ಕಾಫಿ ಪ್ರಿಯರಿಗೆ ಗುಡ್ ನ್ಯೂಸ್ .! ಕಾಫಿ ಕುಡಿದರೆ ಹೆಚ್ಚುವುದಂತೆ ಜೀವಿತಾವಧಿ .!

Benifits Of Drinking Coffee:ಕಾಫಿ ಕುಡಿಯದವರಿಗಿಂತ ಸಕ್ಕರೆ ಇಲ್ಲದೆ ಕಾಫಿ ಸೇವಿಸುವವರ ಜೀವಿತಾವಧಿ 16 ರಿಂದ 21 ಶೇ ದಷ್ಟು ಹೆಚ್ಚು ಎನ್ನುವುದನ್ನು ಈ ಸಂಶೋಧನೆಯಿಂದ  ಕಂಡುಕೊಳ್ಳಲಾಗಿದೆ.

Written by - Ranjitha R K | Last Updated : Sep 19, 2022, 11:32 AM IST
  • ಪ್ರತಿದಿನ ಕಾಫಿ ಕುಡಿಯುವುದು ಅನೇಕ ಜನರ ದಿನಚರಿಯ ಭಾಗವಾಗಿರುತ್ತದೆ.
  • ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ
  • ಆದರೆ ಸಂಶೋಧನೆಯಲ್ಲಿ ಬೇರೊಂದೇ ವಿಚಾರ ಬೆಳಕಿಗೆ ಬಂದಿದೆ
ಕಾಫಿ ಪ್ರಿಯರಿಗೆ ಗುಡ್ ನ್ಯೂಸ್ .! ಕಾಫಿ ಕುಡಿದರೆ ಹೆಚ್ಚುವುದಂತೆ ಜೀವಿತಾವಧಿ .!  title=
Benifits Of Drinking Coffee (file photo)

Benifits Of Drinking Coffee : ಪ್ರತಿದಿನ ಕಾಫಿ ಕುಡಿಯುವುದು ಅನೇಕ ಜನರ ದಿನಚರಿಯ ಭಾಗವಾಗಿರುತ್ತದೆ. ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಅನೇಕರು ಹೇಳಿರುವುದನ್ನು ನೀವು ಕೂಡಾ ಕೇಳಿರಬೇಕು. ಆದರೆ, ಇತ್ತೀಚಿನ ಸಂಶೋಧನೆಯೊಂದರಲ್ಲಿ, ಕಾಫಿಯ ದೈನಂದಿನ ಸೇವನೆಯ ಬಗ್ಗೆ ಹೊಸದೊಂದು ವಿಷಯ ಬೆಳಕಿಗೆ ಬಂದಿದೆ. 

