Papaya health benefits : ಪಪ್ಪಾಯಿ ಆರೋಗ್ಯಕ್ಕೆ ಪ್ರಯೋಜನಕಾರಿ ಹಣ್ಣು. ಈ ಹಣ್ಣನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಹೆಚ್ಚಿನ ಜನರು ಪಪ್ಪಾಯಿಯನ್ನು ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಪಪ್ಪಾಯಿ ಬೀಜಗಳು ನಿಷ್ಪ್ರಯೋಜಕ ಅಂತ ಭಾವಿಸಿದ್ದಾರೆ. ವಾಸ್ತವವಾಗಿ ಪಪ್ಪಾಯಿ ಬೀಜಗಳು ಆರೋಗ್ಯಕ್ಕೆ ಔಷಧಿಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇಂದು ನಾವು ಮಾಗಿದ ಪಪ್ಪಾಯಿ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳೋಣ. 


COMMERCIAL BREAK
SCROLL TO CONTINUE READING

ಯಕೃತ್ತಿಗೆ ಪ್ರಯೋಜನಕಾರಿ : ನೀವು ಯಾವುದೇ ಲಿವರ್ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದರೆ ಪಪ್ಪಾಯಿ ಬೀಜಗಳನ್ನು ಸೇವಿಸಿ. ಇದು ಯಕೃತ್ತನ್ನು ಬಲಪಡಿಸುತ್ತದೆ. ಇದರೊಂದಿಗೆ ನೀವು ಇತರ ಕಾಯಿಲೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಇದಕ್ಕಾಗಿ ಪಪ್ಪಾಯಿ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಪುಡಿ ತಯಾರಿಸಿಕೊಳ್ಳಿ. ಈ ಪುಡಿಯಲ್ಲಿ ನಿಂಬೆ ರಸದಲ್ಲಿ ಬೆರೆಸಿ ಪ್ರತಿದಿನ ಸೇವಿಸಿ.


ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಎದ್ದು ಬಾಳೆಹಣ್ಣು ತಿನ್ನುತ್ತೀರಾ..? ಪರಿಣಾಮ ತಿಳಿದರೆ ಶಾಕ್ ಆಗುತ್ತೀರಿ..!


ಜೀರ್ಣಾಂಗ ವ್ಯವಸ್ಥೆ : ಪಪ್ಪಾಯಿ ಬೀಜಗಳು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ಬೀಜಗಳು ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು, ಹೊಟ್ಟೆಗೆ ಸಂಬಂಧಿಸಿದ ಇತರ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ಇದಕ್ಕಾಗಿ ಪಪ್ಪಾಯಿ ಬೀಜದ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಸೇರಿಸಿ ತೆಗೆದುಕೊಳ್ಳುತ್ತಿರಿ. 
 
ಮೂತ್ರಪಿಂಡಗಳಿಗೆ ಪ್ರಯೋಜನಕಾರಿ : ಪಪ್ಪಾಯಿ ಬೀಜಗಳು ಮೂತ್ರಪಿಂಡಗಳನ್ನು ಸಹ ಬಲಪಡಿಸುತ್ತದೆ. ಕಲ್ಲುಗಳನ್ನು ಹೊರಹಾಕಲು ವಿಶೇಷವಾಗಿ ಸಹಾಯ ಮಾಡುತ್ತದೆ. ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಲ್ಲಿ ಪಪ್ಪಾಯಿ ಬೀಜದ ಪುಡಿಯನ್ನು ನಿಯಮಿತವಾಗಿ ಕೆಲವು ದಿನಗಳವರೆಗೆ ಸೇವಿಸುತ್ತಿರಿ.


ಇದನ್ನೂ ಓದಿ: ಈ ಅಪಾಯಕಾರಿ ಕಾಯಿಲೆ ಸಕ್ಕರೆ ರೋಗಿಗಳ ದೃಷ್ಟಿಯನ್ನೇ ಕಸಿದುಕೊಳ್ಳುತ್ತೇ, ಇಂದೇ ಅದರ ಲಕ್ಷಣಗಳನ್ನು ತಿಳಿದುಕೊಳ್ಳಿ!
 
ಹೊಳೆಯುವ ತ್ವಚೆ : ಯಾವುದೇ ತ್ವಚೆ ಸಂಬಂಧಿತ ಸಮಸ್ಯೆಯನ್ನು ಗುಣಪಡಿಸಲು ಪಪ್ಪಾಯಿ ಬೀಜಗಳು ತುಂಬಾ ಪ್ರಯೋಜನಕಾರಿ. ಅಲ್ಲದೆ ಇದು ನಿಮ್ಮ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಸುಕ್ಕುಗಳನ್ನೂ ಹೋಗಲಾಡಿಸುತ್ತದೆ.  


ತೂಕ  : ನೀವು ನಿಮ್ಮ ತೂಕವನ್ನು ಕಳೆದುಕೊಳ್ಳಲು ಬಯಸಿದರೆ ಪಪ್ಪಾಯಿ ಬೀಜಗಳನ್ನು ಸೇವಿಸುವುದು ಉತ್ತಮ. ಅದಕ್ಕಾಗಿ ಪ್ರತಿದಿನ ಪಪ್ಪಾಯಿ ಬೀಜಗಳನ್ನು ಸೇವಿಸಿ. ಇದನ್ನು 10 ರಿಂದ 15 ದಿನಗಳ ಕಾಲ ನಿರಂತರವಾಗಿ ಸೇವಿಸಿದರೆ ತೂಕದಲ್ಲಿ ವ್ಯತ್ಯಾಸ ಕಾಣತ್ತೀರಾ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.