Middle Abdominal Pain: ಹೊಟ್ಟೆ ನೋವು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆಯು ನಿಮಗೆ ಪದೇ ಪದೇ ಪೀಡಿಸುತ್ತಿದ್ದರೆ, ಅದನ್ನು ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ. ಇಂತಹ ಪರಿಸ್ಥಿತಿಯಲ್ಲಿ, ಕಿಬ್ಬೊಟ್ಟೆಯ ನೋವಿಗೆ ಚಿಕಿತ್ಸೆ ನೀಡುವುದು ಅವಶ್ಯಕ. ಕಿಬ್ಬೊಟ್ಟೆಯ ನೋವು ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸಮಯದಲ್ಲಿ ಸಂಭವಿಸುವ ಸಾಧ್ಯತೆ ಇದೆ. ಆದರೆ ಕೆಲವರಿಗೆ ಹೊಟ್ಟೆಯ ಮಧ್ಯದಲ್ಲಿ ಯಾವಾಗಲೂ ಸೌಮ್ಯವಾದ ನೋವು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ತಪ್ಪಾಗಿಯೂ ಅದನ್ನು ನಿರ್ಲಕ್ಷಿಸಬೇಡಿ, ಹೊಟ್ಟೆಯ ಮಧ್ಯದಲ್ಲಿ ನೋವಿಗೆ ಕಾರಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಹೊಟ್ಟೆಯ ಮಧ್ಯ ಭಾಗದಲ್ಲಿನ ನೋವಿನ ಕಾರಣಗಳು
ಅಜೀರ್ಣ ಸಮಸ್ಯೆ

ಹೊಟ್ಟೆಯ ಮಧ್ಯದಲ್ಲಿ ಸೌಮ್ಯವಾದ ನೋವು ಕಾಣಿಸಿಕೊಳ್ಳುವುದು ಒಂದು ಅಜೀರ್ಣದ ಸಮಸ್ಯೆಯೂ ಆಗಿದೆ. ಆಹಾರ ಸರಿಯಾಗಿ ಜೀರ್ಣವಾಗದ ಕಾರಣ, ಹೊಟ್ಟೆಯ ಮೇಲ್ಭಾಗದಲ್ಲಿ ಸಾಕಷ್ಟು ಅಸ್ತ್ವಸ್ಥತೆ ಇರುತ್ತದೆ. ಈ ಕಾರಣದಿಂದಾಗಿ ನೀವು ಹೊಟ್ಟೆ ತುಂಬಿದ ಭಾವನೆ ಅನುಭವಿಸುವಿರಿ. ಹೀಗಾಗಿ ಹೊಟ್ಟೆ ನೋವು ಕಾಣಿಸಿಕೊಂಡರೆ ಅದನ್ನು ಎಂದಿಗೂ ಕೂಡ ನಿರ್ಲಕ್ಷಿಸಬೇಡಿ.

ಪಿತ್ತಕೋಶದ ಕಲ್ಲುಗಳು
ಪಿತ್ತಕೋಶದ ಕಲ್ಲು ಇದ್ದಾಗಲೂ ಹೊಟ್ಟೆಯ ಮಧ್ಯದಲ್ಲಿ ನೋವು ಉಂಟಾಗುತ್ತದೆ. ಏಕೆಂದರೆ ಪಿತ್ತಕೋಶದಲ್ಲಿ ಕಲ್ಲು ಇದ್ದಾಗ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಗ್ಯಾಸ್ ಉತ್ಪತ್ತಿಯಾಗುತ್ತದೆ, ಇದರಿಂದ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದ್ದರಿಂದ, ಹೊಟ್ಟೆಯಲ್ಲಿ ನೋವು ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ.

ಮೂತ್ರನಾಳದ ಹರಳುಗಳು
ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಹೊಟ್ಟೆಯ ಮಧ್ಯಭಾಗದಲ್ಲಿ ನೋವು ಅನುಭವಿಸುವ ಸಾಧ್ಯತೆ ಇದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಹೊಟ್ಟೆ ನೋವು ಮಾತ್ರವಲ್ಲ, ಜ್ವರವೂ ಬರಬಹುದು. ಹೀಗಾಗಿ ಅದನ್ನು ನಿರ್ಲಕ್ಷಿಸಬೇಡಿ.


ಇದನ್ನೂ ಓದಿ-Health Tips: ದೇಹದಲ್ಲಿನ ರಕ್ತದ ಕೊರತೆ ನೀಗಿಸಲು ಇಲ್ಲಿದೆ ಸೂಪರ್ ಫುಡ್

ಮೇದೋಜ್ಜೀರಕ ಗ್ರಂಥಿಯಲ್ಲಿ ಸಮಸ್ಯೆ
ಮೇದೋಜ್ಜೀರಕ ಗ್ರಂಥಿಯು ನಮ್ಮ ಹೊಟ್ಟೆಯಲ್ಲಿರುವ ಒಂದು ಪ್ರಮುಖ ಗ್ರಂಥಿಯಾಗಿದೆ. ಇದು ಗ್ಲೂಕೋಸ್ ಅನ್ನು ಉತ್ಪಾದಿಸಲು ನಮಗೆ ಸಹಾಯ ಮಾಡುತ್ತದೆ. ಇದರಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ನೀವು ಹೊಟ್ಟೆ ನೋವು ಅನುಭವಿಸಬಹುದು. ಈ ಕಾರಣದಿಂದಾಗಿ, ಹೊಟ್ಟೆಯ ಮಧ್ಯ ಭಾಗದಲ್ಲಿ ನೋವು ಇರುತ್ತದೆ. ಆದ್ದರಿಂದ ನಿರ್ಲಕ್ಷಿಸಬೇಡಿ.


ಇದನ್ನೂ ಓದಿ-Health Tips: ಸದಾ ಯಂಗ್ ಹಾಗೂ ಹೆಲ್ದಿಯಾಗಿರಲು ಯಾವ ವಯಸ್ಸಿಯಲ್ಲಿ ಏನು ಸೇವನೆ ಮಾಡಬೇಕು?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.