ಬೆಂಗಳೂರು : ಇದೀಗ ಪೇರಳೆ ಹಣ್ಣಿನ ಸೀಸನ್.  ಮಾರುಕಟ್ಟೆಯಲ್ಲಿ ಸುಲಭವಾಗಿ  ಪೇರಳೆ ಹಣ್ಣು ಸಿಗುತ್ತದೆ. ಪೋಷಕಾಂಶಗಳಿಂದ ಕೂಡಿದ ಪೇರಳೆ  ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಇದು ವಿಟಮಿನ್ ಸಿ, ಲೈಕೋಪೀನ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಪೇರಳೆ ಹಣ್ಣಿನಲ್ಲಿ ಕಂಡುಬರುವ ಮ್ಯಾಂಗನೀಸ್ ಆಹಾರದಲ್ಲಿರುವ ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಕಂಡುಬರುವ ಫೋಲೇಟ್ ಪ್ರಜನನ ಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಆದರೆ ಪೇರಳೆಯಲ್ಲಿ ಕೂಡಾ ಎರಡು ವಿಧಗಳಿವೆ. ಇಂದು ಬಿಳಿ ಬಣ್ಣದ ಪೇರಳೆ, ಇನ್ನೊಂದು ಕೆಂಪು ಬಣ್ಣದ ಪೇರಳೆ. ಹಾಗಾಗಿ ಇವೆರಡರಲ್ಲಿ ಆರೋಗ್ಯಕ್ಕೆ  ಹೆಚ್ಚು ಪ್ರಯೋಜನಕಾರಿ ಯಾವುದು ಎನ್ನುವ ಪ್ರಶ್ನೆ ಮೂಡುವುದು ಕೂಡಾ ಸಹಜ.   ಈ ಪ್ರಶ್ನೆಗೆ ಉತ್ತರ ಇಲ್ಲಿದೆ.. 


COMMERCIAL BREAK
SCROLL TO CONTINUE READING

ಪೇರಳೆ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ :
ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸರಿಪಡಿಸಲು ಪೇರಳೆ  ಹಣ್ಣು  ಸಹಾಯ ಮಾಡುತ್ತದೆ ಎನುತ್ತಾರೆ ಆಹಾರ ತಜ್ಞರು. ಪೇರಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡು ಬರುತ್ತದೆ. ಇದು ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯ.  ಇದರ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ಇದರೊಂದಿಗೆ, ತೂಕ ನಷ್ಟ ಮಾಡಲು ಯತ್ನಿಸುವವರಿಗೂ ಇದು ಪ್ರಯೋಜನಕಾರಿಯಾಗಿರಲಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ : Basil Seeds: ಕಾಮ ಕಸ್ತೂರಿ ಬೀಜದಲ್ಲಿದೆ ಆರೋಗ್ಯದ ನಿಧಿ.. ಅನೇಕ ರೋಗಗಳಿಗೆ ಇದೇ ಮದ್ದು!


ಬಿಳಿ ಮತ್ತು ಗುಲಾಬಿ ಪೇರಳೆಯಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ?
ಗುಲಾಬಿ ಪೇರಳೆ ಬಿಳಿ ಪೇರಳೆಗಿಂತ ಕಡಿಮೆ ಪ್ರಮಾಣದ ಸಕ್ಕರೆ ಮತ್ತು ಪಿಷ್ಟವನ್ನು ಹೊಂದಿರುತ್ತದೆ. ಆಂಟಿಆಕ್ಸಿಡೆಂಟ್ ಗುಣಗಳು ಗುಲಾಬಿಗಿಂತ ಬಿಳಿ ಪೇರಳೆಯಲ್ಲಿ ಹೆಚ್ಚು ಕಂಡುಬರುತ್ತವೆ. ಆದರೆ ಆಹಾರ ತಜ್ಞರ ಪ್ರಕಾರ, ಗುಲಾಬಿ ಪೇರಳೆ ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಟಮಿನ್ ಎ ಮತ್ತು ಸಿ ಗುಲಾಬಿ ಪೇರಳೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದರೊಂದಿಗೆ ಒಮೆಗಾ 3 ಮತ್ತು ಒಮೆಗಾ 6, ಬಹು ಅಪರ್ಯಾಪ್ತ ಕೊಬ್ಬಿನಾಮ್ಲಗಳು ಸಹ ಕಂಡುಬರುತ್ತವೆ. ಒಮೆಗಾ 3 ಮತ್ತು ಒಮೆಗಾ 6 ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಂಡುಬರುವ ಫೈಬರ್ ಮಧುಮೇಹ ರೋಗಿಗಳಿಗೆ ಬಲು ಸಹಾಯಕ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ. 


ಇದನ್ನೂ ಓದಿ : ಕಾಫಿ ಪ್ರಿಯರಿಗೆ ಗುಡ್ ನ್ಯೂಸ್ .! ಕಾಫಿ ಕುಡಿದರೆ ಹೆಚ್ಚುವುದಂತೆ ಜೀವಿತಾವಧಿ .!


 



( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.