Diabetes : ಕುಂಬಳ ಕಾಯಿ ಬೀಜ ಸೇವನೆಯಿಂದಾಗುವ ಈ ಅದ್ಭುತ ಲಾಭಗಳು ನಿಮಗೂ ತಿಳಿದಿರಲಿ
Pumpkin Benefits: ಬಹುತೇಕ ಜನರಿಗೆ ಕುಂಬಳಕಾಯಿಯ ಬಗ್ಗೆ ತಿಳಿದಿದೆ. ಆದರೆ, ಕುಂಬಳ ಕಾಯಿ ಬೀಜದಿಂದಾಗುವ ಆರೋಗ್ಯಕರ ಲಾಭಗಳ ಕುರಿತು ತುಂಬಾ ಕಡಿಮೆ ಜನರಿಗೆ ತಿಳಿದಿದೆ. ಡಯಾಬಿಟಿಸ್ ನಂತಹ ಗಂಭೀರ ಕಾಯಿಲೆಯಲ್ಲಿ ಈ ಬೀಜಗಳು ತುಂಬಾ ಲಾಭಕಾರಿ ಸಾಬೀತಾಗುತ್ತವೆ.
Pumpkin Seeds Benefits: ಕುಂಬಳಕಾಯಿಯನ್ನು ಭಾರತದ ಬಹುತೇಕ ಮನೆಗಳಲ್ಲಿ ಬಳಸಲಾಗುತ್ತದೆ. ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ತರಕಾರಿಗಳಿಂದ ಹಿಡಿದು ಸಿಹಿತಿಂಡಿಗಳವರೆಗೆ ಇದನ್ನು ಹಲವು ವಿಧಗಳಲ್ಲಿ ಸೇವಿಸಲಾಗುತ್ತದೆ. ಅನೇಕ ಜನರು ಮಾರುಕಟ್ಟೆಗೆ ಹೋದಾಗ, ಕಡಿಮೆ ಪ್ರಮಾಣದಲ್ಲಿ ಬೀಜಗಲಿರುವ ಕುಂಬಳಕಾಯಿಯನ್ನು ಖರೆಡಿಸಲು ಹೆಚ್ಚು ಇಷ್ಟಪಡುತ್ತಾರೆ, ಸಾಮಾನ್ಯವಾಗಿ ಜನರು ಕುಂಬಳಕಾಯಿ ಪಲ್ಲ್ಯೆ ಅಥವಾ ಸಾಂಬಾರನ್ನು ತಯಾರಿಸುವಾಗ ಅದರ ಬೀಜಗಳನ್ನು ತೆಗೆದು ಕಸದ ಬುಟ್ಟಿಗೆ ಹಾಕುತ್ತಾರೆ. ಆದರೆ ಕುಂಬಳಕಾಯಿ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಅದರ ಪ್ರಯೋಜನಗಳನ್ನು ತಿಳಿದ ನಂತರ, ನೀವು ಅದನ್ನು ಕಸದ ಬುಟ್ಟಿಗೆ ಎಸೆಯಲು ಇಷ್ಟಪಡುವುದಿಲ್ಲ ಎಂಬುದು ಮಾತ್ರ ಗ್ಯಾರಂಟಿ.
ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದಾಗುವ ಪ್ರಯೋಜನಗಳು
1. ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನ ಶೈಲಿಯಲ್ಲಿ, ಕೆಲಸ, ಕುಟುಂಬ ಮತ್ತು ಆರ್ಥಿಕ ಹೊಣೆಯ ಕಾರಣ ಜನರ ಮೇಲೆ ಹೆಚ್ಚಿನ ಒತ್ತಡವಿದೆ. ಅತಿಯಾದ ಈ ಒತ್ತಡವು ನಂತರ ಖಿನ್ನತೆಯ ರೂಪವನ್ನು ಪಡೆದುಕೊಳ್ಳುತ್ತದೆ . ಕುಂಬಳಕಾಯಿ ಬೀಜಗಳು ಈ ಒತ್ತಡವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದಲ್ಲದೆ, ಇದರಲ್ಲಿರುವ ಸತು ಮತ್ತು ವಿಟಮಿನ್ ಬಿ ಒತ್ತಡವನ್ನು ನಿವಾರಿಸುತ್ತವೆ.
2. ನಿಮಗೆ ಒಂದು ವೇಳೆ ನಿದ್ರಾಹೀನತೆಯ ಸಮಸ್ಯೆ ಇದ್ದರೆ ಅಥವಾ ರಾತ್ರಿ ನಿದ್ರೆಗೆ ಜಾರಿದ ಬಳಿಕ ಇದ್ದಕ್ಕಿದ್ದಂತೆ ಎಚ್ಚರವಾಗುತ್ತಿದ್ದರೆ ನೀವು ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು. ಕುಂಬಳಕಾಯಿ ಬೀಜಗಳು ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹೀಗೆ ಇದು ನಿದ್ರಾಹೀನತೆಯಿಂದ ನಿಮಗೆ ಸಾಕಷ್ಟು ಪರಿಹಾರ ನೀಡುತ್ತದೆ.
3. ಮಧುಮೇಹ ರೋಗಿಗಳು ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಅದರಲ್ಲಿರುವ ಫೈಬರ್ ಟೈಪ್ 2 ಮಧುಮೇಹದಿಂದ ಪರಿಹಾರವನ್ನು ಒದಗಿಸುತ್ತದೆ. ಇದರಲ್ಲಿ ಕಂಡುಬರುವ ವಿಟಮಿನ್ ಸಕ್ಕರೆಯ ವಿರುದ್ಧ ಹೋರಾಡಲು ತುಂಬಾ ಪ್ರಭಾವಶಾಲಿಯಾಗಿದೆ.
ಇದನ್ನೂ ಓದಿ-Dates Benefits : ದೀರ್ಘಾಯುಷ್ಯಕ್ಕಾಗಿ ಸೇವಿಸಿ ಖರ್ಜೂರ, ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆ!
4. ಕುಂಬಳಕಾಯಿ ಬೀಜಗಳನ್ನು ರೋಗನಿರೋಧಕ ಶಕ್ತಿ ವರ್ಧಕವಾಗಿ ಬಳಸಲಾಗುತ್ತದೆ . ಇದರ ಬೀಜಗಳ ಸೇವನೆಯು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ-Weight Loss: ತೂಕ ಇಳಿಸುವಾಗ ಮರೆತೂ ಕೂಡ ಈ 2 ಪದಾರ್ಥಗಳನ್ನು ತಿನ್ನಬೇಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.