Health Tips: ನಿಮ್ಮ ತಲೆ ನೋವಿಗೆ ಕಾರಣವಾಗುವ 7 ಆಹಾರಗಳು ಇಲ್ಲಿವೆ ನೋಡಿ
ಕೆಲವು ಆಹಾರಗಳನ್ನು ತಿಂದ ನಂತರ ಜನರು ಆಗಾಗ್ಗೆ ತಲೆನೋವು ಅನುಭವಿಸುತ್ತಾರೆ. ವಿಶೇಷವಾಗಿ ಸಕ್ಕರೆ ಅಥವಾ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳಲ್ಲಿ ಹೆಚ್ಚಿನ ಆಹಾರಗಳು ನಿಮಗೆ ದೊಡ್ಡಮಟ್ಟದ ತಲೆನೋವು ತರಬಹುದು. ಹೀಗಾಗಿ ಸೇವಿಸುವ ಆಹಾರದ ಬಗ್ಗೆ ನೀವು ಹೆಚ್ಚಿನ ಗಮನಹರಿಸಬೇಕು.
ನವದೆಹಲಿ: ಇಂದು ಬಹುತೇಕರು ದೀರ್ಘಕಾಲದ ತಲೆನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಒತ್ತಡವೇ ಪ್ರಮುಖ ಕಾರಣವೆಂದು ತಿಳಿದುಕೊಂಡಿರುತ್ತಾರೆ. ಆದರೆ ನಾವು ಪ್ರತಿದಿನವೂ ಸೇವಿಸುವ ಆಹಾರ ಕೂಡ ತಲೆನೋವಿಗೆ ಕಾರಣವಾಗುತ್ತವೆ ಅಂದರೆ ನೀವು ನಂಬುತ್ತೀರಾ. ಹೌದು, ನೀವು ನಂಬಲೇಬೇಕು. ನಾವು ಪ್ರತಿದಿನ ಸೇವಿಸುವ ಆಹಾರಗಳು ನಮ್ಮ ತಲೆನೋವಿಗೆ ಕಾರಣವಾಗುತ್ತದೆ. ಹೀಗಾಗಿ ನಾವು ಈ ಆಹಾರಗಳಿಂದ ಆದಷ್ಟು ದೂರವಿರುವುದು ಒಳಿತು.
ನೀವು ಏನಾದರೂ ಪದೇ ಪದೇ ಮೈಗ್ರೇನ್ ರೋಗಲಕ್ಷಣಗಳನ್ನು ಅನುಭವಿಸಿದರೆ ಕೂಡಲೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ. ಪೌಷ್ಟಿಕ ತಜ್ಞರ ಸಲಹೆ ಕೂಡ ನೀವು ಪಡೆದುಕೊಳ್ಳಬೇಕು. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ತಲೆನೋವು ಬರಬಹುದು. ಈ ಬಗ್ಗೆ ಪೌಷ್ಟಿಕ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನು ನೀವು ತಿಳಿದುಕೊಳ್ಳಬೇಕು.
ಇದನ್ನೂ ಓದಿ: Cholesterol: ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಈ ರೋಗಗಳ ಅಪಾಯವೂ ಹೆಚ್ಚಾಗುತ್ತದೆ!
ನಿಮಗೆ ತಲೆನೋವು ನೀಡುವ 7 ಆಹಾರಗಳು
ರೆಡ್ ವೈನ್: ಇದು ಸಾಮಾನ್ಯವಾಗಿ ಸಾಮರ್ಥ್ಯವನ್ನು ಅವಲಂಬಿಸಿ ನಿಮಗೆ ತಲೆನೋವನ್ನು ನೀಡುತ್ತದೆ.
ಚೀಸ್: ಇದು ಟೈರಮೈನ್ ಹೊಂದಿರುತ್ತದೆ, ಇದು ರಕ್ತನಾಳಗಳನ್ನು ಸಂಕುಚಿತಗೊಳಿಸುವುದರಿಂದ ತಲೆನೋವಿಗೆ ಕಾರಣವಾಗುತ್ತದೆ.
ಚಾಕೊಲೇಟ್: 4-5 ತುಂಡು ಅಥವಾ ಇಡೀ ಚಾಕೊಲೇಟ್ ಅನ್ನು ಒಬ್ಬರೇ ತಿನ್ನುವುದು ಸರಿಯಲ್ಲ. ಕೆಫೀನ್ ಮತ್ತು ಟೈರಮೈನ್ ಒಳಗೊಂಡಿರುವ ಚಾಕೊಲೇಟ್ ನಿಮಗೆ ತಲೆನೋವು ನೀಡಬಹುದು.
ಹಾಲು: ವಿಶೇಷವಾಗಿ ನೀವು ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿದ್ದರೆ ತಲೆನೋವುಗೆ ಇದು ಸಾಮಾನ್ಯ ಪ್ರಚೋದಕವೆಂದು ಪರಿಗಣಿಸಲಾಗುತ್ತದೆ.
ಸಿಟ್ರಸ್ ಹಣ್ಣುಗಳು: ಇವು ಆಕ್ಟೋಪಮೈನ್ ಹೊಂದಿರುತ್ತವೆ, ಇದು ತಲೆನೋವನ್ನು ಪ್ರಚೋದಿಸುತ್ತದೆ. ಆಮ್ಲೀಯ ಹಣ್ಣುಳಾದ ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಹಣ್ಣುಗಳಿಂದಲೂ ನಿಮಗೆ ತಲೆನೋವು ಬರಬಹುದು.
ಕೃತಕ ಸಿಹಿತಿಂಡಿಗಳು: ಇವುಗಳು ಆಸ್ಪರ್ಟೇಮ್ ಹೊಂದಿರುತ್ತವೆ, ಇದು ಡೋಪಮೈನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ತಲೆನೋವಿಗೆ ಕಾರಣವಾಗುತ್ತದೆ.
ಇತರೆ: ಎಲೆಕೋಸು, ಬದನೆಕಾಯಿ, ಕ್ಯೂರ್ಡ್ ಮೀಟ್ಸ್, ಕ್ಯಾನ್ಡ್ ಫಿಶ್ ಮತ್ತು ಕಡಲೆಕಾಯಿಗಳು ತಲೆನೋವನ್ನುಂಟುಮಾಡುವ ಕೆಲವು ಆಹಾರಗಳಾಗಿವೆ. ಆದಷ್ಟು ಇವುಗಳನ್ನು ಸೇವಿಸುವುದನ್ನು ನೀವು ತಪ್ಪಿಸಬೇಕು.
‘ಅತಿಯಾದರೆ ಅಮೃತವೂ ವಿಷ’ ಎಂಬ ಗಾದೆ ಮಾತಿನಂತೆ ಹಿತಮಿತವಾಗಿ ಆಹಾರ ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಅತಿಯಾದರೆ ಸಮಸ್ಯೆಗಳು ಖಂಡಿತ ನಿಮ್ಮನ್ನು ಕಾಡುತ್ತವೆ. ಹೀಗಾಗಿ ನೀವು ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ಗಮನಹರಿಸಬೇಕು.
ಇದನ್ನೂ ಓದಿ: Cardamom Benefits : ಹೈ BP ನಿಯಂತ್ರಿಸಲು ಸಹಾಯಕ ಏಲಕ್ಕಿ : ಹೇಗೆ? ಇಲ್ಲಿದೆ ನೋಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.