನಿದ್ದೆಗೆ ಸಹಾಯ ಮಾಡುತ್ತದೆ :
ರಾತ್ರಿ ಊಟವಾದ ಕೂಡಲೇ ಮಲಗಿದರೆ ಒಳ್ಳೆಯ ನಿದ್ದೆ ಬರುವುದಿಲ್ಲ. ಅದರ ಬದಲು 15 ನಿಮಿಷಗಳ ವಾಕ್ ಮಾಡಿದರೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಇದರಿಂದ ನಿದ್ರಾಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಒತ್ತಡವನ್ನು ಕಡಿಮೆ ಮಾಡಿ:
ರಾತ್ರಿ ಊಟದ ನಂತರ ಒತ್ತಡ ಹೆಚ್ಚಾಗಬಹುದು. ಈ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು 15 ನಿಮಿಷಗಳ ಕಾಲ ವಾಕ್ ಮಾಡುವುದು ಮುಖ್ಯ. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
ರಾತ್ರಿ ಊಟದ ನಂತರ ನಡೆಯಲು ಸರಿಯಾದ ಮಾರ್ಗ:
ರಾತ್ರಿಯ ಊಟದ ನಂತರ 15-30 ನಿಮಿಷಗಳ ಕಾಲ ವಾಕ್ ಮಾಡುವುದು ಉತ್ತಮ. ನಡೆಯುವಾಗ, ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು. ಮೊದಲ ಬಾರಿಗೆ ವಾಕ್ ಮಾಡುತ್ತಿದ್ದರೆ ನಿಧಾನವಾಗಿ ನಡಿಗೆಯನ್ನು ಪ್ರಾರಂಭಿಸಿ. ಫಿಟ್ ಆಗುತ್ತಿದ್ದಂತೆ, ನಡಿಗೆಯ ವೇಗ ಮತ್ತು ಸಮಯವನ್ನು ಹೆಚ್ಚಿಸಬಹುದು. ನಿಮಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ, ರಾತ್ರಿ ಊಟದ ನಂತರ ವಾಕಿಂಗ್ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.