Lemon Health benefits : ನಿಂಬೆಯು ವರ್ಷವಿಡೀ ಲಭ್ಯವಿರುವ ಹಣ್ಣುಗಳಲ್ಲಿ ಒಂದು. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಂಬೆ ರಸವನ್ನು ಕುಡಿಯುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಅಲ್ಲದೆ, ಬಿಸಿ ನೀರಿನಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.


COMMERCIAL BREAK
SCROLL TO CONTINUE READING

ಬೇಸಿಗೆಯ ಬಿಸಿಲಿಗೆ ನಿಂಬೆ ರಸ ರಾಮಬಾಣ ಅಲ್ಲದೆ, ದೇಹವನ್ನು ಹೈಡ್ರೀಕರಿಸುವಲ್ಲಿ ಇದು ಸಹಾಯ ಮಾಡುತ್ತದೆ. ಇನ್ನು ರಸವಷ್ಟೇ ಅಲ್ಲ ಸಿಪ್ಪೆಯೂ ಸಹ ಚರ್ಮದ ಕಾಂತಿ ಹೆಚ್ಚಿಸಲು ಉಪಯುಕ್ತವಾಗಿದೆ. ಇದೀಗ ನಿಂಬೆ ರಸವನ್ನು ಸೇವಿಸುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಿದ್ರೆ, ನಿಂಬೆ ರಸ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು ಯಾವುದು ಅಂತ ತಿಳಿಯೋಣ.. 


ಇದನ್ನೂ ಓದಿ: ಒಡೆದ ತುಟಿಗಳಿಂದ ಮುಕ್ತಿ ಹೊಂದಲು ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು..!


ನಿಂಬೆ ರಸದ ಪ್ರಯೋಜನಗಳು


  • ದೇಹವನ್ನು ಹೈಡ್ರೀಕರಿಸುವಲ್ಲಿ ನಿಂಬೆ ರಸವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದಲ್ಲದೆ, ಇದು ದೇಹವನ್ನು ತಾಜಾವಾಗಿರಿಸುತ್ತದೆ. 

  • ವರ್ಕ್‌ ಫ್ರಂ ಹೋಮ್‌ ಮಾಡುವವರಿಗೆ ನಿಂಬೆ ರಸ ಉತ್ತಮ ಚಿಕಿತ್ಸೆಯಾಗಿದೆ. ಸ್ಥೂಲಕಾಯವಾಗದಂತೆ ತಡೆಯುತ್ತದೆ.

  • ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

  • ನಿಂಬೆ ರಸವನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದಲ್ಲದೆ, ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳು ದೂರವಾಗುತ್ತವೆ.

  • ನಿಂಬೆ ರಸವು ಚರ್ಮದ ತ್ವಚೆಯನ್ನು ಕಾಂತಿಯುತಗೊಳಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ.  

  • ನಿಂಬೆ ರಸ ಚಿಕ್ಕ ವಯಸ್ಸಿನಲ್ಲೇ ಸುಕ್ಕುಗಳು ಬರದಂತೆ ತಡೆಯುತ್ತದೆ. 

  • ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ಮೂತ್ರಪಿಂಡದ ಕಲ್ಲುಗಳನ್ನೂ ಕರಗಿಸುತ್ತದೆ. 

  • ನಿಂಬೆ ರಸವು ಹಲ್ಲು ನೋವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಒಸಡುಗಳಲ್ಲಿ ರಕ್ತಸ್ರಾವ ಇರುವವರು ನಿಂಬೆ ರಸವನ್ನು ಆಗಾಗ್ಗೆ ಸೇವಿಸುವುದು ಬಳ್ಳೆಯದು.

  • ಬೇಸಿಗೆಯಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ಆಯಾಸ ಪರಿಹಾರವಾಗುತ್ತದೆ.

  • ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಕುಡಿಯುವುದರಿಂದ ಮಾನಸಿಕ ಒತ್ತಡ ದೂರವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.