Home Remedies : ಪ್ರಾಚೀನ ಕಾಲದಲ್ಲಿ ಪ್ರತಿ ರೋಗವನ್ನೂ ಗಿಡ ಮೂಲಿಕೆಗಳಿಂದ ಗುಣಪಡಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಆಯುರ್ವೇದವನ್ನು ಮೆಡಿಸಿನ್‌ಗಳು ರಿಪ್ಲೇಸ್‌ ಮಾಡುತ್ತ ಬಂದವು. ಆಧುನಿಕ ಯುಗದ ಭರಾಟೆಯಲ್ಲಿ ದಿನಬೆಳಗಾದರೆ ಸಾಕು ಹತ್ತಾರು ಮಾತ್ರೆಗಳನ್ನು ನುಂಗುವ ಜನರಿದ್ದಾರೆ. ಒತ್ತಡದ ಜೀವನದಲ್ಲಿ ತಲೆ ನೋವು, ಮೈಕೈ ನೋವು ಸಾಮಾನ್ಯವಾಗಿದೆ. ಆದರೆ ಹವಾಮಾನ ಬದಲಾದಾಗ ಕಾಯಿಲೆಗಳು ಬರುವುದು ಸಹ ಸಾಮಾನ್ಯವಾಗಿ ಬಿಡುತ್ತದೆ. ಈ ಹವಾಮಾನದಲ್ಲಿ ನೆಗಡಿ, ಕೆಮ್ಮು, ಜ್ವರ ಸಾಮಾನ್ಯ. ಜ್ವರ ಬಂದಾಗ ಅದರ ಜೊತೆ ಮೈ ಕೈ ನೋವು ಸಹ ಬರುತ್ತದೆ. ನೋಡಲು ಪುಟ್ಟದಾದ ಎಳೆಗಳನ್ನು ಹೊಂದಿರುವ ಗರಿಕೆ ಗಣಪತಿಗೆ ಮಾತ್ರ ಪವಿತ್ರವಲ್ಲ. ಬದಲಾಗಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿವೆ. ಹಲವು ರೋಗಗಳಿಗೆ ಗರಿಕೆ ಮನೆಮದ್ದಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Health Tips: ಮೊಡವೆಯಿಂದ ಮುಕ್ತಿ ಪಡೆಯಲು ಖಾಲಿ ಹೊಟ್ಟೆಯಲ್ಲಿ ಈ ಒಂದು ಎಲೆ ತಿನ್ನಿ


ಜ್ವರದ ಲಕ್ಷಣಗಳಿದ್ದರೆ ದೇಹದಲ್ಲಿ ಮೈಕೈ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಮೈಕೈ ನೋವನ್ನು ನಿವಾರಿಸಲು ಗರಿಕೆಯ ಕಷಾಯ ಉತ್ತಮವಾಗಿ ಕೆಲಸ ಮಾಡುತ್ತದೆ. ಗರಿಕೆ ಹುಲ್ಲು ಮತ್ತು ನಾಲ್ಕೈದು ತುಳಸಿ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಅದನ್ನು ಬೆಳಗ್ಗೆ ಹಾಗೂ ರಾತ್ರಿ ಕುಡಿದರೆ ಮೈಕೈ ನೋವು ನಿವಾರಣೆಯಾಗುತ್ತದೆ. ಇದಲ್ಲದೇ ಹೊಟ್ಟೆಯೊಳಗಿನ ಜ್ವರವನ್ನು ಸಹ ಈ ಗರಿಕೆ ಕಷಾಯ ವಾಸಿ ಮಾಡಬಲ್ಲದು. ದೇಹದಲ್ಲಿ ಹೊರ ಭಾಗದಲ್ಲಿ ಮೈ ಬಿಸಿಯಾಗುವುದಿಲ್ಲ, ಆದರೆ ಆಂತರಿಕವಾಗಿ ಸುಸ್ತು, ಪದೇ ಪದೇ ತಲೆಸುತ್ತಿದ ಅನುಭವವಾಗುತ್ತದೆ ಇದು ಒಳ ಜ್ವರದ ಲಕ್ಷಣವಾಗಿದೆ. ಇದಕ್ಕೆ ಗರಿಕೆ ಹುಲ್ಲಿನ ಕಷಾಯ ಉತ್ತಮ ಮನೆಮದ್ದಾಗಿದೆ. ಗರಿಕೆ ಹುಲ್ಲು, ಒಂದೆಲಗ, ಜೀರಿಗೆಯನ್ನು ಸೇರಿಸಿ ಕುದಿಸಿ ದಿನನಿತ್ಯ ಸೇವಿಸುತ್ತಾ ಬಂದರೆ ಒಳ ಜ್ವರ ನಿವಾರಣೆಯಾಗುತ್ತದೆ. 


ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಅಲರ್ಜಿ, ಅಸ್ತಮಾ ಕೂಡ ಅಧಿಕವಾಗುತ್ತಿದೆ. ಈ ರೋಗಿಗಳು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗರಿಕೆ ಹುಲ್ಲಿನ ರಸವನ್ನು 2 ಅಥವಾ 3 ಚಮಚ ಸೇವನೆ ಮಾಡುವುದರಿಂದ ಅಲರ್ಜಿ ಶೀತ, ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ. ದೇಹದಲ್ಲಿನ ಅಶುದ್ಧ ರಕ್ತ ಅಧಿಕವಾದಾಗ ಕುರು, ಕಜ್ಜಿಯಂತಹ ಕಾಯಿಲೆಗಳು ಕಾಡುತ್ತವೆ. ಇಂತಹ ಸಮಯದಲ್ಲಿ ರಕ್ತವನ್ನು ಶುದ್ಧೀಕರಿಸಲು ಗರಿಕೆ ಹುಲ್ಲು ಸಹಾಯಕವಾಗಿದೆ. 10 ರಿಂದ 15 ಗರಿಕೆ ಹುಲ್ಲನ್ನು ತಂದು ಮಿಕ್ಸಿ ಮಾಡಿ ಅದರ ರಸವನ್ನು ಒಂದು ತಿಂಗಳ ಕಾಲ ಸೇವನೆ ಮಾಡುತ್ತಾ ಬಂದರೆ ದೇಹದಲ್ಲಿನ ರಕ್ತ ಶುದ್ಧವಾಗುತ್ತದೆ. ಇದರಿಂದ ಕುರು, ಕಜ್ಜಿಯ ಸಮಸ್ಯೆಗಳು ದೂರವಾಗುತ್ತವೆ. 


ಇದನ್ನೂ ಓದಿ: Health Tips: ರಾತ್ರಿ ಊಟದ ನಂತರ ಕೇವಲ 10 ನಿಮಿಷ ಮಾಡುವ ಈ ಕೆಲಸ, ಹಲವು ರೋಗಗಳಿಗೆ ಪರಿಹಾರ


ಪ್ರತಿ ತಿಂಗಳು ಅನೇಕ ಮಹಿಳೆಯರಿಗೆ ನರಕಯಾತನೆ ತಂದೊಡ್ಡಬಹುದು. ಮುಟ್ಟಿನ ದಿನಗಳ ಸಂದರ್ಭದಲ್ಲಿ ಬರುವ ಹೊಟ್ಟೆ, ಸೊಂಟ ನೋವಿಗೆ ಗರಿಕೆಯಲ್ಲಿ ಪರಿಹಾರವಿದೆ. ಇದನ್ನು ನಿವಾರಣೆ ಮಾಡಲು ಗರಿಕೆ ಹುಲ್ಲಿನ ರಸ ಅಥವಾ ಕಷಾಯ ಸೇವಿಸಬಹುದು. ಒಂದು ಚಮಚ ಗರಿಕೆ ಹುಲ್ಲಿನ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ತಿಂದರೆ ಮುಟ್ಟಿನ ದಿನಗಳ ಹೊಟ್ಟೆನೋವು ಕಡಿಮೆಯಾಗುತ್ತದೆ. ಆದರೆ ಹೆಚ್ಚು ಸೇವಿಸಬಾರದು, ದಿನಕ್ಕೆ ಒಂದು ಬಾರಿ ಸೇವನೆ ಮಾಡಬೇಕು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.