ಕಾಫಿ ಕುಡಿಯುವುದರಿಂದ ಜೀವಿತಾವಧಿ ಹೆಚ್ಚಾಗುತ್ತದೆ : 
ಚೀನಾದ ಗುವಾಂಗ್‌ಝೌನಲ್ಲಿರುವ ದಕ್ಷಿಣ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಕಾಫಿ ಕುಡಿಯುವವರು, ಸಕ್ಕರೆ ಇಲ್ಲದೆ ಕಾಫಿ ಕುಡಿಯುವವರು ಮತ್ತು ಸಕ್ಕರೆ ಹಾಕಿ ಕಾಫಿ ಕುಡಿಯುವವರ ಆರೋಗ್ಯದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಈ ಪೈಕಿ ಸಕ್ಕರೆ ಇಲ್ಲದೇ ಕಾಫಿ ಕುಡಿಯುವವರ ಜೀವಿತಾವಧಿ ಹೆಚ್ಚಾಗುತ್ತದೆ ಎನ್ನುವುದು ಪತ್ತೆಯಾಗಿದೆ. ಕಾಫಿ ಕುಡಿಯುವುದರಿಂದ ಸಾವಿನ ಅಪಾಯವನ್ನು ಕಡಿಮೆಯಾಗುತ್ತದೆ, ಮಾತ್ರವಲ್ಲ ಏಳು ವರ್ಷಗಳವರೆಗೆ ವ್ಯಕ್ತಿಯ ಜೀವನವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ : ಟೈಪ್ 2 ಡಯಾಬಿಟಿಸ್‌ನಲ್ಲಿ ವೈಟ್ ರೈಸ್ ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಒಂದು ಲಕ್ಷಕ್ಕೂ ಹೆಚ್ಚು ಜನರ ಮೇಲೆ ಸಂಶೋಧನೆ : 
1,71,000 ಕ್ಕೂ ಹೆಚ್ಚು ಜನರ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ಸಂಶೋಧನೆಗೆ ಒಳಪಟ್ಟ ಜನರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದರು. ಅವರಿಗೆ ಯಾವುದೇ ರೀತಿಯ ಕಾಯಿಲೆ ಇರಲಿಲ್ಲ. ಕಾಫಿ ಕುಡಿಯದವರಿಗಿಂತ ಸಕ್ಕರೆ ಇಲ್ಲದೆ ಕಾಫಿ ಸೇವಿಸುವವರ ಜೀವಿತಾವಧಿ 16 ರಿಂದ 21 ಶೇ.ದಷ್ಟು ಹೆಚ್ಚು ಎನ್ನುವುದನ್ನು ಈ ಸಂಶೋಧನೆಯಿಂದ  ಕಂಡುಕೊಳ್ಳಲಾಗಿದೆ. ಇದಲ್ಲದೆ, ದಿನಕ್ಕೆ ಸಕ್ಕರೆಯೊಂದಿಗೆ ಸುಮಾರು 3 ಕಪ್ ಕಾಫಿ ಕುಡಿಯುವ ಜನರು, ಕಾಫಿ ಕುಡಿಯದವರಿಗಿಂತ ಸಾಯುವ ಸಾಧ್ಯತೆ 29 ರಿಂದ 31 ಪ್ರತಿಶತದಷ್ಟು ಕಡಿಮೆ ಎನ್ನುವುದನ್ನು ಕಂಡುಹಿಡಿಯಲಾಗಿದೆ. ಆದರೆ, ಇವರೆಲ್ಲರೂ ತಾವು ಕುಡಿಯುವ ಕಾಫಿಗೆ ಕೇವಲ ಒಂದು ಚಮಚ ಸಕ್ಕರೆಯಷ್ಟೇ ಬಳಸುತ್ತಿದ್ದರು. 

ಕಾಫಿ ಕುಡಿಯುವುದು ಕೆಟ್ಟದ್ದಲ್ಲ : 
ಈ ಅಧ್ಯಯನದಲ್ಲಿ, ಜನರು ತಮ್ಮ ಕಾಫಿಯಲ್ಲಿ ಪ್ರತಿದಿನ ಹಾಕುವ ಸಕ್ಕರೆಯ ಪ್ರಮಾಣವು ಯಾವುದೇ ರೆಸ್ಟೋರೆಂಟ್‌ನ ವಿಶೇಷ ಪಾನೀಯಗಳಿಗಿಂತ ಕಡಿಮೆಯಾಗಿದೆ ಎಂದು ಕಂಡುಬಂದಿದೆ. ಈ ಸಂಶೋಧನೆಯ ಆಧಾರದ ಮೇಲೆ, ಕಾಫಿ ಕುಡಿಯುವುದು ಕೆಟ್ಟದ್ದಲ್ಲ ಎಂದು ಹೇಳಬಹುದು. 

ಇದನ್ನೂ ಓದಿ : Hot Water side effects : ಅತಿಯಾದ ಬಿಸಿನೀರು ಸೇವನೆ ಈ ಸಮಸ್ಯೆಗೆ ಕಾರಣವಾದೀತು.. ಎಚ್ಚರ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.

 

Trending News