Sugarcane Juice: ಕಬ್ಬಿನ ಹಾಲಿನಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು: ಇಲ್ಲಿದೆ ಅದರ ಪ್ರಯೋಜನಗಳು!
ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು ಮುಂತಾದ ಪೋಷಕಾಂಶ
ನಮ್ಮ ದೇಹಕ್ಕೆ ಬೇಸಿಗೆಯಲ್ಲಿ ಕಬ್ಬಿನ ಹಾಲು ತುಂಬಾ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ದೇಹವು ತಂಪಾಗಿರುವುದಲ್ಲದೆ, ಇದು ನಾಲಿಗೆಗೆ ತುಂಬಾ ರುಚಿಯನ್ನು ನೀಡುತ್ತದೆ. ಬಿಸಿಲಿನ ಬಾಯಾರಿಕೆಯನ್ನು ಕಬ್ಬಿನ ರಸವು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು ಮುಂತಾದ ಪೋಷಕಾಂಶಗಳಿವೆ. ಇದು ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಅದರ ಹೆಚ್ಚಿನ ಪ್ರಯೋಜನಗಳ ಬಗ್ಗೆ ಇಲ್ಲಿದೆ ಓದಿ..
ಮೂತ್ರ ಕಿರಿಕಿರಿಗೆ ಕಬ್ಬಿನ ಹಾಲು:
ಇದನ್ನೂ ಓದಿ : Skin Care- ಮನೆಯಲ್ಲಿ ಮೊದಲ ಬಾರಿಗೆ ಬ್ಲೀಚ್ ಬಳಸುತ್ತಿದ್ದರೆ ಈ ಬಗ್ಗೆ ಎಚ್ಚರವಹಿಸಿ
ಕಬ್ಬಿನ ಹಾಲು(Sugarcane Juice) ಸೇವಿಸುವುದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಮತ್ತು ನೋವನ್ನು ನಿವಾರಿಸುತ್ತದೆ. ಇದಲ್ಲದೆ ಮೂತ್ರಪಿಂಡದ ಕಲ್ಲುಗಳಿದ್ದರೆ ಕಬ್ಬಿನ ಹಾಲು ಕುಡಿಯುವುದು ಉತ್ತಮ.
ಇದನ್ನೂ ಓದಿ : Kids Mental Health: ಲಾಕ್‌ಡೌನ್ ಮಧ್ಯೆ ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಕಡಿಮೆ ಮಾಡಲು ಈ ಟಿಪ್ಸ್ ಅನುಸರಿಸಿ
ಉತ್ತಮ ಜೀರ್ಣಕ್ರಿಯೆಗೆ ಕಬ್ಬಿನ ಹಾಲು:
ಕಬ್ಬಿನ ಹಾಲು ಜೀರ್ಣಕ್ರಿಯೆ(Digestion)ಗೆ ಉತ್ತಮವಾಗಿದೆ. ಈ ಹಾಲುನಲ್ಲಿ ನೈಸರ್ಗಿಕ ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಇದು ಹೊಟ್ಟೆಯನ್ನು ಹಗುರವಾಗಿರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಕಬ್ಬಿನ ರಸವನ್ನು ಸೇವಿಸುವುದು ಬಹಳ ಉತ್ತಮ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.