Tea: ಚಹಾ ಸೇವನೆಯಿಂದ ತೂಕ ಹೆಚ್ಚಾಗುತ್ತದೆಯೇ? ಇದರ ಹಿಂದಿನ ನಿಜಾಂಶ ಏನು?
Does Drinking Tea Cause Weight Gain: ಟೀ ಬಹುತೇಕ ಜನರ ನೆಚ್ಚಿನ ಮಾರ್ನಿಂಗ್ ಡ್ರಿಂಕ್ ಆಗಿದೆ. ಹೀಗಿರುವಾಗ ಟೀ ಸೇವನೆಯಿಂದ ತೂಕ ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Does Drinking Tea Cause Weight Gain: ನಮ್ಮ ದೇಶದಲ್ಲಿ ಚಹಾ ಬಹುತೇಕ ಬೆಳಗಿನ ಜಾವದ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ನಮ್ಮಲ್ಲಿ ಹೆಚ್ಚಿನವರು ನಮ್ಮ ದಿನವನ್ನು ಒಂದು ಕಪ್ ಚಹಾದೊಂದಿಗೆ ಆರಂಭಿಸುತ್ತಾರೆ. ಇದು ನಮಗೆ ಚೈತನ್ಯವನ್ನು ನೀಡುತ್ತದೆ. ಇದೇ ಕಾರಣದಿಂದ ಕೆಲವರು ದಿನಕ್ಕೆ 4 ರಿಂದ 5 ಕಪ್ ಚಹಾ ಕುಡಿಯುತ್ತಾರೆ. ಆದರೆ ಫಿಟ್ ಆಗಿರಲು, ಚಹಾವನ್ನು ತ್ಯಜಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಹಾಲಿನೊಂದಿಗೆ ಟೀ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಆದರೆ ಇದರ ಹಿಂದಿನ ನಿಜಾಂಶ ಏನು ಎಂದು ಯಾರಿಗೂ ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ಹೆಚ್ಚು ಚಿಂತಿಸಬೇಕಾಗಿಲ್ಲ ಏಕೆಂದರೆ ಚಹಾ ಕುಡಿಯುವುದರಿಂದ ತೂಕ ಅಥವಾ ಇಲ್ಲ ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.
ಟೀ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆಯೇ?
ಚಹಾದಿಂದ ತೂಕ ಹೆಚ್ಚಾಗುವುದು ಅದರಲ್ಲಿ ಬಳಸುವ ಪದಾರ್ಥಗಳ ಮೇಲೆ ಅವಲಂಭಿಸಿದೆ, ಚಹಾವನ್ನು ತಯಾರಿಸಲು ಹಾಲು ಮತ್ತು ಸಕ್ಕರೆಯನ್ನು ಬಳಸಲಾಗುತ್ತದೆ. ಏಕೆಂದರೆ ಈ ಪದಾರ್ಥಗಲಿಲ್ಲದೆ ಚಹಾ ಅಪೂರ್ಣ ಎನ್ನಲಾಗುತ್ತದೆ.ಆದರೆ ಈ ಎರಡೂ ಪದಾರ್ಥಗಳು ತೂಕ ಹೆಚ್ಚಳಕ್ಕೆ ಕಾರಣವಾಗಿವೆ. ಇನ್ನೊಂದೆಡೆ, ನೀವು ಕೊಬ್ಬಿನಂಶ ಹೆಚ್ಚಿರುವ ಹಾಲಿನ ಚಹಾವನ್ನು ಸೇವಿಸಿದರೆ, ಅದು ದೇಹದ ಕೊಬ್ಬು ಮತ್ತು ತೂಕವನ್ನು ಹೆಚ್ಚಿಸುತ್ತದೆ. ಹಾಲಿನಿಂದ ತಯಾರಿಸಲಾಗಿರುವ ಚಹಾಕ್ಕೆ ಅರ್ಧ ಟೀ ಚಮಚ ಸಕ್ಕರೆಯನ್ನು ಬೆರೆಸುವ ಮೂಲಕ ನಿತ್ಯ ಚಹಾವನ್ನು ಸೇವಿಸಿದರೆ, ಅದು ನಿಮ್ಮ ತೂಕವನ್ನು ವಾರ್ಷಿಕವಾಗಿ ಒಂದು ಕಿಲೋಗಳಷ್ಟು ಹೆಚ್ಚಿಸಬಹುದು ಎನ್ನಲಾಗಿದೆ. ಮತ್ತೊಂದೆಡೆ, ನೀವು ದಿನಕ್ಕೆ 2 ರಿಂದ 3 ಬಾರಿ ಚಹಾ ಸೇವಿಸಿದರೆ, ನಿಮ್ಮ ತೂಕ ಹೆಚ್ಚಾಗಬಹುದು.
ನೀವು ಫಿಟ್ ಆಗಿರಲು ಬಯಸಿದರೆ, ಚಹಾ ಕುಡಿಯುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
1. ಚಹಾದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ
ಸಿಹಿ ಇಲ್ಲದೆ ಚಹಾ ಅಪೂರ್ಣವಾಗಿದೆ. ಆದರೆ ನಿಮ್ಮ ಆರೋಗ್ಯಕ್ಕಾಗಿ, ನೀವು ಚಹಾದಲ್ಲಿ ಸಕ್ಕರೆಯನ್ನು ಬಳಸದಿರುವುದು ಅಥವಾ ಅದನ್ನು ತುಂಬಾ ಕಡಿಮೆ ಮಾಡುವುದು ಮುಖ್ಯ. ಅಲ್ಲದೆ, ನೀವು ಚಹಾದಲ್ಲಿ ಕೃತಕ ಪದಾರ್ಥಗಳನ್ನು ಬಳಸುತ್ತಿದ್ದರೆ, ಅದನ್ನು ಸಣ್ಣ ಪ್ರಮಾಣದಲ್ಲಿ ಸೇರಿಸಿ. ಇದಲ್ಲದೆ, ನೀವು ಚಹಾದಲ್ಲಿ ಜೇನುತುಪ್ಪ, ಬೆಲ್ಲವನ್ನು ಬಳಸಬಹುದು.
ಇದನ್ನೂ ಓದಿ-Lung Cancer: ದೇಹದಲ್ಲಿ ಈ ಬದಲಾವಣೆಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ
2. ಫ್ಯಾಟ್ ಪ್ರಮಾಣ ಅಧಿಕವಿರುವ ಹಾಲಿನ ಬಳಕೆಯನ್ನು ಕಡಿಮೆ ಮಾಡಿ
ನೀವು ಚಹಾವನ್ನು ಇಷ್ಟಪಡುತ್ತಿದ್ದರೆ ಮತ್ತು ಚಹಾವನ್ನು ತ್ಯಜಿಸಲು ಸಾಧ್ಯವಾಗದಿದ್ದರೆ, ನೀವು ಚಹಾದಲ್ಲಿ ಕಡಿಮೆ ಕೊಬ್ಬಿನಂಶ ಹೊಂದಿರುವ ಹಾಲನ್ನು ಬಳಸಬಹುದು. ಇದಲ್ಲದೆ, ಹಾಲಿನ ಪುಡಿ ಬಳಕೆಯನ್ನು ಆದಷ್ಟು ತಪ್ಪಿಸಿ.
ಇದನ್ನೂ ಓದಿ-Health Tips: ಮೊಸರಿನೊಂದಿಗೆ ಅಪ್ಪಿತಪ್ಪಿಯೂ ಕೂಡ ಇವುಗಳನ್ನು ಸೇವಿಸಬೇಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.