Dates Benefits : ದೀರ್ಘಾಯುಷ್ಯಕ್ಕಾಗಿ ಸೇವಿಸಿ ಖರ್ಜೂರ, ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆ!

ಇದು ಗರ್ಭಿಣಿ ಮಹಿಳೆಯರ ಆರೋಗ್ಯದ ಮೇಲೆ ತುಂಬಾ ವಿಶೇಷ ಪರಿಣಾಮವನ್ನು  ಬೀರುತ್ತದೆ ಎಂದು ಅಧ್ಯಯನದಿನ್ದ ಅತಿಳಿದು ಬಂದಿದೆ. ಗರ್ಭಾವಸ್ಥೆಯಲ್ಲಿ ಖರ್ಜೂರವನ್ನು ತಿನ್ನುವುದು ಹೆರಿಗೆ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೌದು ಹೇಗೆ ಇಲ್ಲಿದೆ ನೋಡಿ..  

Written by - Channabasava A Kashinakunti | Last Updated : Oct 17, 2022, 03:29 PM IST
  • ಖರ್ಜೂರವನ್ನು ನ್ಯಾಚುರಲ್ ಸ್ವೀಟೆನೇರ್ ಎಂದು ಕರೆಯಲಾಗುತ್ತದೆ
  • ಖರ್ಜೂರ ಆರೋಗ್ಯಕ್ಕೆ ತುಂಬಾ ಉಪಯೋಗವಾಗಿದೆ
  • ಇವು ಖರ್ಜೂರದ ಪ್ರಯೋಜನಗಳು
Dates Benefits : ದೀರ್ಘಾಯುಷ್ಯಕ್ಕಾಗಿ ಸೇವಿಸಿ ಖರ್ಜೂರ, ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆ! title=

Benefits Of Dates : ಖರ್ಜೂರವನ್ನು ನ್ಯಾಚುರಲ್ ಸ್ವೀಟೆನೇರ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇದನ್ನು ಹೆಚ್ಚಾಗಿ ಒಣ ಹಣ್ಣುಗಳ ರೂಪದಲ್ಲಿ ಸೇವಿಸಲಾಗುತ್ತದೆ. ಇದನ್ನು ಶೇಕ್‌ಗಳು, ಸಿಹಿತಿಂಡಿಗಳು ಮತ್ತು ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉಪಯೋಗವಾಗಿದೆ ಎಂಬುವುದು ಗೊತ್ತಿರುವ ವಿಚಾರ. ಆದ್ರೆ ಖರ್ಜೂರವು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದು ಗರ್ಭಿಣಿ ಮಹಿಳೆಯರ ಆರೋಗ್ಯದ ಮೇಲೆ ತುಂಬಾ ವಿಶೇಷ ಪರಿಣಾಮವನ್ನು  ಬೀರುತ್ತದೆ ಎಂದು ಅಧ್ಯಯನದಿನ್ದ ಅತಿಳಿದು ಬಂದಿದೆ. ಗರ್ಭಾವಸ್ಥೆಯಲ್ಲಿ ಖರ್ಜೂರವನ್ನು ತಿನ್ನುವುದು ಹೆರಿಗೆ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೌದು ಹೇಗೆ ಇಲ್ಲಿದೆ ನೋಡಿ..  

ಇದನ್ನೂ ಓದಿ : Weight Loss: ತೂಕ ಇಳಿಸುವಾಗ ಮರೆತೂ ಕೂಡ ಈ 2 ಪದಾರ್ಥಗಳನ್ನು ತಿನ್ನಬೇಡಿ

ಇವು ಖರ್ಜೂರದ ಪ್ರಯೋಜನಗಳು

1. ಖರ್ಜೂರದಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಖನಿಜಗಳು ಮತ್ತು ಜೀವಸತ್ವಗಳ ನಿಧಿಯಾಗಿದೆ. ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಇಡೀ ದಿನ ಶಕ್ತಿ ಸಿಗುತ್ತದೆ. ಪ್ಲಮ್ ಮತ್ತು ಅಂಜೂರದ ಹಣ್ಣುಗಳಿಗಿಂತ ಖರ್ಜೂರದಲ್ಲಿ ಉತ್ಕರ್ಷಣ ನಿರೋಧಕಗಳ ಪ್ರಮಾಣವು ಅಧಿಕವಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

2. ಖರ್ಜೂರವು ಮಧುಮೇಹ ಮತ್ತು ಆಲ್ಝೈಮರ್ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದರಲ್ಲಿ ಕಂಡುಬರುವ ಕ್ಯಾರೊಟಿನಾಯ್ಡ್ಗಳು ಕಣ್ಣು ಮತ್ತು ಹೃದಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

3. ವಿಟಮಿನ್ ಬಿ1, ಬಿ2, ಬಿ3, ಬಿ5, ಎ1 ಜೊತೆಗೆ ಖರ್ಜೂರದಲ್ಲಿ ಹಲವು ವಿಧದ ಅಮೈನೋ ಆಮ್ಲಗಳೂ ಕಂಡುಬರುತ್ತವೆ. ಗರ್ಭಿಣಿ ಮಹಿಳೆ ಹೆರಿಗೆಯಾಗುವ ಒಂದು ತಿಂಗಳ ಮೊದಲು ಖರ್ಜೂರವನ್ನು ತಿನ್ನಲು ಪ್ರಾರಂಭಿಸಿದರೆ, ಸಾಮಾನ್ಯ ಹೆರಿಗೆಯ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಗರ್ಭಾವಸ್ಥೆಯಲ್ಲಿ ಖರ್ಜೂರವನ್ನು ತಿನ್ನುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : ಅತ್ಯಂತ ಅಪಾಯಕಾರಿ Type 3 diabetesನ ಲಕ್ಷಣಗಳಿವು .! ಎಚ್ಚರ ತಪ್ಪಿದರೆ ಪ್ರಾಣಕ್ಕೇ ಆಪತ್ತು .!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News