Garlic tea for Diabetes : ಎಲ್ಲರಿಗೂ ಶುಂಠಿ ಟೀ, ಪುದೀನಾ ಟೀ, ಲೆಮನ್ ಟೀ ಬಗ್ಗೆ ಗೊತ್ತೇ ಇದೆ. ಬೆಳ್ಳುಳ್ಳಿ ಚಹಾದ ಬಗ್ಗೆ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ. ಬೆಳ್ಳುಳ್ಳಿ ಚಹಾದ ಆರೋಗ್ಯಕಾರಿ ಪ್ರಯೋಜನಗಳು ನಿಮಗೆ ತಿಳಿದಿದ್ದರೆ, ನೀವು ಅದನ್ನು ಎಂದಿಗೂ ಬಿಡುವುದಿಲ್ಲ. ಸಂಪೂರ್ಣ ವಿವರ ಈ ಕೆಳಗಿನಂತಿದೆ.


COMMERCIAL BREAK
SCROLL TO CONTINUE READING

ಪ್ರತಿದಿನ ಬೆಳಗ್ಗೆ ಬೆಳ್ಳುಳ್ಳಿ ಟೀ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಅಂತ ಅನೇಕರಿಗೆ ತಿಳಿದಿಲ್ಲ. ಈ ಚಹಾವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಬೆಳ್ಳುಳ್ಳಿ ಟೀ ಕುಡಿದರೆ ಹಲವು ರೀತಿಯ ಕಾಯಿಲೆಗಳು ದೂರವಾಗುತ್ತವೆ. ಇದು ಸಾಕಷ್ಟು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿ ಟೀ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿವೈರಲ್ ಗುಣವಿದೆ. ಇದಕ್ಕೆ ಸ್ವಲ್ಪ ಶುಂಠಿ ಮತ್ತು ದಾಲ್ಚಿನ್ನಿ ಕೂಡ ಸೇರಿಸಬಹುದು. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಚಹಾದ ರುಚಿ ಹೆಚ್ಚುತ್ತದೆ. 


ಇದನ್ನೂ ಓದಿ:  ಹೃದಯಾಘಾತವಾಗುವ ಮೊದಲು ದೇಹದ ಈ 5 ಭಾಗಗಳು ಮರಗಟ್ಟುತ್ತವೆ..!


ಬೆಳ್ಳುಳ್ಳಿ ಟೀ ಶಕ್ತಿಯುತ ರೋಗನಿರೋಧಕ ಪಾನೀಯವಾಗಿದೆ. ಬೆಳ್ಳುಳ್ಳಿ ಟೀ ಕುಡಿಯುವುದರಿಂದ ದೇಹದ ಊತ ಕಡಿಮೆಯಾಗುತ್ತದೆ. ಮಧುಮೇಹ ರೋಗಿಗಳಿಗೆ ಬೆಳ್ಳುಳ್ಳಿ ಟೀ ತುಂಬಾ ಪ್ರಯೋಜನಕಾರಿ. ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ, ಚಯಾಪಚಯವು ಹೆಚ್ಚಾಗುತ್ತದೆ. 


ಬೆಳ್ಳುಳ್ಳಿ ಚಹಾವನ್ನು ಕುಡಿಯುವುದರಿಂದ ದೇಹದಿಂದ ವಿಷ ಮತ್ತು ತ್ಯಾಜ್ಯವನ್ನು ತೆಗೆದುಹಾಕುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ತೂಕವನ್ನು ಕಳೆದುಕೊಳ್ಳಬಹುದು. ಈ ಚಹಾ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ರಕ್ತನಾಳಗಳು ಶುದ್ಧವಾಗುತ್ತವೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಹೃದಯವನ್ನು ಇತರ ಕಾಯಿಲೆಗಳಿಂದ ರಕ್ಷಿಸುತ್ತದೆ, ಬೆಳ್ಳುಳ್ಳಿ ಟೀ ಉಸಿರಾಟದ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರವಾಗಿದೆ. ಜ್ವರ ಮತ್ತು ಶೀತವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: ಡಯಾಬಿಟೀಸ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರುತ್ತದೆ ಈ ಹಳದಿ ಹಣ್ಣು !


ಈಗ ಬೆಳ್ಳುಳ್ಳಿ ಟೀ ಮಾಡುವುದು ಹೇಗೆ : ಮೊದಲು ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀರು ಹಾಕಿ ಕುದಿಸಿ. ಅದರ ನಂತರ ಪುಡಿಮಾಡಿದ ಬೆಳ್ಳುಳ್ಳಿ, ಸ್ವಲ್ಪ ಹುರಿದ ಕರಿಮೆಣಸಿನ ಪುಡಿಯನೂ ಸಹ ಸೇರಿಸಿ ಕುದಿಸಿ, ಅಂತಿಮವಾಗಿ, ಅದನ್ನು ಬೆಳಿಗ್ಗೆ ಬೇಗನೆ ಫಿಲ್ಟರ್ ಮಾಡಿ ಕುಡಿಯಬೇಕು. ರುಚಿಗೆ ಸ್ವಲ್ಪ ಶುಂಠಿ ಮತ್ತು ದಾಲ್ಚಿನ್ನಿ ಸೇರಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.